ಸಾಹಿತ್ಯ ಮತ್ತು ಸೃಜನಾತ್ಮಕ ಕಲೆ ಓದುಗರು ಹಾಗೂ ನೋಡುಗರ ಮನಸ್ಸನ್ನು ವಿಕಾಸಗೊಳಿಸುವ ಶಕ್ತಿ ಹೊಂದಿವೆ. ಭಾಷೆ ಯಾವುದಾದರೂ ಸಾಹಿತ್ಯ ಮತ್ತು ಕಲೆಗೆ ಇರುವ ಶಕ್ತಿ ಅಂಥದ್ದು. ಆ ನಿಟ್ಟಿನಲ್ಲಿ ವಿಶ್ವ ಕಲೆ ಮತ್ತು ಸಾಹಿತ್ಯದಲ್ಲಿ ವಿಶೇಷ ಮಾನ್ಯತೆ ಪಡೆದಿರುವ ಕನ್ನಡ ಸಾಹಿತ್ಯ ಮತ್ತು ಕಲೆ ಹತ್ತು ಹಲವು ಬಾರಿ ತನ್ನ ನತೆಯನ್ನು ಎತ್ತಿ ಮೆರೆಸಿದ ಇತಿಹಾಸ ಕಣ್ಣಮುಂದಿದೆ. ಆದಿಕವಿ ಪಂಪನಿಂದ ಆರಂಭವಾಗಿ ಇತ್ತೀಚಿನ ಅನೇಕರು ಕನ್ನಡ ಸಾಹಿತ್ಯ ಕೃಷಿಯನ್ನು ಸಮೃದ್ಧಗೊಳಿಸಿದ್ದಾರೆ. ಕಲೆ, ಸಂಸತಿಯ ದೃಷ್ಟಿಯಿಂದಲೂ ಕನ್ನಡದ ಹಿರಿಮೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆ. ರಂಗಭೂಮಿ, ಜನಪದ, ನೃತ್ಯ, ಸಂಗೀತ ಮತ್ತಿತರ ಅನೇಕ ಪ್ರದರ್ಶನ ಕಲೆಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ.
ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಎಂಬ ಭಾಷಾ ಶೈಲಿಯನ್ನು ಪ್ರತ್ಯೇಕಿಸುವುದರ ಜೊತೆಗೆ, ತತ್ವಗಳಿಗನುಗುಣವಾಗಿಯೂ ವಿವಿಧ ಪ್ರಕಾರದ ಸಾಹಿತ್ಯ ಶ್ರೀಮಂತಿಕೆ ಹೊಂದಿರುವ ಹೆಗ್ಗಳಿಕೆ ಕನ್ನಡಕ್ಕಿದೆ. ತತ್ವಸಿದ್ಧಾಂತ ಮತ್ತು ಚಿಂತನೆಗಳನ್ನಾಧರಿಸಿಯೂ ಸಾಹಿತ್ಯವನ್ನು ಪ್ರತ್ಯೇಕವಾಗಿ ವಿಭಾಗ ಮಾಡಬಹುದು. ಕಾವ್ಯಗಳು, ವಚನ ಸಾಹಿತ್ಯ, ದಾಸ ಸಾಹಿತ್ಯ, ನವ್ಯ, ನವೋದಯ, ಬಂಡಾಯ ಮತ್ತು ಆಧುನಿಕ ಸಾಹಿತ್ಯ ಹೀಗೆ ಕನ್ನಡದಲ್ಲಿ ಪ್ರತ್ಯೇಕ ಸಮೃದ್ಧ ಸಾಹಿತ್ಯ ಭಂಡಾರವೇ ಸಿಗುತ್ತದೆ. ಕವಿತೆ, ಕಾದಂಬರಿ, ಕತೆ, ನಾಟಕ ಹೀಗೆ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳು ಆ ಭಂಡಾರದಲ್ಲಿ ತುಂಬಿ ತುಳುಕುತ್ತಿವೆ. ಕಳೆದ ಒಂದು ಶತಮಾನದಲ್ಲಿ ಆಗಿರುವ ಕಲೆ ಮತ್ತು ಸಾಹಿತ್ಯದ ಬೆಳವಣಿಗೆ, ಸಾಧನೆ, ಸಾಧಕರು, ಪ್ರಶಸ್ತಿ, ಪ್ರಭಾವಗಳನ್ನು ಅವಲೋಕಿಸಿದರೆ, ಇತರ ಭಾಷೆಗಳಿಗಿಂತ ಕನ್ನಡ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳು ಗಣನೀಯ ಪ್ರಮಾಣದಲ್ಲಿ ಬೆಳೆದು ನಿಂತಿವೆ.
ನಾಟಕ ಹೀಗೆ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳು ಆ ಭಂಡಾರದಲ್ಲಿ ತುಂಬಿ ತುಳುಕುತ್ತಿವೆ. ಕಳೆದ ಒಂದು ಶತಮಾನದಲ್ಲಿ ಆಗಿರುವ ಕಲೆ ಮತ್ತು ಸಾಹಿತ್ಯದ ಬೆಳವಣಿಗೆ, ಸಾಧನೆ, ಸಾಧಕರು, ಪ್ರಶಸ್ತಿ, ಪ್ರಭಾವಗಳನ್ನು ಅವಲೋಕಿಸಿದರೆ, ಇತರ ಭಾಷೆಗಳಿಗಿಂತ ಕನ್ನಡ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳು ಗಣನೀಯ ಪ್ರಮಾಣದಲ್ಲಿ ಬೆಳೆದು ನಿಂತಿವೆ. ಕನ್ನಡ ಸಾಹಿತ್ಯ ಸಮ್ಮೇಳನದ ಹೆಗ್ಗಳಿಕೆ: ರಾಜ&ಮಹಾರಾಜರನೇಕರು ತಮ್ಮ ಕಾಲದಲ್ಲಿ ಸಾಹಿತ್ಯಾಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ನೀಡಿದ್ದಾರೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಇಡೀ ದೇಶದಲ್ಲೇ ಮಹತ್ವದ ಸಾಹಿತ್ಯ ಸಂಸ್ಥೆಯಾಗಿದೆ. ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಕರ್ನಾಟಕ ಹೊರತುಪಡಿಸಿ ಇನ್ನಾವುದೇ ಭಾಷೆಯಲ್ಲೂ ಇಷ್ಟು ದೊಡ್ಡದಾಗಿ ನಡೆಯುವುದಿಲ್ಲ. ಇಲ್ಲಿನ ನೆಲ, ಜಲ, ಸಂಸತಿ, ಸಂಪ್ರದಾಯ ಎಲ್ಲವೂ ಸಾಹಿತ್ಯ ಮತ್ತು ಕಲೆಯ ಸ್ವರೂಪದಲ್ಲಿ
ದೇಶದ 2ನೇ ಪ್ರಾಚಿನ ಭಾಷೆಯಾಗಿರುವ ಕನ್ನಡಕ್ಕೆ ಈವರೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ವಿ.ಕೃ. ಗೋಕಾಕ್, ಮಾಸ್ತಿ ವೆಂಕಟೇಶ ಅಯ್ಯಂಗಾರ, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರು ಈ ಗೌರವಕ್ಕೆ ಪಾತ್ರರಾದ ಮಹನೀಯರು. ಜ್ಞಾನಪೀಠದಂತೆ ಅತ್ಯುನ್ನತವಾಗಿರುವ ಮತ್ತೊಂದು ಪ್ರಶಸ್ತಿ ಸರಸ್ವತಿ ಸಮ್ಮಾನ್. ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಮತ್ತು ವೀರಪ್ಪ ಮೊಯ್ಲಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಬರಹಗಾರ ಅರವಿಂದ ಅಡಿಗ ಅವರು ಬುಕರ್ ಪ್ರಶಸ್ತಿಪಡೆದು ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಪಡೆಯುವ ಮೂಲಕ ಬರಹಗಾರ್ತಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಾಸ್ತಿ ಕನ್ನಡಕ್ಕೆ ಮನ್ನಣೆ ದೊರಕಿಸಿಕೊಟ್ಟಿದ್ದಾರೆ. ಇನ್ನುಳಿದಂತೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಭಾರತ ರತ್ನದಂತಹ ಪ್ರತಿಷ್ಠಿತ ಗೌರವಗಳನ್ನು ಕನ್ನಡದ ಅನೇಕ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ರಂಗಕರ್ಮಿಗಳು, ಜನಪದ ಕಲಾವಿದರು ಪಡೆದುಕೊಂಡು ನಾಡಿನ ಗೌರವವನ್ನು ಇಮ್ಮಡಿಗೊಳಿಸಿದ್ದಾರೆ.
ಆಧುನಿಕ ಕವಿ & ಕಲಾವಿದರ ಕೊಡುಗೆ
ಕನ್ನಡ ಸಾಹಿತ್ಯ ಮತ್ತು ಕಲಾ ಲೋಕವನ್ನು ಶ್ರೀಮಂತಗೊಳಿಸಿದ ಕವಿ ಕಲಾವಿದರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಿ.ಎಂ.ಶ್ರೀ., ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಅನಕೃ, ಮಾಸ್ತಿ, ವಿ.ಕೃ. ಗೋಕಾಕ್, ಡಿ.ವಿ. ಗುಂಡಪ್ಪ, ಯು.ಆರ್. ಅನಂತಮೂರ್ತಿ, ಗೋವಿಂದ ಪೈ, ಎಸ್.ಎಲ್. ಭೈರಪ್ಪ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ತೀನಂಶ್ರೀ, ಪೂರ್ಣಚಂದ್ರ ತೇಜಸ್ವಿ, ಗೋಪಾಲಕೃಷ್ಣ ಅಡಿಗ, ಡಾ. ಆರ್.ಸಿ. ಹಿರೇಮಠ, ಡಾ. ನಂದಿಮಠ, ನಂಜುಂಡಾರಾಧ್ಯರು, ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ, ಸಿದ್ದಯ್ಯ ಪುರಾಣಿಕ್, ಡಾ. ಸಿದ್ದಲಿಂಗಯ್ಯ, ಜಿ.ಎಸ್. ಶಿವರುದ್ರಪ್ಪ, ಹಾ.ಮಾ. ನಾಯಕ್, ಎಂ.ಕೆ. ಇಂದಿರಾ, ಸಾ.ಶಿ. ಮರುಳಯ್ಯ, ಅ.ರಾ. ಮಿತ್ರ, ಎಂ.ಎಸ್. ಕೃಷ್ಣಯ್ಯ, ಎಲ್.ಎಸ್. ಶೇಷಗಿರಿರಾವ್, ಪಿ. ಲಂಕೇಶ್, ಜಿ.ಎಸ್. ವೆಂಕಟಸುಬ್ಬಯ್ಯ ಮತ್ತಿತರ ಹಿರಿಯರ ಕೊಡುಗೆ ಅಪಾರ. ಇತ್ತೀಚಿನ ದಿನಗಳಲ್ಲಿ ಚಂಪಾ, ಬಿ.ಆರ್. ಲಕ್ಷ$್ಮಣರಾವ್, ಎಚ್.ಎಸ್. ವೆಂಕಟೇಶಮೂರ್ತಿ, ಡುಂಡಿರಾಜ್, ದೊಡ್ಡರಂಗೇಗೌಡ, ಮರುಳಸಿದ್ದಪ್ಪ, ಗೀತಾ ನಾಗಭೂಷಣ, ಹಂಪನಾ, ಕಮಲಾ ಹಂಪನಾ, ಗೊ.ರು. ಚನ್ನಬಸಪ್ಪ ಮತ್ತಿತರ ಅನೇಕರು ಸಾಹಿತ್ಯ ಕೃಷಿಯನ್ನು ಸಂಪದ್ಭರಿತಗೊಳಿಸಿದ್ದಾರೆ.
ಕಲಾ ಪ್ರಪಂಚದಲ್ಲಿ ಗುಬ್ಬಿ ವೀರಣ್ಣ, ಟಿ.ಪಿ. ಕೈಲಾಸಂ, ಬಿ.ವಿ. ಕಾರಂತ್, ಕೆ.ವಿ. ಸುಬ್ಬಣ್ಣ, ಪರ್ವತವಾಣಿ, ದಾಶರಥಿ ದೀತ್, ಅಬ್ಬೂರು ಜಯತೀರ್ಥ, ಕೆರೆಮನೆ ಶಂಭುಹೆಗಡೆ, ಸಂಗೀತ ದಿಗ್ಗಜರಾದ ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಬಸವರಾಜ ರಾಜಗುರು, ಪುಟ್ಟರಾಜ ಗವಾಯಿ ಮತ್ತಿತರ ಅನೇಕರ ಸೇವೆ ಕನ್ನಡ ಭುವನೇಶ್ವರಿಯನ್ನು ಉತ್ತುಂಗಕ್ಕೇರಿಸಿದೆ.