ಕನ್ನಡ ಅಭಿವೃದ್ಧಿ ಪ್ರಾಧಿಕಾರ  
ರಾಜ್ಯ

‘ಕನ್ನಡ ಸಾಮರಸ್ಯ ನೆಲೆಗಳು’ 41 ಕೃತಿ ಬಿಡುಗಡೆ ಏ. 15ಕ್ಕೆ

ಪ್ರಮುಖ ಮುಖ್ಯಾಂಶಗಳು

  • * ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ
ಬೆಂಗಳೂರು: ಹೊಸ ತಲೆಮಾರಿನ ಕನ್ನಡಿಗರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಮನ್ವಯದ ನೆಲೆಗಳ ಕುರಿತು ಸರಳವಾಗಿ ತಿಳಿಸಿಕೊಡುವ ಉದ್ದೇಶದೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕದ ಬಹುಮುಖಿ ಪರಂಪರೆಯನ್ನು ಪ್ರನಿಧಿಸುವ ‘ಕನ್ನಡ ಸಾಮರಸ್ಯ ನೆಲೆಗಳು’ ಯೋಜನೆಯಡಿ 41 ಪುಸ್ತಕಗಳನ್ನು ಸಿದ್ಧಪಡಿಸಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ (ಏ.15) ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದ ಪಿ.ಸಿ. ಮೋಹನ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ, ಶಾಸಕ ರಿಜ್ವಾನ್ ಅರ್ಷದ್, ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಸರ್ಕಾರದ ಕಾರ್ಯದರ್ಶಿ ಜೆ. ಮಂಜುನಾಥ್ ಮೊದಲಾದವರು ಭಾಗವಹಿಸಲಿದ್ದಾರೆ. ಈ ಯೋಜನೆಯಡಿ 100 ಪುಸ್ತಕಗಳ ಪ್ರಕಟಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಾಧಿಕಾರದ ಸದಸ್ಯರೂ ಆಗಿರುವ ವಿಮರ್ಶಕ ರವಿಕುಮಾರ್ ನೀಹ ಯೋಜನೆಯ ನಿರ್ದೇಶಕರಾಗಿದ್ದಾರೆ. ಸಾಹಿತಿ ಬೊಳುವಾರು ಮಹಮದ್ ಕುಂಇ ಅವರು ಮುಖ್ಯ ಸಂಪಾದಕರಾಗಿದ್ದು, ಏಳು ವಿದ್ವಾಂಸರ ಸಂಪಾದಕೀಯ ತಂಡವು ಯೋಜನೆಯನ್ನು ಕಾರ್ಯಗತಗೊಳಿಸಲು ಶ್ರಮಿಸಿದೆ.