ಮುರಗೋಡದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ದೀಪಕ ಗುಡಗನಟ್ಟಿ, ಮಹಾಂತೇಶ ದಾಡಿಗುಂಡಿ, ಭೀಮಶಿ ಕಿವಡಿ, ಸಂಗಪ್ಪ ಬೆಳಗಾವಿ, ರಾಜು ಕಲಾಲ, ಸುರೇಶ ಗವನ್ನವರ ಇತರರಿದ್ದರು. 
ರಾಜ್ಯ

ಕನ್ನಡ ರಕ್ಷಣೆಗೆ ಶ್ರಮಿಸೋಣ

ಮುರಗೋಡ: ಜನ್ಮ ನೀಡಿದ ನಾಡಿಗೆ ಸೇವೆ ಸಲ್ಲಿಸಿದ ಮಹಾನ್​ ಸಾಧಕರನ್ನು ಗೌರವಿಸುವುದು
ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಕರವೇ ಜಿಲ್ಲಾಧ್ಯ ದೀಪಕ ಗುಡಗನಟ್ಟಿ ಹೇಳಿದರು.
ಸ್ಥಳಿಯ ಎಪಿಎಂಸಿ ಅವರಣದಲ್ಲಿ ದಿ.ಬಾಳಪ್ಪ ಹುಕ್ಕೇರಿ ವೇದಿಕೆಯಲ್ಲಿ ಕರವೇ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸಾಧಕರು ಹಾಗೂ ಸೈನಿಕರ ಸನ್ಮಾನ ಸಮಾರಂಭ ಹಾಗೂ ರಸಮಂಜರಿ, ನಗೆಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲೆ, ಸಾಹಿತ್ಯ, ಸಂಸತಿ, ದೇಶಸೇವೆ, ಸಮಾಜ ಸೇವೆ ಮಾಡುವವರನ್ನು ಕರವೇ ಸನ್ಮಾನಿಸಿ ಪ್ರೋತ್ಸಾಹಿಸಿದೆ ಎಂದರು. ಮಹಾಂತ ಮಠದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ವಿ.ಐ.ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್​ ಅಧ್ಯ ಕಾರ್ತಿಕ ಪಾಟೀಲ, ಬಸವರಾಜ ಬ್ಯಾಳಿ. ಎಂ.ಎ್​.ಸಿದ್ಧನಗೌಡರ, ಮಹಾಂತೇಶ ದಾಡಿಗುಂಡಿ, ಡಾ.ಆರ್​.ಎಸ್​.ಬಾಳಿಕಾಯಿ, ಗ್ರಾಪಂ ಅಧ್ಯೆ ಸಂಕೇತಾ ಹಟ್ಟಿಹೊಳಿ, ಸಂಗಪ್ಪ ಬೆಳಗಾವಿ, ರಾಜು
ಕಲಾಲ, ಸುರೇಶ ಗವನ್ನವರ, ಉದಯ ಚಿಕ್ಕನ್ನವರ, ಭೀಮಶಿ ಕಿವಡಿ, ಶೇಖರ ಸಣಕಲ್ಲ, ಸಂಜು ಬಸಯ್ಯ, ಪಲ್ಲವಿ ಇತರರಿದ್ದರು.