ಕುಲಕುಂದಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಕಸಾಪ ಗೌರವ ಸಲಹೆಗಾರ ಶಿವಕುಮಾರ ಸುಣಗಾರ ಪೂಜೆ ಸಲ್ಲಿಸಿದರು. ಅಂಜುನಾಥ ನಾಯ್ಕಲ್​, ನರಸಪ್ಪ ಚಿನ್ನಕಟ್ಟಿ, ಮಲ್ಲಿಕಾರ್ಜುನ ಹಡಪದ ಇದ್ದರು. 
ರಾಜ್ಯ

ಸಾಹಿತ್ಯ ಕ್ಷೇತ್ರಕ್ಕೆ ಕಾರಂತರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ನರಸಪ್ಪ ಚಿನ್ನಕಟ್ಟಿ ಬಣ್ಣನೆ >
  • ಕುಲಕುಂದಿಯಲ್ಲಿ ಕಸಾಪದಿಂದ ವಿಶೇಷ ಉಪನ್ಯಾಸ
ಚಿತ್ತಾಪುರಾ: ಜ್ಞಾನಪೀಠ ಪ್ರಶಸ್ತಿ ಪುರಸತ ಡಾ.ಶಿವರಾಮ ಕಾರಂತರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಗೌರವ ಕಾರ್ಯದರ್ಶಿ ನರಸಪ್ಪ ಚಿನ್ನಕಟ್ಟಿ ಹೇಳಿದರು.
ಕುಲಕುಂದಿ ಗ್ರಾಮದಲ್ಲಿ ಕಸಾಪ ನಾಲವಾರ ವಲಯ ಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸತ ಕೆ.ಶಿವರಾಮ ಕಾರಂತರ ಬದುಕು-ಬರಹ ಮತ್ತು ಸಾಹಿತ್ಯದ ಅರಿವು ಮೂಡಿಸುವ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸಾಹಿತಿಯಾಗಿ ಕಾರಂತರು ಪ್ರಸಿದ್ಧಿ ಆಗಿರುವಂತೆ, ಇತರ ೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು. ಯಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗ ಮಾಡಿದ್ದರು ಎಂದು ಸ್ಮರಿಸಿದರು.
ಕಸಾಪ ಗೌರವ ಸಲಹೆಗಾರ ಶಿವಕುಮಾರ ಸುಣಗಾರ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಲಯ ಅಧ್ಯ ಅಂಜುನಾಥ ನಾಯ್ಕಲ್​ ಅಧ್ಯತೆ ವಹಿಸಿದ್ದರು.
ಪ್ರಮುಖರಾದ ಮಲ್ಲುಗೌಡ ಪೊಲೀಸ್​ ಪಾಟೀಲ್​, ಸಿದ್ದುಗೌಡ, ನಾಗು ಸಾಹುಕಾರ, ಮಲ್ಲೆಶಿ ಪೂಜಾರಿ, ಈರಣ್ಣ ಪೂಜಾರಿ, ಸಾಯಿಬಣ್ಣ ವನಬಾ, ಮಹಾದೇವ ಮಡಿವಾಳ, ಹಯ್ಯಾಳ ಪೂಜಾರಿ, ಮೌನೇಶ, ಈರಣ್ಣ ನೀಲೂರ, ಸತೀಶ, ವೀರೇಶ ಹಡಪದ, ಬಸ್ಸು ಕಾರಿ, ರವಿ ಮಠದ, ಶ್ರೀಧರ ಪತ್ತಾರ್​, ದೇವರಾಜ್​ ಪೂಜಾರಿ, ಶರಣು ಸಾಹು ಮದರಕಿ, ಉಮೇಶ ಯರಗೋಳ ಇತರರಿದ್ದರು.
ಕಲಾವಿದರಾದ ಶಂಕರ ಹಡಪದ, ಮೌನೇಶ ಶಹಾಪೂರ ಸಂಗೀತ ಸೇವೆ ಸಲ್ಲಿಸಿದರು. ಪ್ರಶಾಂತ ಕುಲಕರ್ಣಿ, ರಶ್ಮಿ ಕುಲಕರ್ಣಿ, ಶಿವಲೀಲಾ ತುನ್ನೂರ ಕವನ ವಾಚನ ಮಾಡಿದರು. ಮಲ್ಲಿಕಾರ್ಜುನ ಹಡಪದ ಸ್ವಾಗತಿಸಿದರು. ಅರುಣಕುಮಾರ ಸುಣಗಾರ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ತಳವಾರ ವಂದಿಸಿದರು.