Kantaraju M.N. Kote Grama Samiti President 
ರಾಜ್ಯ

ಕಾಂತರಾಜು ಎಂ.ಎನ್​.ಕೋಟೆ ಗ್ರಾಪಂ ಅಧ್ಯಕ್ಷ

ಎಂ.ಎನ್​.ಕೋಟೆ : ಗುಬ್ಬಿ ತಾಲೂಕಿನ ಎಂ.ಎನ್​.ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಲಸಿನ ನಾಗೇನಹಳ್ಳಿಯ ಕಾಂತರಾಜು ಚುನಾಯಿತರಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ನರಸಯ್ಯ ಅವರ ಅವಿಶ್ವಾಸದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂತರಾಜು, ದಿಲೀಪ್​ ಕುಮಾರ್​ ಹಾಗೂ ಲೋಕೇಶ್​ ಮೂರು ಜನ ನಾಮಪತ್ರ ಸಲ್ಲಿಸಿದರು. ಮತ್ತಿಕೆರೆ ಗ್ರಾಮದ ಲೋಕೇಶ್​ ಅವರು ನಾಮಪತ್ರವನ್ನು ವಾಪಸ್​ ಪಡೆದರು. ನಂತರ ನಡೆದ ಚುನಾವಣೆಯಲ್ಲಿ ಕಾಂತರಾಜ್​ 10 ಮತ ಪಡೆದು ವಿಜೇತರಾದರೆ ಪ್ರತಿಸ್ಪರ್ಧಿ ದಿಲೀಪ್​ ಕುಮಾರ್​ 8 ಮತ ಪಡೆದು ಪರಾಜಿತಗೊಂಡರು.
ಚುನಾವಣೆ ಪ್ರಕ್ರಿಯೇಯನ್ನು ಉಪ ತಹಸೀಲ್ದಾರ್​ ಪ್ರಶಾಂತ್​ ನಡೆಸಿಕೊಟ್ಟರು.
ನೂತನ ಅಧ್ಯಕ್ಷ ಕಾಂತರಾಜು ಮಾತನಾಡಿ, ನಮ್ಮೆಲ್ಲ ಸದಸ್ಯರ ಸಹಕಾರದೊಂದಿಗೆ ಎಂ.ಎನ್​.ಕೋಟೆ ಗ್ರಾಪಂ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇನೆ. ರಸ್ತೆ, ಬೀದಿದೀಪ, ಚರಂಡಿ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಲು ಬದನಾಗಿದ್ದೇನೆ ಎಂದರು.