ನುಗ್ಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕಾರೆಕೆರೆ ಪ್ರಕಾಶ್ ಅವರನ್ನು ಶಾಸಕ ಸಿ.ಎನ್. ಬಾಲಕೃಷ್ಣ ಅಭಿನಂದಿಸಿದರು. ವಿನಯ್, ದೊರೆಸ್ವಾಮಿ, ಪುಟ್ಟಸ್ವಾಮಿ, ಎಚ್.ಬಿ.ರಂಗಸ್ವಾಮಿ, ಪಟೇಲ್ ಕುಮಾರ್, ಸಂಪತ್‌ಕುಮಾರ್, ವಿಕ್ಟರ್ ಇದ್ದರು.
- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
- ಅಧ್ಯಕ್ಷರಾಗಿ ಆಯ್ಕೆಯಾದ ಕಾರೆಕೆರೆ ಪ್ರಕಾಶ್
ನುಗ್ಗೇಹಳ್ಳಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕಾರೆಕೆರೆ ಪ್ರಕಾಶ್ ಅವರನ್ನು ಶಾಸಕ ಸಿ.ಎಸ್.ಬಾಲಕೃಷ್ಣ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, ಪ್ರಾಥಮಿಕ ಸಹಕಾರ ಸಂಘದ ವತಿಯಿಂದ 35 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ ಶೆಟ್ಟರ್ ಹಾಗೂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮೂರು ಬಾರಿ ಸಾಲ ಮನ್ನಾ ಮಾಡಲಾಗಿದ್ದು, ಇದರಿಂದ ಸಂಕಷ್ಟದಲ್ಲಿದ್ದ ಸಾವಿರಾರು ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಶಿಥಿಲವಾಗಿರುವ ಪಡಿತರ ವಿತರಣೆಯ ಗೋದಾಮು ಕಟ್ಟಡವನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಚುನಾವಣಾ ಅಧಿಕಾರಿ ವಿಜಯೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೆಳಗಳ್ಳಿ ಪುಟ್ಟಸ್ವಾಮಿ, ಉದ್ಯಮಿ ಜಗದೀಶ್, ಸಂಘದ ಕಾರ್ಯನಿರ್ವಹಣಾಧಿಕಾರಿ ಡಿ.ವಿನಯ್, ಕಾರ್ಯದರ್ಶಿ ಕೆ.ರುದ್ರೇಶ್, ಉಪಾಧ್ಯಕ್ಷ ಚಂದ್ರು, ಮುಖಂಡರಾದ ಎಚ್.ಬಿ.ರಂಗಸ್ವಾಮಿ, ಪಟೇಲ್‌ಕುಮಾರ್, ತೋಪೇಗೌಡ, ವಿಕ್ಟರ್, ಎಚ್.ಪಿ.ಸಂಪತ್‌ಕುಮಾರ್, ಕೃಷ್ಣೇಗೌಡ, ಕೋಮಲಾ ಕುಮಾರಸ್ವಾಮಿ, ಹಿರಿಯಣ್ಣಗೌಡ, ಯಲ್ಲಪ್ಪ, ಕೊಪ್ಪಲು ಮಂಜುನಾಥ ಸ್ವಾಮಿ, ನಟರಾಜ್ ಯಾದವ್, ಎನ್. ಎಸ್.ಗಿರೀಶ್, ಎನ್.ಎಸ್.ಚಂದ್ರಶೇಖರ್, ಯುವರಾಜ್, ಅಚ್ಚು, ಲೀಲಾ, ಭಾಗ್ಯಾ ಇತರರಿದ್ದರು.