Kannada actress Ranya Rao
- ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ
- ನಟಿ ರನ್ಯಾ ರಾವ್ ಷರತ್ತು ಬದ್ದ ಜಾಮೀನು ಮಂಜೂರು
- ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯದಿಂದ ಜಾಮೀನು
ಬೆಂಗಳೂರು: 102 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕನ್ನಡದ ಮಾಣಿಕ್ಯ ಸಿನಿಮಾದ ನಟಿ Ranya Raoಗೆ ಒಂದು ವರ್ಷದ ಬಳಿಕ ಬಿಗ್ ರಿಲೀಫ್ ಸಿಕ್ಕಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯದಿಂದ ರನ್ಯಾರಾವ್ಗೆ ಬುಧವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿಯಾಗಿರುವ ರನ್ಯಾ ರಾವ್ ಅವರು ಕಳೆದ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಸದ್ಯ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಈ ಹಿಂದೆಯೂ ಸಿಕ್ಕಿತ್ತು ಬೇಲ್
ಈ ಕೇಸ್ನಲ್ಲಿ ಈ ಹಿಂದೆಯೇ ರನ್ಯಾ ರಾವ್ ಅವರಿಗೆ ಜಾಮೀನು ನೀಡಲಾಗಿತ್ತು. ಆದರೆ COFEPOSA ಜಾರಿಯಾಗಿದ್ದ ಹಿನ್ನೆಲೆ ಅವರು ಜೈಲಿನಲ್ಲೇ ಇರಬೇಕಾದ ಸ್ಥಿತಿ ಒದಗಿತ್ತು. ಜೊತೆಗೆ ಸುಪ್ರೀಂ ಕೋರ್ಟ್ ಸಹ ವಿದೇಶಿ ನಿಯಮ ಮತ್ತು ಕಳ್ಳಸಾಗಣೆ ತಡೆ ಕಾಯ್ದೆ ಅಡಿ ರನ್ಯಾ ರಾವ್ ಅವರ ವಿರುದ್ಧ ಕೇಂದ್ರ ಆರ್ಥಿಕ ಗುಪ್ತ ಚರ ಬ್ಯೂರೋ ಹೊರಡಿಸಿದ್ದ ಬಂಧನದ ಆದೇಶವನ್ನು ಎತ್ತಿ ಹಿಡಿದಿದ್ದ ಕಾರಣ ಅವರು ರಿಲೀಸ್ ಆಗಿರಲಿಲ್ಲ. ಇಂದಿಗೆ ಕಾಫಿಪೋಸಾ ಅಡಿಯಲ್ಲಿ ವಿಧಿಸಲಾದ ಒಂದು ವರ್ಷದ ಅವಧಿ ಪೂರ್ಣಗೊಂಡ ಹಿನ್ನೆಲೆ ರನ್ಯಾರಾವ್ ಅವರು ಜೈಲಿನಿಂದ ಸಂಜೆಯೇ ರಿಲೀಸ್ ಆಗುತ್ತಿದ್ದಾರೆ.
ಏನಿದು ಘಟನೆ?
2025 ಮಾರ್ಚ್ 3ರಂದು 102 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡುತ್ತಿರುವ ಆರೋಪದಡಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿತ್ತು. ಅದರಲ್ಲಿ 14. 80 ಕೆಜಿ ಚಿನ್ನ ಪತ್ತೆಯಾಗಿ, ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಕಾನೂನು ಕ್ರಮದ ಪ್ರಕಾರ ನಡೆದ ವಿಚಾರಣೆಯಡಿ, ಅವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ಹೈಕೋರ್ಟ್ ಪೀಠ ಅವರ ಜಾಮೀನು ಮಂಜೂರು ಅರ್ಜಿ ವಜಾಗೊಳಿಸಿತ್ತು. ಕೇಂದ್ರ ಆರ್ಥಿಕ ಬ್ಯೂರೋ ಸಹ ಅವರ ಮೇಲೆ ಕಾಫಿಪೋಸ ಅಡಿ ಬಂಧನ ಆದೇಶ ಹೊರಡಿಸಿದ್ದ ಕಾರಣ ಅವರು ಒಂದು ವರ್ಷದಿಂದ ಜೈಲಿನಲ್ಲಿ ಇದ್ದರು. ರನ್ಯಾ ರಾವ್ ಅವರ ಜೊತೆಗೆ ಮೈಸೂರಿನಲ್ಲಿರುವ ಅವರ ಸ್ನೇಹಿತ ತರುಣ್ ಕೊಂಡರಾಜು ಸಹ ಇಂದೇ ಬಿಡುಗಡೆಯಾಗುವ ಸಾಧ್ಯತೆ ಇದೆ.
COFEPOSA ಎಂದರೆ ಏನು?
ಇದು ಕಠಿಣ ಕಾನೂನು ಕ್ರಮ. ವಿದೇಶಿ ವಿನಿಮಯ ಉಲ್ಲಂಘನೆ ಮತ್ತು ಚಿನ್ನದ ವಸ್ತುಗಳ ಅಕ್ರಮ ಸಾಗಣೆ ತಡೆಯಲು ಬಳಸಲಾಗುತ್ತದೆ, (ಏಜೆನ್ಸೀಸ್).