ಸಿದ್ದಪ್ಪ ಹೊಟ್ಟಿ 
ರಾಜ್ಯ

ಕನ್ನಡ ವಿದ್ಯಾ ಸ್ಫೂರ್ತಿ ಪ್ರದಾನ ನಾಳೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾಹಿತಿ
  • ಜಿಲ್ಲಾ-ತಾಲೂಕು ಕಸಾಪದಿಂದ ಕಾರ್ಯಕ್ರಮ
ಯಾದಗಿರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 2025&26ನೇ ಸಾಲಿನ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಕನ್ನಡ, ಆಂಗ್ಲ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ "ಕನ್ನಡ ವಿದ್ಯಾ ಸ್ಫೂರ್ತಿ' ಪ್ರಶಸ್ತಿ ನೀಡಿ ಗೌರವಿಸಲು ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಮುಂದಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಬೆಳಗ್ಗೆ 10.30ಕ್ಕೆ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಉದ್ಘಾಟಿಸುವರು. ಶಾಸಕ ಶರಣಗೌಡ ಕಂದಕೂರ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಒಕ್ಕೂಟ ಬ್ಯಾಂಕ್​ನ ಅಧ್ಯ ವಿಶ್ವನಾಥರೆಡ್ಡಿ ದರ್ಶನಾಪುರ, ಡಿಡಿಪಿಐ ಚನ್ನಬಸಪ್ಪ ಮುಧೋಳ ಹಾಗೂ ಬಿಇಒ ವೀರಣ್ಣ ಕನ್ನಳ್ಳಿ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ತಮ್ಮ ಅಧ್ಯತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲೆ ಆರು ತಾಲೂಕುಗಳ ಕಸಾಪ ಅಧ್ಯರುಗಳು ಭಾಗವಹಿಲಿದ್ದಾರೆ. ಕನ್ನಡ ಮಾಧ್ಯಮದ 27 ಹಾಗೂ ಆಂಗ್ಲ ಮತ್ತು ಉರ್ದು ಮಾಧ್ಯಮದ 186 ಮಕ್ಕಳು ಸೇರಿ ಒಟ್ಟು 213 ವಿದ್ಯಾರ್ಥಿಗಳಿಗೆ ಅಂದು ಕನ್ನಡ ವಿದ್ಯಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂದಿನ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳೇ ಬಂದು ಗೌರವ ಸ್ವೀಕರಿಸಬೇಕು, ಬೇರೆ, ಬೇರೆ ಕಡೆ ಕಾಲೇಜುಗಳಿಗಾಗಿ ಊರಲ್ಲಿ ಇರದೇ ಇದ್ದರೇ ಅವರ ಪಾಲಕರು ಕಡ್ಡಾಯವಾಗಿ ಬಂದು ಕಸಾಪದ ಈ ಗೌರವ ಸ್ವೀಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಕಸಾಪದ ಹಿರಿಯ ಸದಸ್ಯರು ಹಾಗೂ ಪದಾಧಿಕಾರಿಗಳಾದ ಡಾ.ಲಿಂಗೇರಿ, ಡಾ.ಸುಭಾಷಚಂದ್ರ ಕೌಲಗಿ, ಆರ್​.ಮಹಾದೇವಪ್ಪ ಅಬ್ಬೆತುಮಕೂರು, ಡಾ.ಎಸ್​.ಎಸ್​.ನಾಯಕ್​, ನೂರಂದಪ್ಪ ಲೇವಡಿ, ಬಸವಂತರಾಯ ಮಾಲಿ ಪಾಟೀಲ್​, ನಾಗಪ್ಪ ಸಜ್ಜನ್​, ಚನ್ನಪ್ಪ ಠಾಣಾಗುಂದಿ ಇತರರಿದ್ದರು.
ಗಡಿ ಭಾಗದ ಶಾಲೆಗಳಿಗೆ ಕನ್ನಡ ಶಿಕ್ಷರ ನೇಮಿಸಿ
ಈ ಸಲದ ಎಸ್ಸೆಸ್ಸೆಲ್ಸಿ ಫಲಿತಾಂಶ ಗಮನಿಸಿದರೇ ಕನ್ನಡ ಮಾಧ್ಯಮ ಕೇವಲ 27 ಮಕ್ಕಳು ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದರೇ, ಆಂಗ್ಲ ಮತ್ತು ಉರ್ದು ಮಾಧ್ಯಮದ 186 ಮಕ್ಕಳು ಶೇ.ನೂರು ಅಂಕಗಳು ಪಡೆದಿದ್ದಾರೆ. ಇದು ಗಮನಿಸಿದರೆ ಕನ್ನಡ ಮಾಧ್ಯಮದಲ್ಲಿಯೇ ಕೊರತೆ ಎದ್ದು ಕಾಣುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದಪ್ಪ ಹೊಟ್ಟಿ ಅವರು, ಗಡಿ ಭಾಗದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಕನ್ನಡ ಶಿಕರ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಕಸಾಪ ಗಮನಕ್ಕೆ ತಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
"

ಕಸಾಪ ಈಗಾಗಲೇ ಅನೇಕ ಸಾಹಿತಿಗಳ ವಿವಿಧ ಪುಸ್ತಕ ಪ್ರಕಟಿಸಿದ್ದು, ಈಗ ವಡಗೇರಾ ತಾಲೂಕಿನ ನಾಟಿ ವೈದ್ಯರ ಕುರಿತ ಪುಸ್ತಕವೊಂದು ಪ್ರಕಟಿಸಲು ಮುಂದಾಗಿದೆ.

— > ಸಿದ್ದಪ್ಪ ಹೊಟ್ಟಿ ಜಿಲ್ಲಾಧ್ಯ ಕಸಾಪ ಯಾದಗಿರಿ