ಬೈಕ್​ ಟ್ಯಾಕ್ಸಿಗೆ ಹೈಕೋರ್ಟ್​ನಿಂದ ಗ್ರೀನ್ ಸಿಗ್ನಲ್​  
ರಾಜ್ಯ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಗ್ರೀನ್​ ಸಿಗ್ನಲ್​; ಕಡೆಗೂ ಅನುಮತಿ ನೀಡಿದ ಹೈಕೋರ್ಟ್, ಆದರೆ ಒಂದು ಕಂಡೀಷನ್​!

ಪ್ರಮುಖ ಮುಖ್ಯಾಂಶಗಳು

  • ಬೈಕ್​ ಟ್ಯಾಕ್ಸಿ ನಿಷೇಧಕ್ಕೆ ಕಡೆಗೂ ಬಿತ್ತು ಬ್ರೇಕ್​
  • ಇಂದಿನ ವಿಚಾರಣೆಯಲ್ಲಿ ನಿಷೇಧ ಎತ್ತಿಹಿಡಿದ ಹೈಕೋರ್ಟ್​ ಏಕಸದಸ್ಯ ಪೀಠ
  • ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠದಿಂದ ತೀರ್ಪು
  • ಬೈಕ್​ನ ಟ್ಯಾಕ್ಸಿ ಆಗಿ ಬಳಸಲು ಸರ್ಕಾರಕ್ಕೆ ಮಾಲೀಕರು ಮನವಿ ಸಲ್ಲಿಸಬೇಕೆಂದ ನ್ಯಾಯಾಲಯ
ಬೆಂಗಳೂರು: ರಾಜ್ಯದಲ್ಲಿ ಬೈಕ್ಸ್​ ಟ್ಯಾಕ್ಸಿ ಸೇವೆಗೆ ಕಡೆಗೂ ಹೈಕೋರ್ಟ್​ ಅನುಮತಿ ನೀಡಿದ್ದು, ಕಡೆಗೂ ಸಂಸ್ಥೆಗಳು ಸಲ್ಲಿಸಿದ್ದ ಮನವಿಯನ್ನು ಕೋರ್ಟ್​ ಪುರಸ್ಕರಿಸಿದೆ.
ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ ಏಕಸದಸ್ಯ ಪೀಠವು, ಬೈಕ್​ ಟ್ಯಾಕ್ಸಿ ನಿಷೇಧ ಕುರಿತಂತೆ ಹೊರಡಿಸಿದ್ದ ಆದೇಶವನ್ನು ಇದೀಗ ರದ್ದುಗೊಳಿಸಿದೆ. ಈ ಮೂಲಕ ರಾಜ್ಯದಲ್ಲಿ ಬೈಕ್​ ಟ್ಯಾಕ್ಸಿ ಸೇವೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಏನದು ಸೂಚನೆಗಳು​?

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠವು ಈ ತೀರ್ಪನ್ನು ನೀಡಿದೆ. ಓಲಾ, ಊಬರ್ ಮತ್ತು ಇತರ ಅಗ್ರಿಗ್ರೇಟ್ ಕಂಪನಿಗಳು ಸಲ್ಲಿಸಿದ ಮೇಲ್ಮನವಿಯನ್ನು ಕಡೆಗೂ ಪುರಸ್ಕರಿಸಿದ ನ್ಯಾಯಾಲಯ, ಬೈಕ್ ಅನ್ನು ಟ್ಯಾಕ್ಸಿ ಆಗಿ ಬಳಸಲು ಸರ್ಕಾರಕ್ಕೆ ಮಾಲೀಕರು ಮನವಿ ಸಲ್ಲಿಸಬೇಕು. ಕಾನೂನು ಪ್ರಕಾರ ಅದಕ್ಕೆ ಪರವಾನಿಗೆ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪ್ರತಿ ವಾಹನವು ಸರ್ಕಾರದ ಮೊರೆ?

ಈ ಮೊದಲು ಕೇವಲ ಬೈಕ್​ ಟ್ಯಾಕ್ಸಿ ಅಗ್ರಿಗ್ರೇಟ್ ಕಂಪನಿಗಳ ಆ್ಯಪ್​ ಮೂಲಕ ಚಾಲಕರು ಲಾಗಿನ್ ಆಗುತ್ತಿದ್ದರು. ಆದರೀಗ, ಹೈಕೋರ್ಟ್ ತೀರ್ಪಿನಲ್ಲಿ ಬೈಕ್​ ಟ್ಯಾಕ್ಸಿ ಮಾಡುವವರು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂಬುದು ಯಾವ ರೀತಿಯಲ್ಲಿ ಅನ್ವಯಿಸಲಿದೆ ಎಂಬ ಪ್ರಶ್ನೆ ಕಾಡುತ್ತಿದೆ.

ನ್ಯಾಯಾಲಯ ಹೇಳಿದ್ದೇನು?

1988ರ ಮೋಟಾರು ವಾಹನ ಕಾಯ್ದೆಯಡಿ ಮೋಟಾರ್ ಸೈಕಲ್‌ಗಳು ಸಾರಿಗೆ ವಾಹನಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ಕಾರ ವಾದಿಸಿತ್ತು. ಇದನ್ನು ನ್ಯಾಯಾಲಯ ಇದೀಗ ನಿರಾಕರಿಸಿದೆ. ಬೈಕ್​ ಮಾಲೀಕರು ತಮ್ಮ ವಾಹನಗಳನ್ನು ಕಾಂಟ್ರಾಕ್ಟ್ ಕ್ಯಾರೇಜ್ ಆಗಿ ನೋಂದಾಯಿಸಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

ಅನುಮತಿ ನಿರ್ಧರಿಸುವ ಹಕ್ಕಿದೆ

ಸುರಕ್ಷತಾ ಕ್ರಮಗಳು ಮತ್ತು ಪ್ರೋಟೋಕಾಲ್​ಗಳನ್ನು ಪರಿಗಣಿಸಿ ಸರ್ಕಾರ ಅನುಮತಿ ನೀಡುವ ಹಕ್ಕಿದೆ. ಆದರೆ, ಅದು ಬೈಕ್​ ಎಂಬ ಒಂದೇ ಕಾರಣಕ್ಕೆ ಅನುಮತಿ ನಿರಾಕರಿಸುವಂತಿಲ್ಲ. ಸುರಕ್ಷತಾ ಕ್ರಮ, ನಿಯಮಗಳನ್ನು ಅಳವಡಿಸಿ ಒಪ್ಪಿಗೆ ಕೊಡುವುದು ಸೂಕ್ತ ಎನ್ನಲಾಗಿದೆ.

ಬ್ಯಾನ್ ಆಗಿದ್ದು ಯಾವಾಗ?​

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಕಳೆದ ವರ್ಷ ಜೂನ್ 16ರಿಂದ ಬ್ಯಾನ್​ ಮಾಡಲಾಯಿತು. ಇದರಿಂದ ಈ ಸೇವೆಯನ್ನು ಅವಲಂಬಿಸಿದ್ದ ಅನೇಕ ಮಂದಿ ಬೇರೆ ವಾಹನಗಳ ಕಡೆ ಮುಖ ಮಾಡಿದ್ದರು. ಇದರ ಪರಿಣಾಮ ಆಟೋ ರಿಕ್ಷಾದವರು ಕೂಡ ದರವನ್ನು ಹೆಚ್ಚಿಗೆ ಮಾಡಿದರು. ಇದು ವ್ಯಾಪಕ ಆಕ್ರೋಶಕ್ಕೂ ಗುರಿಯಾಯಿತು.