ಶತಮಾನ ಕಳೆದರೂ ಒಗ್ಗಟ್ಟಾಗದ ಕನ್ನಡಿಗರು rajyothsava
- ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜೆ.ಜಿ ನಾಗರಾಜು ವಿಷಾದ
ಬೇತಮಂಗಲ: ರಾಷ್ಟ್ರಕವಿ ಕುವೆಂಪು ನಾಡಗೀತೆ ರಚಿಸಿ ಶತಮಾನ ಕಳೆದರೂ ಹರಿದು ಹಂಚಿ ಹೋಗಿರುವ ಕನ್ನಡಿಗರು ಒಂದಾಗುವ ಕಾಲ ಇನ್ನೂ ಕೂಡಿ ಬಂದಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜೆ.ಜಿ. ನಾಗರಾಜು ವಿಷಾದ ವ್ಯಕ್ತಪಡಿಸಿದರು. rajyothsava
ಕೆಜಿಎ್ ತಾಲೂಕು ಬೇತಮಂಗಲದಲ್ಲಿ ಭಾನುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಕನ್ನಡ ಪರಂಪರೆ ಮತ್ತು ಜನಪದ ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಸಂಸತಿ, ಪರಂಪರೆ ಸೇರಿದಂತೆ ನಮ್ಮ ರಾಜ್ಯದ ಬಗ್ಗೆ ಹೆಮ್ಮೆ ಪಡುವಂತಹ ಮತ್ತು ಜಾಗೃತಿ ಮೂಡಿಸುವಂತಹ ಹಾಗೂ ನಮ್ಮೆಲ್ಲರನ್ನೂ ಒಂದು ಮಾಡುವ ಪ್ರಯತ್ನಕ್ಕೆ 44 ಸಾಲುಗಳ ನಾಡಗೀತೆ ರಚಿಸಿ 100 ವರ್ಷ ಕಳೆದಿದೆ. ಭಾಷೆ, ಸಂಸತಿಯನ್ನು ರಾಜ್ಯದ ಉದ್ದಗಲಕ್ಕೂ ಪಸರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಜಾಗೃತಿ ಸಮಿತಿಯಿಂದ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕನ್ನಡ ಪತ್ರಿಕೆ, ಪುಸ್ತಕಗಳನ್ನು ಓದಬೇಕು ಎಂದರು.
ಭೂ ವಿಜ್ಞಾನಿ ಮತ್ತು ಲೇಖಕ ವೆಂಕಟಸ್ವಾಮಿ ಕೆಜಿಎಫ್ ಭಾಗದಲ್ಲಿ ಕನ್ನಡ ಭಾಷೆ ಸುಧಾರಣೆ ಎಂಬ ವಿಷಯದ ಬಗ್ಗೆ ಮಾತನಾಡಿ, ಕೆಜಿಎಫ್ ಮತ್ತು ಕೋಲಾರ ಒಂದೇ ನಗರಗಳು ಎಂದು ಈಗಲೂ ಸಾಕಷ್ಟು ಮಂದಿ ನಂಬಿದ್ದಾರೆ. ಆದರೆ ಕೆಜಿಎಫ್ ದಶಕಗಳ ಕಾಲ ತಮಿಳು ಭಾಷೆ ಪಾರುಪತ್ಯದಲ್ಲಿತ್ತು ಎಂದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ ಕಾಲೇಜು ಕನ್ನಡ ಪ್ರಾಧ್ಯಾಪಕ ಕುಪ್ಪನಹಳ್ಳಿ ಬೈರಪ್ಪ ಮಾತನಾಡಿ,ಕೋಲಾರ ಜಿಲ್ಲೆ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳ ಗಡಿ ಪ್ರದೇಶ ಹೊಂದಿದೆ. ನಾವೆಲ್ಲರೂ ದ್ರಾವಿಡ ಭಾಷೆಯ ನಾಲ್ಕು ಮಂದಿ ಮಕ್ಕಳು. ಕನ್ನಡಿಗರಿಗೆ ರಕ್ತದಲ್ಲೇ ಸೌಹಾರ್ದತೆ, ಸಾಮರಸ್ಯ ಮನೋಭಾವ ಇದೆ ಎಂದರು.
ಸಮುದಾಯ ಸಂಸ್ಥೆಯ ಎಸ್.ಒ.ಜಗದೀಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎನ್.ಎಂ.ವಿ. ಗೋಪಾಲ್, ಕಸಾಪ ಕೆಜಿಎಫ್ ಅಧ್ಯಕ್ಷ ಶ್ರೀಹರಿ, ಕನ್ನಡ ಮಿತ್ರ ಕಾರ್ಯದರ್ಶಿ ಕುಬೇರಪ್ಪ, ಗ್ರಾಮೀಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಮುಲಕ್ಷಿ$್ಮ, ನಾರಾಯಣ್, ಸಮುದಾಯ ನಿಕಟಪೂರ್ವ ಅಧ್ಯಕ್ಷ ಅಚ್ಯುತ, ಕಸಾಪ ಬಂಗಾರಪೇಟೆ ಅಧ್ಯಕ್ಷ ಅಶ್ವತ್ಥ್, ಸಮುದಾಯ ಕೆಜಿಎಫ್ನ ಅನಿತಾ ಮತ್ತು ತಂಡದಿಂದ ಗಾಯನ, ಬೇತಮಂಗಲ ಹೋಬಳಿ ಘಟಕದ ಅಧ್ಯಕ್ಷ ಎಸ್.ಎಂ. ತ್ಯಾಗರಾಜ್, ಶಿಕ್ಷಕರಾದ ರಾಮು, ರಾಮಚಂದ್ರಪ್ಪ, ಸಂತೋಷ್ ಕುಮಾರ್, ಶ್ರೀನಿವಾಸ್ ಕಾರ್ಯಕ್ರಮ ನೇತೃತ್ವ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀಹರಿ, ಕನ್ನಡ ಭಾಷಾ ಸಂವಹನಕಾರ ಜೆ.ಜಿ. ಶ್ರೀನಿವಾಸಮೂರ್ತಿ, ಹಿರಿಯ ರಂಗ ಕಲಾವಿದೆ ಪ್ಲೋರಾ ಅಚ್ಯುತಾ, ಸುಬ್ರಹ್ಮಣಿ ಅವರನ್ನು ಸನ್ಮಾನಿಸಲಾಯಿತು.