actor shivarajkumar Birthday
ಜುಲೈ 12ರಂದು ಎನರ್ಜಿಟಿಕ್ ಸ್ಟಾರ್ ಶಿವರಾಜ್ ಕುಮಾರ್ ಅವರು 64ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಾಮಾನ್ಯವಾಗಿ ಅವರ ಹುಟ್ಟುಹಬ್ಬ ಸೆಲಬ್ರೇಷನ್ಗೆ ಅಭಿಮಾನಿಗಳು ಅವರ ನಿವಾಸದ ಮುಂದೆ ಸೇರುತ್ತಾರೆ. ಕೇಕ್, ಶಾಲು, ಫೋಟೋ ಫ್ರೇಮ್, ದೊಡ್ಡ ದೊಡ್ಡ ಹೂವಿನ ಹಾರ ಸೇರಿದಂತೆ ನಾನಾ ವಸ್ತುಗಳನ್ನು ಅರ್ಪಿಸುತ್ತಾರೆ. ಆದರೆ, ಇದೇನು ಬೇಡ ಎನ್ನುವ ಸಿಂಪಲ್ ರಿಕ್ವೆಸ್ಟ್ ಅನ್ನು ಶಿವಣ್ಣ ಮುಂದಿಟ್ಟಿದ್ದಾರೆ.
ನಟ ಶಿವರಾಜ್ ಕುಮಾರ್ ಅವರು ಹುಟ್ಟುಹಬ್ಬ ದಿನಕ್ಕೂ ಮುನ್ನವೇ ವಿಡಿಯೋ ಮಾಡಿದ್ದಾರೆ. ಅದರಲ್ಲಿ ಅವರು,
ಈ ಬಾರಿ ಜು.12ಕ್ಕೆ ಅಭಿಮಾನ ಮಾತ್ರ ಹೊತ್ತು ತನ್ನಿ ಬೇರೆ ಯಾವುದೇ ವಸ್ತು ಬೇಡ. ಅದಕ್ಕೆ ಖರ್ಚು ಮಾಡುವ ಹಣವನ್ನು ಬಡ ಮಕ್ಕಳಿಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಶಿವಣ್ಣ ವಿಡಿಯೋದಲ್ಲಿ ಏನು ಹೇಳಿಕೊಂಡಿದ್ದಾರೆ
ಜುಲೈ 12ರಂದು ಬನ್ನಿ ಬರುವಾಗ ಹಾರ, ಶಾಲು ಯಾವುದೇ ವಸ್ತುಗಳು ಬೇಡ. ನಿಮ್ಮ ಅಭಿಮಾನ ಹಾಗೂ ಆಶೀರ್ವಾದವನ್ನು ಹೊತ್ತು ತನ್ನಿ. ಆದರೆ ನಿಮ್ಮ ಪರವಾಗಿ ನಾನು ಕೇಕ್ ಕಟ್ ಮಾಡುತ್ತೇನೆ. ನನಗೆ ಪ್ರೀತಿಯಿಂದ ಆಶೀರ್ವಾದಿಸಿ ಎಲ್ಲರೂ ಒಟ್ಟಾಗಿ ಸೇರೋಣ, ಮಜ ಮಾಡೋಣ ತ್ಯಾಂಕ್ಯು ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಪೆದ್ದಿ ಸಿನಿಮಾದಲ್ಲಿ ಗುರು ನಾಯ್ಡು ಆಗಿ ಶಿವಣ್ಣ ಮಿಂಚಿದ್ದರು. ಸದ್ಯ 666 ಆಪರೇಷನ್ ಡ್ರೀಮ್ ಥಿಯೇಟರ್, ಬೇಲ್, ಜೈಲರ್2 ಹಾಗೂ ಇನ್ನಿತರ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿದೆ. ಕ್ಯಾನ್ಸರ್ ಟ್ರೀಟ್ಮೆಂಟ್ಗಾಗಿ ವಿದೇಶಕ್ಕೆ ತೆರಳಿದ್ದ ಶಿವಣ್ಣ ಅವರು ಅಲ್ಲಿಂದ ವಾಪಸ್ ಬಂದಾಗ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ.