ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ 112ನೇ ಕನ್ನಡ ಸಾಹಿತ್ಯ ಪರಿಷತ್​ ಸಂಸ್ಥಾಪನಾ ದಿನಾಚರಣೆಯನ್ನು ಸಾಹಿತಿ ವೀರಶೆಟ್ಟಿ ಎಂ.ಪಾಟೀಲ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಡಾ.ರುದ್ರಮಣಿ ಮಠಪತಿ, ನಾಗೇಂದ್ರ ಬಿರಾದಾರ, ಮಹಾದೇವ ಪಾಟೀಲ, ಡಾ.ಬಸವರಾಜ ಖಂಡಾಳೆ, ಡಾ.ಗಂಗಾಧರ ಸಾಲಿಮಠ, ರವಿ ನಾಗಿನಕೇರೆ ಇದ್ದರು 
ರಾಜ್ಯ

ಕನ್ನಡ ಭಾಷೆ ಬದುಕಿನ ಉಸಿರು

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ವೀರಶೆಟ್ಟಿ ಎಂ.ಪಾಟೀಲ ಅಭಿಮತ
  • ಮಂಠಾಳನಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆ
ಬಸವಕಲ್ಯಾಣ :ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ತಾಯಿಯ ಮಮತೆ, ಮಣ್ಣಿನ ಪರಿಮಳ ಹಾಗೂ ಬದುಕಿನ ಉಸಿರು ಎಂದು ಸಾಹಿತಿ ವೀರಶೆಟ್ಟಿ ಎಂ.ಪಾಟೀಲ ಹೇಳಿದರು.
ಮಂಠಾಳ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಹಾಗೂ ಜ್ಞಾನ ಗಂಗಾ ಆಕಾಡಮಿ ಕೋಚಿಂಗ್​ ಕ್ಲಾಸ್​ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 112ನೇ ಕನ್ನಡ ಸಾಹಿತ್ಯ ಪರಿಷತ್​ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮುಳುಗುವ ಭಾಷೆಯಲ್ಲ. ಯುಗಗಳನ್ನು ದಾಟಿ ಬೆಳಗುವ ಜ್ಯೋತಿ ಎಂದರು.
ಸಾಹಿತಿ ನಾಗೇಂದ್ರ ಬಿರಾದಾರ ಉಪನ್ಯಾಸ ನೀಡಿ, ತಂತ್ರಜ್ಞಾನ ಮತ್ತು ಮೊಬೈಲ್​ ಬಳಕೆಯಿಂದ ಓದುಗರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ಕನ್ನಡದಲ್ಲಿ ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ಸಂಗತಿ. ಸಾರ್ವಜನಿಕ ಗ್ರಂಥಾಲಯಗಳು ಹೆಚ್ಚಿನ ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುಗರಿಗೆ ತಲುಪಿಸಿದರೆ ಕನ್ನಡ ಮತ್ತಷ್ಟು ಬೆಳೆದು ಗಟ್ಟಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಡಾ.ರುದ್ರಮಣಿ ಮಠಪತಿ ಮಾತನಾಡಿ, ಬಸವಣ್ಣನವರ ವಚನಗಳು ಸಮಾನತೆ ಮತ್ತು ಮಾನವೀಯತೆಯ ಮಹತ್ವವನ್ನು ಹನ್ನೆರಡನೇ ಶತಮಾನದಲ್ಲೇ ಜಗತ್ತಿಗೆ ಸಾರಿವೆ. ವಚನ ಸಾಹಿತ್ಯದಿಂದಾಗಿ ತನಕ ಕನ್ನಡದ ಬೆಳಕು ಎಂದಿಗೂ ಆರದು ಎಂದರು.
ಮಂಠಾಳ ವಲಯ ಅಧ್ಯಕ್ಷ ಮಹಾದೇವ ಪಾಟೀಲ, ಕಸಾಪ ತಾಲೂಕು ಉಪಾಧ್ಯಕ್ಷ ಡಾ. ಬಸವರಾಜ ಖಂಡಾಳೆ, ಯುವ ಟಕದ ಅಧ್ಯಕ್ಷ ಡಾ.ಗಂಗಾಧರ ಸಾಲಿಮಠ, ಜ್ಞಾನಗಂಗಾ ಅಕಾಡೆಮಿಯ ಅಧ್ಯಕ್ಷ ರವಿ ನಾಗಿನಕೇರೆ ಇದ್ದರು. ಮಹೇಶ್ವರಿ ಶಿವಶರಣಪ್ಪ ಹಂದ್ರಾಳೆ ನಿರೂಪಣೆ ಮಾಡಿದರು. ಜಯಶ್ರೀ ಸಂಕೋಳೆ ವಂದಿಸಿದರು
"

ಸರ್​ ಎಂ.ವಿಶ್ವೇಶ್ವ ರಯ್ಯನವರ ಅವಿರತ ಶ್ರಮದಿಂದ ಹಾಗೂ ಮೈಸೂರು ಒಡೆಯರ ಸಹಕಾರದಿಂದ ಕನ್ನಡ ಸಾಹಿತ್ಯ ಪರಿಷತ್ತು ಅಂದು ಅಸ್ತಿತ್ವಕ್ಕೆ ಬಂದಿತ್ತು. ಬ್ರಿಟಿಷ್​ರ ಕಾಲದಲ್ಲಿ ಅಕ್ಕ ಪಕ್ಕದ ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡದ ಪ್ರದೇಶಗಳನ್ನು ಒಟ್ಟು ಗೂಡಿಸಿ ನಮ್ಮ ಕನ್ನಡ ನಾಡನ್ನು ಪುನರ ಸಂಟಿಸಲಾಯಿತು. ಈಗ ಕನ್ನಡ ನೆಲ ಜಲ ಸಂಸತಿಯನ್ನು ನಾವು ಉಳಿಸಿ ಬೆಳಸಬೇಕಾಗಿದೆ. ಕನ್ನಡ ಪ್ರೇಮವನ್ನು ಪಸರಿಸಬೇಕಾಗಿದೆ.

— > ಡಾ.ರುದ್ರಮಣಿ ಮಠಪತಿ ಕಸಾಪ ತಾಲೂಕು ಅಧ್ಯಕ್ಷ