ಶಿರಾ ನಗರದ ಕದಂಬ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕರಾಟೆ ಸ್ಪರ್ಧೆಯನ್ನು ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಭಾರ್ಗವ್ ರೆಡಿ ಉದ್ಘಾಟಿಸಿದರು. ಕರ್ನಾಟಕ ಮತ್ತು ಗೋವಾ ರಾಜ್ಯಗಳ ಕ್ರೀಡಾ ಸಂಯೋಜಕ ತ್ಯಾಗರಾಜು, ಡಾ.ರುದ್ರಯ್ಯ ಹಿರೇಮಠ, ಚಂದ್ರಶೇಖರ್, ಜೋಶ್, ಶಶಿಕಲಾ ಹಿರೇಮಠ, ಕದಂಬ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಅವಿನಾಶ್, ಲತಾ ಅವಿನಾಶ್, ಎಸ್.ಎನ್.ಜೈಪಾಲ್ ಇದ್ದರು. 
ರಾಜ್ಯ

ಕರಾಟೆಯಿಂದ ಶಿಸ್ತು, ಆತ್ಮವಿಶ್ವಾಸ ವೃದ್ಧಿ

ತಾಲೂಕಿನ ಕದಂಬ ಶಾಲಾ ಆವರಣದಲ್ಲಿ ಸಿಐಎಸ್‌ಸಿಇ ಶಾಲೆಗಳ ರಾಜ್ಯಮಟ್ಟದ, ಕರ್ನಾಟಕ ಹಾಗೂ ಗೋವಾ ವಿಭಾಗದಿಂದ ಹಮ್ಮಿಕೊಂಡಿದ್ದ ಕರಾಟೆ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 700ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿದರು.

ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ, ಶಿಸ್ತು, ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದ್ದು, ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಯಿತು.
ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಭಾರ್ಗವ್ ರೆಡ್ಡಿ ಮಾತನಾಡಿ, ಕರಾಟೆಯಂತಹ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆತ್ಮರಕ್ಷಣೆ ಮಾತ್ರವಲ್ಲದೆ ಶಿಸ್ತು, ಆತ್ಮವಿಶ್ವಾಸ ಬೆಳೆಸುತ್ತವೆ ಎಂದರು.
ಸ್ಪರ್ಧೆಯ ವಿಜೇತರಿಗೆ ಪದಕ, ಪ್ರಮಾಣಪತ್ರ, ಬಹುಮಾನ ವಿತರಿಸಲಾಯಿತು.