ಕಮಲಾಪುರದಲ್ಲಿ ಸೌಹಾರ್ದ ಬಾಂಧವ್ಯ ಪಾದಯಾತ್ರೆಯ ರೂವಾರಿ ಪ್ರೊ.ರೂಪೇಶ ಪುತ್ತೂರ ಅವರನ್ನು ಸ್ವಾಗತಿಸಿ ಸನ್ಮಾನಿಸಲಾಯಿತು. ದಾಸಿಮಯ್ಯ ವಡ್ಡನಕೇರಿ, ಅಶೋಕ ಸೂಗೂರು ಇದ್ದರು.
- ಪ್ರೊ.ರೂಪೇಶ ಪುತ್ತೂರ ಅನಿಸಿಕೆ
- ಕಮಲಾಪುರದಲ್ಲಿ ಸೌಹಾರ್ದ ಬಾಂಧವ್ಯ ಪಾದಯಾತ್ರೆಗೆ ಸ್ವಾಗತ
ಕಮಲಾಪುರ: ಕರ್ನಾಟಕದಲ್ಲಿರುವ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.80 ಉದ್ಯೋಗ ಸಿಗಬೇಕು ಎಂದು ಸೌಹಾರ್ದ ಬಾಂಧವ್ಯ ಪಾದಯಾತ್ರೆಯ ರೂವಾರಿ ಪ್ರೊ.ರೂಪೇಶ ಪುತ್ತೂರ ಒತ್ತಾಯಿಸಿದರು.
ಸೌಹಾರ್ದದ ಹೆಜ್ಜೆ ಸಮಾಜದ ಬೆಳಕು ಎಂಬ ಧ್ಯೇಯದೊಂದಿಗೆ ಬೀದರ್ನಿಂದ ಬೆಂಗಳೂರುವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ಪಟ್ಟಣ ತಲುಪಿದ್ದು, ಸ್ಥಳಿಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಅಸ್ಮಿತೆ ಅದರ ಸಹೋದರ ಭಾಷೆಗಳೊಂದಿಗಿನ ಬಹುತ್ವದ ಸ್ನೇಹ, ಸೌಹಾರ್ದ ಬಾಂಧವ್ಯದ ಸಿಹಿ ಹರಡುವುದಾಗಿದೆ. ಹೀಗಾಗಿ ಕನ್ನಡ ನೆಲದಲ್ಲಿ ತಲೆ ಎತ್ತಿರುವ ವಿವಿಧ ಕಂಪನಿಗಳು ಕನ್ನಡಿಗರಿಗೆ ಕಾಯಕ ನೀಡಬೇಕು ಎಂದು ಮನವಿ ಮಾಡಿದರು.
ಕಸಾಪ ತಾಲೂಕು ನಿಕಟಪೂರ್ವ ಅಧ್ಯ ದಾಸಿಮಯ್ಯ ವಡ್ಡನಕೇರಿ, ಅಶೋಕ ಸುಗೂರ, ನಂದಲಾಲ್ ಖಡಕೆ, ಶಿವಲಿಂಗಪ್ಪ ಕಟ್ಟೋಳಿ, ರಾಜಶೇಖರ ಮಾಗಾ ಇತರರಿದ್ದರು.