ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್
- ಫಿಫಾ ವಿಶ್ವಕಪ್ ಪಂದ್ಯಗಳ ಹಿನ್ನೆಲೆಯಲ್ಲಿ ಮಧ್ಯರಾತ್ರಿಯವರೆಗೆ ರೆಸ್ಟೋರೆಂಟ್ಗಳು ಓಪನ್
- ಜುಲೈ 14, 15 ಹಾಗೂ 19ರಂದು ಈ ಆದೇಶ ಜಾರಿ
ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಫಿಫಾ 2026ರ ವಿಶ್ವಕಪ್ ಟೂರ್ನಿಯ ಕೊನೆಯ ಹಂತದ ಪಂದ್ಯಗಳು ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ಫುಟ್ಬಾಲ್ ಪ್ರೇಮಿಗಳಿಗೆ ರಾಜ್ಯ ಸರ್ಕಾರ ಕೆಲವು ದಿನಗಳಿಗೆ ಮಾತ್ರ ತಡರಾತ್ರಿ ಬೆಂಗಳೂರಿನ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಸೇವೆ ಒದಗಿಸಲು ಅನುಮತಿ ನೀಡಿದೆ.
ಪಂದ್ಯ ನಡೆಯುವ ಮೂರು ದಿನಗಳು ಮಧ್ಯರಾತ್ರಿ 3.30ರ ವರೆಗೆ ಹೊಟೇಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಆಹಾರ ಸೇವೆಗೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ ಮನವಿಯ ಹಿನ್ನೆಲೆಯಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿರುವ ಜುಲೈ 14, 15 ಹಾಗೂ 19ರಂದು ಈ ಆದೇಶ ಅನ್ವಯವಾಗುವಂತೆ ಸರ್ಕಾರ ನಿರ್ಧರಿಸಿದೆ.
ಸಾರ್ವಜನಿಕ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ನಾಗರಿಕರ ಅನುಕೂಲವು ನಮ್ಮ ಆದ್ಯತೆ. ಪ್ರತಿಯೊಬ್ಬರೂ ಪಂದ್ಯಗಳನ್ನು ಜವಾಬ್ದಾರಿಯುತವಾಗಿ ಆನಂದಿಸಿ ಮತ್ತು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ನೀಡಿ ಎಂದು ಸಿಎಂ ಡಿಕೆ ಶಿವಕುಮಾರ್ ಫುಟ್ವಾಲ್ ಪ್ರೇಮಿಗಳಿಗೆ ಕೇಳಿಕೊಂಡಿದ್ದಾರೆ. ಪಂದ್ಯಗಳು ನಡೆಯುವ ಈ ಮೂದು ದಿನಗಳು ರಾಜ್ಯ ಪೊಲೀಸ್ ಕಾಯ್ದೆ ಅನ್ವಯ ತಡರಾತ್ರಿ ಪಂದ್ಯ ಪ್ರದರ್ಶನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಆದೇಶಿಸಲಾಗಿದೆ.