ಗುಣಮಟ್ಟದ ಶಿಕ್ಷಣ ನೀಡಿ, ಅಭಿವೃದ್ಧಿಗೆ ನೆರವಾಗಿ ಎಂದ ಸಿಎಂ ಡಿಕೆ ಶಿವಕುಮಾರ್.
ನಿಮ್ಮಿಷ್ಟದ ಶಾಲೆ ಆಯ್ಕೆ ಮಾಡಿ, ಕಂಪ್ಯೂಟರ್, ನೈಪುಣ್ಯವುಳ್ಳ ಟೀಚರ್ ಕೊಡಿ.
ಮುಂಬಯಿಯಲ್ಲಿ ಕಚೇರಿ ತೆರೆದು, ಕರ್ನಾಟಕದಲ್ಲಿ ಕಂಪನಿ ನೋಂದಣಿ ಮಾಡಿಸಿ ಕಳ್ಳಾಟವಾಡುತ್ತಿರುವವರ ವಿರುದ್ಧ ಕ್ರಮ.
ಬೆಂಗಳೂರು: ನಮ್ಮ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಬದುಕಲ್ಲಿ ಉನ್ನತ ಸ್ಥಾನ ತರಬೇಕು. ಹೀಗಾಗಿ 2 ಸಾವಿರ ಸರ್ಕಾರಿ ಶಾಲೆಗಳನ್ನು ಈ ರೀತಿ ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಚಿಂತನೆ ಇದೆ. ಇದು ಕೇವಲ ಆರಂಭ 4-5 ವರ್ಷದ ಹೊತ್ತಿಗೆ ನಮ್ಮ ಪ್ರಯತ್ನಕ್ಕೆ ಒಳ್ಳೆಯ ಫಲ ದೊರೆಯಲಿದೆ ಎಂದು ಬುಧವಾರ ಡಿಕೆ ಸುರೇಶ್ ಅವರು ಒತ್ತಿ ಹೇಳಿದರು.
ವಿಧಾಸನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಬುಧವಾರ ನಡೆದ ಸಾಮಾಜಿಕ ಸಾಂಸ್ಥಿಕ ಹೊಣೆಹಾರಿಕಾ ಪ್ರತಿನಿಧಿಗಳ ಸಭೆಯಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಜಾರಿ ಮಾಡಿದೆ. ಇದರ ಅನುಸಾರ ಖಾಸಗಿ ಶಾಲೆಯ ಆಡಳಿತ ಮಂಡಳಿ, ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳಲು ಅಥವಾ ಅವುಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಗ್ರಾಮೀಣ ಪ್ರದೇಶದ ಮಕ್ಕಳು ಅಭಿವೃದ್ಧಿ ಹೊಂದಬೇಕು. ಗ್ರಾಮೀಣ ಪ್ರದೇಶದ ಪ್ರತಿಯೊಂದು ಮಗುವೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಮರ್ಥವಾಗಿರಬೇಕು. ಯಾವ ಶಾಲೆಯನ್ನು ದತ್ತು ಪಡೆದುಕೊಳ್ಳಬೇಕು ಎನ್ನುವ ತೀರ್ಮಾನವನ್ನು ಸರ್ಕಾರ ಮಾಡೋದಿಲ್ಲ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿ. 5-10 ಕೋಟಿ ರೂ. ಕೊಟ್ಟು ಕಟ್ಟಡ ಕಟ್ಟಡ ಕಟ್ಟಲು ಸಾಧ್ಯವಾಗದೇ ಹೋದರೆ ಪರವಾಗಿಲ್ಲ. ನಿಮ್ಮ ಬಳಿ ಇರುವ ಶಿಕ್ಷಕರನ್ನು ಸರ್ಕಾರಿ ಶಾಲೆಗೆ ಕೊಡಿ, ಸಂಬಳವನ್ನೂ ನೀವೆ ಕೊಡಿ ಆದರೆ, ಖಾಸಗಿ ಶಾಲಾ ಬಸ್ ಮಾರಾಟ ಮಾಡಬೇಡಿ. ಸರ್ಕಾರಿ ಶಾಲೆಗೆ ಕೊಡಿ, ಕಂಪ್ಯೂಟರ್ ಲ್ಯಾಬ್ ಸೌಲಭ್ಯ ಒದಗಿಸಿ ಎಂದರು.
ಬೆಂಗಳೂರು ದಕ್ಷಿಣದಲ್ಲಿ 30 ಶಾಲೆಗಳಲ್ಲಿ ಸಿಎಸ್ಆರ್ ನಿಧಿ ಬಳಸಿ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಅದರಲ್ಲಿ ಶೇ. 10 ಶಾಲೆಗಳ ಒಂದ ಮುಗಿದಿದೆ. ರಾಮನಗರದಲ್ಲಿ 23 ಶಾಲೆ ನಿರ್ಮಾಣಕ್ಕೆ ಟೊಯೋಟೋ ಕಂಪನಿ ನೆರವಾಗಿದೆ ಎಂದು ಹೇಳಿದರು. ಒಂದೊಂದು ಶಾಲೆಗೆ 10 ರಿಂದ 15 ಕೋಟಿ ಹೂಡಿಕೆ ಮಾಡುತ್ತಿದೆ. ಹೆಗ್ಗನೂರು ಬಳಿ ನಿರ್ಮಾಣವಾಗುತ್ತಿರುವ ಶಾಲೆಗೆ ಟೊಯೊಟೋ ಶಾಲೆ ಎಂದು ಹೆಸರಿಡಲು ಅವಕಾಶ ಕೊಟ್ಟಿದ್ದೇವೆ ಎಂದು ಅವರು ಹೇಳಿದರು.
ಮುಂಬೈನಲ್ಲಿ ಕಚೇರಿ ತೆರೆದು, ಬೆಂಗಳೂರಿನಲ್ಲಿ ನೋಂದಣಿ ಮಾಡಿಸಿಕೊಂಡು ಇಲ್ಲಿಂದ ಸಿಕ್ಕ ಲಾಭ ಪರ ರಾಜ್ಯಕ್ಕೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಗಳಿಗೆ ಹೊಸ ಬಲ, ಶಿಕ್ಷಣದ ಗುಣಮಟ್ಟಕ್ಕೆ ಮತ್ತಷ್ಟು ಬೆಂಬಲ
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ವೈಯಕ್ತಿಕ ಕೊಡುಗೆದಾರರ (Individual CSR) ಸಭೆಯಲ್ಲಿ ಪಾಲ್ಗೊಂಡು, 'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳ ಕುರಿತು ಚರ್ಚಿಸಿದೆ. ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇದರ ಭಾಗವಾಗಿ ಇಂದು ಒಟ್ಟು 15 ಸಂಸ್ಥೆಗಳೊಂದಿಗೆ 56 ಶಾಲೆಗಳ ಅಭಿವೃದ್ಧಿಗಾಗಿ ₹206.10 ಕೋಟಿ ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 2026ರಲ್ಲಿ ಈವರೆಗೆ 18 ಸಂಸ್ಥೆಗಳೊಂದಿಗೆ 33 ಶಾಲೆಗಳ ಅಭಿವೃದ್ಧಿಗೆ ₹85 ಕೋಟಿ ಮೌಲ್ಯದ ಒಪ್ಪಂದಗಳು ಈಗಾಗಲೇ ನಡೆದಿದ್ದು, ಇನ್ನೂ 12 ಸಂಸ್ಥೆಗಳೊಂದಿಗೆ 23 ಶಾಲೆಗಳ ಅಭಿವೃದ್ಧಿಗಾಗಿ ₹64 ಕೋಟಿ ಮೌಲ್ಯದ ಒಪ್ಪಂದಗಳು ಪ್ರಕ್ರಿಯೆಯಲ್ಲಿವೆ. ಒಟ್ಟಾರೆ, 45 ಸಂಸ್ಥೆಗಳು 112 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ₹355.10 ಕೋಟಿ ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಹಾಗೂ ಕೆಲವು ಒಪ್ಪಂದಗಳ ಪ್ರಕ್ರಿಯೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಚಿವರುಗಳು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಎಕ್ಸ್ನಲ್ಲಿ ಡಿಕೆ ಶಿವಕುಮಾರ್ ಅವರು ಬರೆದು ಕೊಂಡಿದ್ದಾರೆ(ಏಜೆನ್ಸೀಸ್).