ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ  
ರಾಜ್ಯ

ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ; ದೇವಿ ಮಹಾತ್ಮೆ ಯಕ್ಷಗಾನ

ಬೆಂಗಳೂರು: ವಿದೇಶಾಂಗ ಇಲಾಖೆಯ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಕೋರಮಂಗಲದಲ್ಲಿ ಇತ್ತೀಚೆಗೆ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗ ಜರುಗಿತು.
ಇಂಡಿಯನ್‌ ಕೌನ್ಸಿಲ್‌ ಅರ್‌ ಕಲ್ಚರಲ್‌ ರಿಲೇಶನ್ಸ್‌ (ICCR) ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾದರ್ಶಿನಿ ತಂಡದ ಸದಸ್ಯರು ಯಕ್ಷಗಾನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.  ಕಾರ್ಯಕ್ರಮದಲ್ಲಿ ಇಂಡಿಯನ್‌ ಕೌನ್ಸಿಲ್‌ ಅರ್‌ ಕಲ್ಚರಲ್‌ ರಿಲೇಶನ್ಸ್‌ ಪ್ರಾದೇಶಿಕ ನಿರ್ದೇಶಕ ಪ್ರದೀಪ್‌ ಕುಮಾರ್‌, ಕರ್ನಾಟಕ ಕಲಾದರ್ಶಿನಿ ತಂಡದ ಮುಖ್ಯಸ್ಥ ಶ್ರೀನಿವಾಸ ಸಾಸ್ತಾನ, ಪ್ರಾದೇಶಿಕ ಪಾಸ್‌ಪೋರ್ಟ್‌ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. 
ಕಲಾವಿದರಾಗಿ ಶ್ರೀನಿವಾಸ ಸಾಸ್ತಾನ, ಸುಮಾ ಅನಿಲ್‌ಕುಮಾರ್‌, ಗೌತಮ್‌ ಸಾಸ್ತಾನ, ಧೃತಿ ಎನ್‌. ಅಮ್ಮೆಂಬಳ, ಉಮೇಶ್‌ ಕುಮಾರ್‌, ಕೃಷ್ಣಯ್ಯ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ನಾವುಡ ಕೂಡ ಭಾಗಿಯಾಗಿದ್ದರು.