ಬಿಐಇಸಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 15ನೇ ಎಸ್‌ಇಎಸ್-2026 ಶೃಂಗಸಮ್ಮೇಳನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.  
ರಾಜ್ಯ

ಕರ್ನಾಟಕ ಪ್ರತಿಭಾನ್ವಿತರ ತಯಾರಿಕಾ ಕೇಂದ್ರ; ಸಿಎಂ ಡಿ.ಕೆ.ಶಿವಕುಮಾರ್ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಪ್ರತಿಭಾನ್ವಿತರನ್ನು ತಯಾರಿಸುವ ಕೇಂದ್ರ
  • ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣನೆ
  • ರಕ್ಷಣೆ ಹಾಗೂ ಏರೋಸ್ಪೇಸ್ ಕ್ಷೇತ್ರದ 15ನೇ ಎಸ್‌ಇಎಸ್ ಸಮ್ಮಿಟ್

ಬೆಂಗಳೂರು: ಕರ್ನಾಟಕಪ್ರತಿಭಾನ್ವಿತ ಮಾನವ ಸಂಪನ್ಮೂಲತಯಾರಿಸುವ ಕೇಂದ್ರವಾಗಿದ್ದು,ಇಲ್ಲಿರುವ ಮಾನವಸಂಪನ್ಮೂಲ,ಹವಾಮಾನ ಹಾಗೂಸಂಸ್ಕೃತಿಗೆ ದೇಶದ ಬೇರೆ ಯಾವುದೇನಗರಗಳೂ ಸಾಟಿಯಾಗಲಾರವು ಎಂದುಸಿಎಂ ಡಿ.ಕೆ.ಶಿವಕುಮಾರ್ಬಣ್ಣಿಸಿದ್ದಾರೆ.

ತುಮಕೂರುರಸ್ತೆಯಲ್ಲಿರುವ ಬೆಂಗಳೂರುಅಂತರರಾಷ್ಟ್ರೀಯ ವಸ್ತುಸಂಗ್ರಹಕೇಂದ್ರ (ಬಿಐಇಸಿ)ದಲ್ಲಿಗುರುವಾರ ನಡೆದ ರಕ್ಷಣೆ ಹಾಗೂಏರೋಸ್ಪೇಸ್ ಕ್ಷೇತ್ರದ 15ನೇಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ಸಮಿಟ್ (ಎಸ್‌ಇಎಸ್)ನಲ್ಲಿಭಾಗವಹಿಸಿ ಮಾತನಾಡಿದರು.

ಇಂದುಎಲೆಕ್ಟ್ರಾನಿಕ್ಸೃ್ ಕೇವಲನಗರಗಳಿಗೆ ಸೀಮಿತವಾಗಿಲ್ಲ.ಕರ್ನಾಟಕದಲ್ಲಿ250 ಇಂಜಿನಿಯರಿಂಗ್ಕಾಲೇಜುಗಳಿದ್ದು,ಪ್ರತಿ ವರ್ಷ 1ಲಕ್ಷಕ್ಕೂ ಹೆಚ್ಚುಇಂಜಿನಿಯರ್‌ಗಳನ್ನು ತಯಾರಾಗುತ್ತಿದ್ದಾರೆ.ಕರ್ನಾಟಕ ಮಾನವಸಂಪನ್ಮೂಲದ ತಯಾರಿಕಾ ಕೇಂದ್ರವಾಗಿದೆ.ಇದೇ ಕಾರಣಕ್ಕೆನೆಹರೂ ಅವರು ಬೆಂಗಳೂರಿನಲ್ಲಿರಕ್ಷಣಾ ಕ್ಷೇತ್ರದ ಉತ್ಪಾದನೆ,ಇಂಡಿಯನ್ಇನ್ಸ್ಟಿಟ್ಯೂಟ್ ಆಫ್ ಸೈನ್ಸ್,ಹೆಚ್‌ಎಎಲ್,ಇಸ್ರೋ,ಐಐಟಿ,ಬಿಹೆಚ್‌ಇಎಲ್ಸೇರಿದಂತೆ ಪ್ರಮುಖ ಸಾರ್ವಜನಿಕಉದ್ಯಮಗಳನ್ನು ಸ್ಥಾಪಿಸಿದ್ದರು.

ಬಿಹಾರ,ಉತ್ತರ ಪ್ರದೇಶ,ಮಹಾರಾಷ್ಟ್ರ,ದೆಹಲಿಯಿಂದವಿದ್ಯಾರ್ಥಿಗಳು ಇಲ್ಲಿಗೆ ಬಂದುವಿದ್ಯಾಭ್ಯಾಸ ಪಡೆದಿದ್ದಾರೆ.ಹೀಗಾಗಿ ಬೆಂಗಳೂರುಎಲೆಕ್ಟ್ರಾನಿಕ್ಸೃ್,ಏರೋಸ್ಪೇಸ್,ರಕ್ಷಣಾ ವಲಯದಕ್ಷೇತ್ರಗಳಿಗೆ ಹೆಸರುವಾಸಿಯಾಗಿದೆ.ತಂತ್ರಜ್ಞಾನ,ಸಂಶೋಧನೆ ಹಾಗೂನಾವಿನ್ಯತೆಯಲ್ಲಿ ಕರ್ನಾಟಕಮುಂಚೂಣಿಯಲ್ಲಿದೆ.ರಕ್ಷಣಾ ವಲಯದಲ್ಲಿಕಾರ್ಯನಿರ್ವಹಿಸುವ ಉದ್ಯಮಿಗಳಿಗೆ25 ಕೋಟಿಯಷ್ಟುಸಬ್ಸಿಡಿ ನೀಡಲು ಮುಂದಾಗಿರುವಕೇಂದ್ರ ಸರ್ಕಾರದ ನಿರ್ಧಾರವನ್ನುಸಿಎಂ ಸ್ವಾಗತಿಸಿದರು.

ಬೆಂಗಳೂರುಜಾಗತಿಕ ನಗರ

ಅಮೆರಿಕಹೊರತುಪಡಿಸಿ ಗೂಗಲ್ ಸಂಸ್ಥೆಯಅತಿ ದೊಡ್ಡ ಕ್ಯಾಂಪಸ್ ಇರುವುದುಬೆಂಗಳೂರಿನಲ್ಲಿ.ಕಳೆದ ವರ್ಷಪ್ರಧಾನಿ ಮೋದಿ ಅವರು ಆಗಮಿಸಿದ್ದಾಗ,ಬೆಂಗಳೂರು ಜಾಗತಿಕನಗರವಾಗಿದೆ ಎಂದು ಹೇಳಿದ್ದರು.ನಾವು ಎಐಕ್ಷೇತ್ರಗಳಲ್ಲೂ ಮುಂಚೂಣಿಸಾಧಿಸುತ್ತಿದ್ದು,ಶಿಕ್ಷಣದಲ್ಲಿಎಐ ಬಳಕೆಗೆ ಮುಂದಾಗಿದ್ದೇವೆ.ಉದ್ಯಮಿಗಳು,ಸರ್ಕಾರ ಎಲ್ಲರೂಒಂದಾಗಿ ಇತಿಹಾಸ ಸೃಷ್ಟಿಸಬೇಕು.ಈ ನಿಟ್ಟಿನಲ್ಲಿಸರ್ಕಾರ ನಿಮ್ಮ ಜೊತೆಗಿರಲಿದೆಎಂದು ಉದ್ಯಮಿಗಳಿ ಸಿಎಂ ಭರವಸೆನೀಡಿದರು.