ಆನೇಕಲ್​ ತಾಲೂಕು ಮುತ್ತಾನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೋಟ್​ಬುಕ್​ ವಿತರಣಾ ಕಾರ್ಯಕ್ರಮದಲ್ಲಿ ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ, ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಮ.ಚಂದ್ರಶೇಖರ, ಸಂಜೀವರತ್ನ, ಶಾಂತಕುಮಾರಿ, ಡಾ.ಶೇಷಶಾಸ್ತ್ರಿ, ಮ.ಚಂದ್ರಶೇಖರ, ಎಚ್​.ಎನ್​.ರಮೇಶ್​ ಬಾಬು ಇತರರಿದ್ದರು. 
ರಾಜ್ಯ

ಸರ್ಕಾರಿ ಶಾಲೆಗಳ ಉಳಿವಿನಿಂದ ಕನ್ನಡ ಉಳಿವು / ANEKAL

ಆನೇಕಲ್ : ಸರ್ಕಾರಿ ಶಾಲೆಗಳ ಉಳಿವಿನಿಂದ ಮಾತ್ರ ಕನ್ನಡ ಉಳಿಯುತ್ತದೆ ಎಂದು ಹಿರಿಯ ಸಾಹಿತಿ ಹಾಗೂ ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ ಅಭಿಪ್ರಾಯಪಟ್ಟರು.
ಖ್ಯಾತ ಸಂಶೋಧಕ, ಹಿರಿಯ ಸಾಹಿತಿ ಡಾ.ಚಿದಾನಂದ ಮೂರ್ತಿ, ಹಾಗೂ ಹಿರಿಯ ಲೇಖಕ ಬಾ.ಹ.ಉಪೇಂದ್ರ ಅವರ ನೆನಪಿಗಾಗಿ ಕನ್ನಡ ಗಡಳೆಯರ ಬಳಗದಿಂದ ಮುತ್ತಾನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚಂದಾಪುರದ ಯಶಸ್ವಿನಿ ಮಹಿಳಾ ಒಕ್ಕೂಟದ ಸೇವಾ ಆಶ್ರಮದ ವಿದ್ಯಾರ್ಥಿಗಳಿಗೆ ನೋಟ್​ಪುಸ್ತಕ, ಬ್ಯಾಗ್​, ಲೇಖನಿ, ಪಿಠೋಪಕರಣ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಕಡಿಮೆಯಾಗಲು ಕಾರಣ ನಮ್ಮ ಆಡಳಿತದ ದೌರ್ಬಲ್ಯ. ಯಾವುದೇ ಸರ್ಕಾರಗಳು ಬಂದರೂ ಖಾಸಗಿ ಶಾಲೆಗಳ ಬೆಳವಣಿಗೆಗೆ ಸಹಕಾರ ನೀಡುತ್ತವೆಯೇ ಹೊರತು ಕನ್ನಡ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ಗಟ್ಟಿಯಾದ ಕಾನೂನು ರೂಪಿಸದೆ, ಕೇವಲ ತೇಪೆಹಾಕಲಾಗುತ್ತಿದೆ. ಇದರಿಂದ ಪಾಲಕರು ಮತ್ತು ಮಕ್ಕಳು ಸರ್ಕಾರಿ ಶಾಲೆಗಳಿಂದ ದೂರ ಉಳಿಯುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಕನ್ನಡ ಭಾಷೆಗೆ ಕುತ್ತು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕವಿ, ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಮ.ಚಂದ್ರಶೇಖರ ಮಾತನಾಡಿ, ಕನ್ನಡ ಗೆಳೆಯರ ಬಳಗವು ಹಿರಿಯ ಸಾಹಿತಿಗಳ ಸಂಸ್ಮರಣೆ ಪ್ರಯುಕ್ತ ಪ್ರತಿ ವರ್ಷವೂ ರಾಜ್ಯದ ಸರ್ಕಾರಿ ಶಾಲೆಗಳಿಗೆ ಪಿಠೋಪಕರಣ ವಿತತರಿಸುತ್ತಿದೆ ಎಂದು ತಿಳಿಸಿದರು.
ಬಿ.ವಿ.ರವಿಕುಮಾರ್​, ಹೊಸೂರು ನಾಗರಾಜ್​, ಎಸ್​.ಶಿವಲಿಂಗಯ್ಯ, ಸಿದ್ಧಾರ್ಥ ರೆಡ್ಡಿ, ನಾಗೇಂದ್ರಪ್ಪ ಕಲಬುರ್ಗಿ, ಬಿ.ವಿ.ರವಿಕುಮಾರ್​, ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ರಾಮಕೃಷ್ಣ, ಮುಖ್ಯಶಿಕ್ಷಕಿ ಎಂ.ಎಸ್​.ಸತ್ಯವತಿ ಇದ್ದರು.