ಕನ್ನಕಾ ಪರಮೇಶ್ವರಿ ಉತ್ಸವ kannaka-parameshwari
ಚಿಂತಾಮಣಿ: ನಗರ ಮತ್ತು ತಾಲೂಕಿನಾದ್ಯಂತ ಆರ್ಯವೈಶ್ಯ ಸಮುದಾಯದವರು ಭಾನುವಾರ ಅಂಗಡಿಗಳನ್ನು ಬಂದ್ ಮಾಡಿ ವಾಸವಿ ಜಯಂತಿ ಸಂಭ್ರಮದಲ್ಲಿ ತಲ್ಲೀನರಾಗಿದ್ದರು.kannaka-parameshwari
ಪುರುಷರು ಬಿಳಿಪಂಚೆ, ಬಿಳಿ ಅಂಗಿ ಧರಿಸಿ, ಮಹಿಳೆಯರು ರೇಷ್ಮೆ ಸೀರೆ ತೊಟ್ಟು ಸಿಂಗಾರಗೊಂಡು ನಗರದ ಎನ್.ಆರ್.ಬಡಾವಣೆ ಮತ್ತು ದೊಡ್ಡಪೇಟೆಯ ಕನ್ನಕಾಪರಮೇಶ್ವರಿ ದೇವಾಲಯಕ್ಕೆ ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. ಮಹಿಳಾ ಮಂಡಳಿಯಿಂದ ಸಹಸ್ರನಾಮ ಗಾಯನ ನಡೆಸಿಕೊಟ್ಟರು.
ವಾಸವಿ ಜಯಂತಿ ಅಂಗವಾಗಿ ಕನ್ನಕಾ ಪರಮೇಶ್ವರಿ ದೇವಿ ಸೇರಿ ಎಲ್ಲ ಪರಿವಾರ ದೇವರಿಗೆ ಅಭಿಷೇಕ ಮಾಡಿ, ವಿಶೇಷವಾಗಿ ಅಲಂಕರಿಸಿ, ಲೋಕ ಕಲ್ಯಾಣಾರ್ಥ ಲಲಿತಾ ಹೋಮ ಮಾಡಲಾಯಿತು. ನಗರದ ಎನ್.ಆರ್.ಬಡಾವಣೆ ದೇವಾಲಯದಲ್ಲಿ ದೇವಿಗೆ ವಜ್ರದ ಕಿರೀಟ, ಹಸ್ತಗಳು, ಬಂಗಾರ ಸೀರೆ ಮೂಲಕ ಅಲಂಕಾರ ಮಾಡಿದಲ್ಲದೆ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು.
ನಗರದ ದೊಡ್ಡಪೇಟೆಯಲ್ಲಿರುವ ಕನ್ನಕಾಪರಮೇಶ್ವರಿ ದೇವಾಲಯದಲ್ಲಿ ಹೋಮ ಹವನಗಳ ಜತೆಗೆ ವಾಸವಿ ದೇವಿಗೆ ಪೆನುಗೊಂಡ ವಾಸವಿ ಅಲಂಕಾರ ಮಾಡಿದರು. ಮಧ್ಯಾಹ್ನ 2 ದೇವಾಲಯದಿಂದ ದೊಡ್ಡಪೇಟೆ ಆರ್ಯವೈಶ್ಯ ಕಲ್ಯಾಣ ಮಂಟಪ ಮತ್ತು ಎನ್.ಆರ್.ಬಡಾವಣೆ ವಾಸವಿ ಕಲ್ಯಾಣ ಮಂಟಪದಲ್ಲಿ ಅನ್ನದಾನ ಕಾರ್ಯಕ್ರಮ ನಡೆಯಿತು. ರಾತ್ರಿ ಕನ್ನಕಾ ಪರಮೇಶ್ವರಿ ಉತ್ಸವ ಮೂರ್ತಿ ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಿದರು.