ರಾಜ್ಯ

ಸ್ಮಿತ್ ಸಾಹಸಕ್ಕೆ ಜಗತ್ತೇ ಹೆಮ್ಮೆಪಡುತ್ತಿದೆ, ಕಾಂಗ್ರೆಸ್ಸಿಗರ ಗಂಟಲು ಕೆಟ್ಟಿದೆಯೇ..?: ವೋಟ್ ಬ್ಯಾಂಕ್ ರಾಜಕಾರಣದ ವಿರುದ್ಧ Karnataka BJP ಕಿಡಿ!

ಬೆಂಗಳೂರು: 33,000 ಅಡಿ ಎತ್ತರದಲ್ಲಿ ಮತಾಂಧನ ವಿರುದ್ಧ ಹೋರಾಡಿ 174 ಪ್ರಯಾಣಿಕರನ್ನು ರಕ್ಷಿಸಿದ ಹೆಮ್ಮೆಯ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ಇಡೀ ಜಗತ್ತೇ ಹೆಮ್ಮೆಪಡುತ್ತಿದೆ. ಆದರೆ, ಓಲೈಕೆ ರಾಜಕಾರಣದ ಪರಾಕಾಷ್ಠೆಯಲ್ಲಿ ಮುಳುಗಿರುವ ಕಾಂಗ್ರೆಸ್​ ವರಿಷ್ಠರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರಿಗೆ ಈ ವೀರನ ಕುರಿತು ಮಾತನಾಡದೆ ಇರುವುದಕ್ಕೆ ಗಂಟಲು ಕೆಟ್ಟಿದೆಯೇ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಬೆಂಗಳೂರು: 33,000 ಅಡಿ ಎತ್ತರದಲ್ಲಿ ಮತಾಂಧನ ವಿರುದ್ಧ ಹೋರಾಡಿ 174 ಪ್ರಯಾಣಿಕರನ್ನು ರಕ್ಷಿಸಿದ ಹೆಮ್ಮೆಯ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ಇಡೀ ಜಗತ್ತೇ ಹೆಮ್ಮೆಪಡುತ್ತಿದೆ. ಆದರೆ, ಓಲೈಕೆ ರಾಜಕಾರಣದ ಪರಾಕಾಷ್ಠೆಯಲ್ಲಿ ಮುಳುಗಿರುವ ಕಾಂಗ್ರೆಸ್​ ವರಿಷ್ಠರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರಿಗೆ ಈ ವೀರನ ಕುರಿತು ಮಾತನಾಡದೆ ಇರುವುದಕ್ಕೆ ಗಂಟಲು ಕೆಟ್ಟಿದೆಯೇ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ, ಓಲೈಕೆ ರಾಜಕಾರಣಕ್ಕಾಗಿ ಆತ್ಮಾಭಿಮಾನವನ್ನೇ ಮಾರಿಕೊಂಡ ಕಾಂಗ್ರೆಸ್ಸಿಗರಿಗೆ ಹೆಮ್ಮೆಯ ಭಾರತೀಯನ ಸಾಹಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಲು ವೋಟ್ ಬ್ಯಾಂಕ್ ರಾಜಕಾರಣ ಅಡ್ಡಿಯಾಯಿತೇ..? ಹಮಾಸ್‌ ಉಗ್ರರ ಪರ ಧ್ವನಿಯೆತ್ತುವ ಕೈ ನಾಯಕರುಗಳಿಗೆ ಸ್ಮಿತ್‌ ಮಚ್ಚಾರ್‌ ಶೌರ್ಯ ಕಣ್ಣಿಗೆ ಕಾಣಿಸಲಿಲ್ಲವೇ..? ಎಂದು ಪ್ರಶ್ನಿಸಿದೆ.

ಇದು ಕಾಂಗ್ರೆಸ್‌ನ ಕಡೆಗಣನೆ ಅಲ್ಲ, ಒಂದು ಸಮುದಾಯದ ಓಲೈಕೆಗಾಗಿ ದೇಶದ ಹೆಮ್ಮೆಯ ಮಗನನ್ನು ನಿರ್ಲಕ್ಷಿಸಿರುವ ಕಾಂಗ್ರೆಸ್ ನಾಯಕರ ಬೌದ್ಧಿಕ ದಿವಾಳಿತನ ಅಷ್ಟೇ ಎಂದು ಕರ್ನಾಟಕ ಬಿಜೆಪಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.

ಯಾರೀ ಸ್ಮಿತ್ ಮಚ್ಚರ್..?

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಅನುಭವಿ ಪೈಲಟ್ ಆಗಿದ್ದು, ಪ್ರಸ್ತುತ ದುಬೈ ಮೂಲದ ಫ್ಲೈದುಬೈ ಸಂಸ್ಥೆಯಲ್ಲಿ ನೇರ-ನೇಮಕಾತಿ (Direct-entry) ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಮಾಧ್ಯಮಗಳು ಉಲ್ಲೇಖಿಸಿರುವ ಅವರ ವೃತ್ತಿಪರ ಪ್ರೊಫೈಲ್ ಪ್ರಕಾರ, ಅವರು 13 ವರ್ಷಗಳಿಗೂ ಅಧಿಕ ವಾಣಿಜ್ಯ ವಿಮಾನಯಾನ ಅನುಭವವನ್ನು ಹೊಂದಿದ್ದು, ಹೆಚ್ಚಾಗಿ ಬೋಯಿಂಗ್ 737 ವಿಮಾನಗಳಲ್ಲಿ ಸುಮಾರು 9,750 ಗಂಟೆಗಳ ಕಾಲ ಹಾರಾಟ ನಡೆಸಿದ ಅನುಭವವನ್ನು ಹೊಂದಿದ್ದಾರೆ.

ಫ್ಲೈದುಬೈ ಸೇರುವ ಮೊದಲು ಮಚ್ಚರ್ ಭಾರತೀಯ ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ಜೆಟ್‌ನಲ್ಲಿ ಸುಮಾರು 11 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲಿ ತಮ್ಮ ಸೇವೆಯ ಅವಧಿಯಲ್ಲಿ ಅವರು ಹಿರಿಯ ಕಮಾಂಡರ್ ಆಗಿ ಮತ್ತು ನಂತರ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ (ಪೈಲಟ್‌ಗಳಿಗೆ ತರಬೇತಿ ಮತ್ತು ಮೌಲ್ಯಮಾಪನ ನೀಡುವ ಪಾತ್ರ) ಸೇವೆ ಸಲ್ಲಿಸಿದ್ದರು. ಅವರು ಜೂನ್ 2022 ರಲ್ಲಿ ಫ್ಲೈದುಬೈ ಸೇರಿದ್ದರು. ತಮ್ಮ ಮಗ ಗಾಯಗೊಂಡಿರುವ ಸುದ್ದಿ ತಿಳಿದು ಅವರ ಪೋಷಕರು ತಬುಕ್ ತೆರಳಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಮಚ್ಚರ್ ಅವರ ಸಹೋದರ ಕೂಡ ಇತ್ತೀಚೆಗೆ ಫ್ಲೈದುಬೈಗೆ ಪೈಲಟ್ ಆಗಿ ಸೇರಿದ್ದಾರೆ ಎಂದು ವರದಿಯಾಗಿದೆ, ಆದರೂ ಅವರು ಇನ್ನೂ ಹಾರಾಟ ಆರಂಭಿಸಿಲ್ಲ.

ಘಟನೆಯ ಹಿನ್ನಲೆ!

ದುಬೈನಿಂದ ಟೆಲ್ ಅವಿವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನ FZ1073 ಬುಧವಾರ ತುರ್ತು ಸಂಕೇತಗಳನ್ನು (Emergency signals) ರವಾನಿಸಿತು. ಸೌದಿ ಅರೇಬಿಯಾದ ತಬುಕ್ ನಗರದ ರಾಜಾ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ವಿಮಾನ ನಿಲ್ದಾಣಕ್ಕೆ ತಿರುಗಿಸಲ್ಪಡುವ ಮುನ್ನ, ಈ ವಿಮಾನವು 34,000 ಅಡಿಯಿಂದ 17,000 ಅಡಿಗಳಿಗೂ ಹೆಚ್ಚು ಎತ್ತರಕ್ಕೆ ತೀವ್ರವಾಗಿ ಇಳಿದಿತ್ತು (sharp descent). ಈ ವಿಮಾನದಲ್ಲಿ 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರಿದ್ದರು.

ವಿಮಾನವು ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು,ಯಾವೊಬ್ಬ ಪ್ರಯಾಣಿಕರಿಗೂ ಅಪಾಯವಾಗಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭದ್ರತಾ ಮುಖ್ಯಸ್ಥರ ಜೊತೆ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್​).