ಜರ್ಮನ್ ದೇಶದ ಫ್ರೈಡ್ರಿಕ್‌ಶಾಫೆನ್ ನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಲ್ಲಿನ ಕನ್ನಡಿಗರು ಪಾಲ್ಗೊಂಡು ಸಂಭ್ರಮಿಸಿದರು.  
ರಾಜ್ಯ

ಜರ್ಮನಿಯಲ್ಲಿ ಕೇಳಿಸಿದ ಕನ್ನಡದ ಕಲರವ; ಫ್ರೈಡ್ರಿಕ್‌ಶಾಫೆನ್‌ನಲ್ಲಿ ರಾಜ್ಯೋತ್ಸವ

ಪ್ರಮುಖ ಮುಖ್ಯಾಂಶಗಳು

  • ಜರ್ಮನಿಯಲ್ಲಿ ಕೇಳಿಸಿದ ಕನ್ನಡದ ಕಲರವ
  • ಫ್ರೈಡ್ರಿಕ್‌ಶಾಫೆನ್‌ ನಗರದಲ್ಲಿ ರಾಜ್ಯೋತ್ಸವ
  • ಹಾಡಿ, ಕುಣಿದು, ಸಂಭ್ರಮಿಸಿದ ಅನಿವಾಸಿ ಕನ್ನಡಿಗರು

ಬೆಂಗಳೂರು:‘ಎಲ್ಲಾದರೂಇರು ಎಂತಾದರು ಇರು ಎಂದೆಂದಿಗುನೀ ಕನ್ನಡವಾಗಿರು’ ಎಂಬ ಕವಿಕುವೆಂಪುರವರ ಸಾಲುಗಳು ನವೆಂಬರ್ತಿಂಗಳಿನಲ್ಲಿ ಮತ್ತೆ ಮತ್ತೆಕೇಳಿ ಬರುತ್ತವೆ.ಈಸಾಲಿನಂತೆ ದೂರದ ಜರ್ಮನ್‌ನಲ್ಲಿಇದ್ದರೂ ಕನ್ನಡ ತಾಯ್ನಡನ್ನುಮರೆಯದೆ ರಾಜ್ಯೋತ್ಸವ ಆಚರಿಸಿಸಂಭ್ರಮಿಸಿದ್ದಾರೆ.

ಜರ್ಮನ್ದೇಶದ ಫ್ರೈಡ್ರಿಕ್‌ಶಾಫೆನ್ ಎಂಬನಗರದಲ್ಲಿ ವಾಸ ಮಾಡುತ್ತಿರುವಕನ್ನಡಿಗರು ಇದೇ ಮೊದಲ ಬಾರಿಗೆತಾವಿರುವ ನಗರದಲ್ಲಿ ಸಾರ್ವಜನಿಕವಾಗಿಕನ್ನಡ ರಾಜ್ಯೋತ್ಸವವನ್ನುಆಚರಿಸಿದ್ದಾರೆ.ಕೆ.ವಿ.ವಿನುತಅವರ ನೇತೃತ್ವದಲ್ಲಿ ಅತ್ಯಂತಕಡಿಮೆ ಅವಧಿಯಲ್ಲಿ ಈ ಬಗ್ಗೆಸಿದ್ಧತೆ ಮಾಡಿ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿತ್ತು.ಕನ್ನಡಹಾಡು,ಸ್ಪರ್ಧೆ,ಅಂತ್ಯಾಕ್ಷರಿ,ಪದಬಂಧಇತ್ಯಾದಿ ಚಟುವಟಿಕೆಗಳು ನೆರೆದವರಿಗೆಬಾಲ್ಯದ ನೆನಪುಗಳನ್ನು ತಂದಿತ್ತು. ಮಕ್ಕಳು,ಯುವಕರು,ಹಿರಿಯರುಎಂಬ ಭೇದವಿಲ್ಲದೆ ಎಲ್ಲರೂ ಒಂದೇಕುಟುಂಬದವರಂತೆ ಎಲ್ಲ ಚಟುವಟಿಕೆಗಳಲ್ಲಿಪಾಲ್ಗೊಂಡು ಸಂಭ್ರಮಿಸಿದರು.ಕೊನೆಯಲ್ಲಿಕನ್ನಡದ ವಿವಿಧ ಖಾದ್ಯಗಳನ್ನುಎಲ್ಲರೂ ಒಟ್ಟಾಗಿ ಸವಿದರು.