Karnataka Bank's contribution to the country's economy is immense 
ರಾಜ್ಯ

ದೇಶದ ಆರ್ಥಿಕತೆಗೆ ಕರ್ಣಾಟಕ ಬ್ಯಾಂಕ್​ ಕೊಡುಗೆ ಅಪಾರ

ಹುಳಿಯಾರು: ಗ್ರಾಮೀಣ ಬ್ಯಾಂಕ್​ಗಳು ಎಲ್ಲ ರೀತಿಯ ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಒದಗಿಸಿ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತಿವೆ ಎಂದು ತುಮಕೂರು ಕರ್ಣಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ರೂಪೇಶ್​ ಕುಮಾರ್​ ತಿಳಿಸಿದರು.
ಹುಳಿಯಾರು ಸಮೀಪದ ಕಂದಿಕೆರೆಯಲ್ಲಿ ಬ್ಯಾಂಕ್​ ಶಾಖೆಯ ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಸುಮಾರು ಐದು ದಶಕಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ಕಿಸಾನ್​ ಕ್ರೆಡಿಟ್​ ಕಾರ್ಡ್​, ಮುದ್ರಾ ಸಾಲಗಳು, ಸ್ವಸಹಾಯ ಸಂಘಗಳಿಗೆ, ಹೈನುಗಾರಿಕೆಗೆ, ಕೈಗಾರಿಕೋದ್ಯಮಿಗಳಿಗೆ, ಗೃಹಸಾಲ, ವಾಹನಸಾಲ ಸೌಲಭ್ಯ ಕಲ್ಪಿಸುತ್ತಿವೆ ಎಂದರು.
ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕಿ ಅಕ್ಷರಾ, ವ್ಯವಸ್ಥಾಪಕಿ ಲಕ್ಷಿ$್ಮಕರರೆಡ್ಡಿ, ಆರ್ಥಿಕ ಸಾಕ್ಷರತಾ ಕೇಂದ್ರದ ಸಮಲೋಚಕ ಆರ್​.ಎಂ.ಕುಮಾರಸ್ವಾಮಿ, ಕಂದಿಕೆರೆ ಕರ್ನಾಟಕ ಗ್ರಾಮೀಣ ಬ್ಯಾಂಕ್​ ಶಾಖೆಯ ಅಧಿಕಾರಿಗಳಾದ ಈರಣ್ಣ, ಜಯಸಿಂಹ, ಕ್ಯಾಶಿಯರ್​ ಕೋದಂಡರಾಮಯ್ಯ, ಸಿಬ್ಬಂದಿ ಅಶೋಕ್​, ವಿಜಯಲಕ್ಷಿ$್ಮ ಮತ್ತಿತರರು ಇದ್ದರು.