ಮಲ್ಲತ್ತಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶ್ರೀಕರಗದಮ್ಮ ಮತ್ತು ನಗರ ದೇವತೆ ಅಣ್ಣಮ್ಮ ದೇವಿ ಉತ್ಸವಕ್ಕೆ ಶಾಸಕ ಮುನಿರತ್ನ ಚಾಲನೆ ನೀಡಿದರು. ಮಲ್ಲತ್ತಹಳ್ಳಿ ಎಂ.ಮಂಜುನಾಥ್ ಮತ್ತಿತರರು ಇದ್ದರು.  
ರಾಜ್ಯ

ಮಲ್ಲತ್ತಹಳ್ಳಿಯಲ್ಲಿ ಕರಗದಮ್ಮ, ಅಣ್ಣಮ್ಮದೇವಿ ಉತ್ಸವ; ಶಾಸಕ ಮುನಿರತ್ನ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಮಲ್ಲತ್ತಹಳ್ಳಿಯಲ್ಲಿ ಕರಗದಮ್ಮ ಅಣ್ಣಮ್ಮದೇವಿ ಉತ್ಸವ
  • ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ ಆಯೋಜನೆ
  • ಶಾಸಕ ಮುನಿರತ್ನ ಪೂಜೆ ಸಲ್ಲಿಸಿ ಚಾಲನೆ

ಬೆಂಗಳೂರು: ಮಲ್ಲತ್ತಹಳ್ಳಿಯಲ್ಲಿಡಾ.ಬಿ.ಆರ್.ಅಂಬೇಡ್ಕರ್ಯುವಕರ ಸಂಘ ಹಮ್ಮಿಕೊಂಡಿದ್ದಶ್ರೀಕರಗದಮ್ಮ ದೇವಿ ಮತ್ತು ಶ್ರೀಅಣ್ಣಮ್ಮದೇವಿಯ ಉತ್ಸವಕ್ಕೆ ಶಾಸಕಮುನಿರತ್ನ ದೇವರಿಗೆ ಪೂಜೆ ಸಲ್ಲಿಸುವಮೂಲಕ ಚಾಲನೆ ನೀಡಿದರು.

ಈಸಂದರ್ಭದಲ್ಲಿ ಮಾತನಾಡಿದ ಅವರು,ಧಾರ್ಮಿಕ ಪರಂಪರೆ,ದೇವರ ಸ್ಮರಣೆ,ದ್ಯಾನದಿಂದಭಗವಂತನನ್ನು ಕಾಣಲು ಸಾಧ್ಯ.ಪ್ರತಿಯೊಬ್ಬರೂಸಮಾಜದ ಒಳಿತು ಮತ್ತು ತಮ್ಮಸುತ್ತಮುತ್ತಲಿನ ಜನರಿಗೆ ಕೈಲಾದಸಹಾಯ ಮಾಡಿದಾಗ ಮಾತ್ರ ದೇವರುಮತ್ತಷ್ಟು ಆರೋಗ್ಯ,ನೆಮ್ಮದಿನೀಡುತ್ತಾರೆ.ಆ ಮಾರ್ಗದಲ್ಲಿಎಲ್ಲರೂ ನಡೆಯಬೇಕು.ಪ್ರತಿಯೊಬ್ಬರೂನಿತ್ಯ ದೇವರ ಪ್ರಾರ್ಥನೆ ಜೊತೆಗೆತಂದೆ, ತಾಯಿ,ಹಿರಿಯರನ್ನುಗೌರವಿಸಬೇಕು.ಯಾರಿಗೂ ಕೆಡುಕನ್ನುಬಯಸದೆ ಪುಣ್ಯದ ಕಾರ್ಯದ ಕಡೆ ಗಮನಹರಿಸಬೇಕು ಆಗ ಮಾತ್ರ ದೇವರುನಿಮ್ಮಲ್ಲಿ ನೆಲೆಸಿರುತ್ತಾನೆಎಂದರು.

ಬೆಂಗಳೂರುಕೇಂದ್ರ ಜಿಲ್ಲಾ ಬಿಜೆಪಿ ಎಸ್‌ಸಿಮೋರ್ಚಾ ಉಪಾಧ್ಯಕ್ಷ ಮಲ್ಲತ್ತಹಳ್ಳಿಎಂ.ಮಂಜುನಾಥ್ಮಾತನಾಡಿ, ಸಾವಿರಾರುವರ್ಷಗಳಿಂದ ನಮ್ಮ ಪೂರ್ವಿಕರುಯಾವುದೇ ಶುಭಕಾರ್ಯ,ಪುಣ್ಯದ ಕೆಲಸಗಳನ್ನುಮಾಡುವ ಮೊದಲು ಗ್ರಾಮ ದೇವತೆ,ನಗರ ದೇವತೆಯನ್ನುಪೂಜಿಸಿ, ಆರಾಧಿಸುವಮೂಲಕ ಎಲ್ಲರಿಗೂ ಒಳ್ಳೆಯದನ್ನುಮಾಡುವಂತೆ ಪ್ರಾರ್ಥನೆಸಲ್ಲಿಸುತ್ತಿದ್ದರು,ಅದನ್ನು ಯುವಜನಾಂಗಮುಂದುರೆಸಬೇಕು ಎಂದರು.

ನಗರಸಭೆ ಮಾಜಿ ಸದಸ್ಯ ಪುರುಷೋತ್ತಮ್,ಬಿಜೆಪಿ ವಾರ್ಡ್ಅಧ್ಯಕ್ಷ ಶಿವಶಂಕರ್ ಜ್ಞಾನಭಾರತಿಸಂಘ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷಜಯರಾಮಯ್ಯ,ಅಂಬೇಡ್ಕರ್ಯುವಸಂಘದ ಅಧ್ಯಕ್ಷ ಹನುಮಂತ,ಮುಖಂಡರಾದಶ್ರೀನಿವಾಸ್ ಮಿಥುನ್ ಇದ್ದರು.