- ಬರ ಪಟ್ಟಿಯಿಂದ ಯಾದಗಿರಿ-ಗುರುಮಠಕಲ್ ಔಟ್
- ಉಸ್ತುವಾರಿ ಸಚಿವರಿಗೆ ಶಾಕ್ ನೀಡಿದ ಶಾಸಕ
ಯಾದಗಿರಿ: ಮಳೆ ಇಲ್ಲದೆ ಸಂಕಷ್ಟ ಎದುರಿಸುತ್ತಿರುವ ಗುರುಮಠಕಲ್ ಮತ್ತು ಯಾದಗಿರಿ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಸೆ.೭ ಮತ್ತು ೮ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಕೆಡಿಪಿ ತ್ರೈಮಾಸಿಕ ಸಭೆ ಬಹಿಷ್ಕರಿಸಲು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ನಿರ್ಧಾರಿಸಿದ್ದಾರೆ.
ವಿರೋಧ ಪಕ್ಷದ ಶಾಸಕನಾಗಿ ಜನರ ಸಮಸ್ಯೆ ಸರ್ಕಾರ ಮುಂದೆ ಇಡುವ ಜವಾಬ್ದಾರಿ ತಮ್ಮ ಮೇಲಿದೆ. ಬೆಳೆ ಹಾನಿ ಕುರಿತು ಅಽಕಾರಿಗಳು ಪರಿಶೀಲನೆ ನಡೆಸಿ, ಬರ ಘೋಷಣೆಗೆ ಪೂರಕ ಅಂಶಗಳ ವರದಿ ಸಲ್ಲಿಸಿದ್ದರೂ,ಅಂತಿಮ ಪಟ್ಟಿಯಲ್ಲಿ ಎರಡು ತಾಲೂಕು ಹೊರಗುಳಿದಿರುವುದು ಅಚ್ಚರಿಯಾಗಿದೆ. ಜಿಲ್ಲೆ ಯಲ್ಲಿ ಗುಳೆ ಹೋಗುವವರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಗುರುಮಠಕಲï ಕ್ಷೇತ್ರದ ಬಡ ಹಾಗೂ ಸಣ್ಣ ರೈತರೇ ಹೆಚ್ಚು ಗುಳೆ ಹೋಗುತ್ತಿರುವುದು ಗೊತ್ತಿದ್ದೂ ನಿರ್ಲಕ್ಷ್ಯ ಮಾಡಿದ್ದನ್ನು ಸರಿಯಲ್ಲ ಎಂದು ಜಿಲ್ಲಾಽಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ಚರಂಡಿ ಸ್ವಚ್ಛತೆ, ನೀರು ಪೂರೈಸಲು ನಿರ್ಲಕ್ಷ್ಯ ಮಾಡುತ್ತಿರುವುದನ್ನ್ನು ಬರಗಾಲ ಸಭೆಯಲ್ಲಿ ಜಿಲ್ಲೆ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲïರ ಗಮನಕ್ಕೆ ತಂದಾಗ ಗ್ರಾಪಂಗಳಲ್ಲಿ ಹಣವಿದ್ದು ಕೆಲಸ ಮಾಡುತ್ತಾರೆ ಎಂದರು. ಆದರೆ, ಇದುವರೆಗೂ ಆಗಿಲ್ಲ. ಗ್ರಾಪಂಗಳಲ್ಲಿ ಹಣವೇ ಇಲ್ಲ ಎಂಬುದು ಗೊತ್ತಾಗಿದೆ.ಕಡೆಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಅನಿಲ ಸೋರಿಕೆಯಿಂದ ಮೂವರು ಕಾರ್ಮಿಕರು ಮೃತಪಟ್ಟು ತಿಂಗಳಾದರೂ ಕಂಪನಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಸರ್ಕಾರ ಕೂಡಲೇ ಯಾದಗಿರಿ, ಗುರುಮಠಕಲ್ ತಾಲೂಕು ಬರ ಪಟ್ಟಿಗೆ ಸೇರಿಸಿ ಪರಿಹಾರ ಕಾರ್ಯ ಆರಂಭಿಸಲು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಕೆಕೆಆರ್‌ಡಿಬಿಯ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಮಂಡಳಿ ಕಾರ್ಯದರ್ಶಿಗಳ ಕಾರ್ಯವೈಖರಿಯಿಂದ ಅಽಕಾರಿಗಳು ಮೇಲಿಂದ ಮೇಲೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊAಡಿದೆ ಎಂದು ಪತ್ರದಲ್ಲಿ ಕಂದಕೂರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಸಮಸ್ಯೆ ಟಿಸಿ ಕೊರತೆ
ಯಾದಗಿರಿ ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಅಲ್ಪಸ್ವಲ್ಪ ನೀರಾವರಿ ಹೊಂದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟಿಸಿ ಸುಟ್ಟರೆ ತಿಂಗಳುಗಟ್ಟಲೇ ಬದಲಾವಣೆ ಮಾಡದೆ ರೈತರನ್ನು ಅಲೆದಾಡಿಸಲಾಗುತ್ತಿದೆ. ಟಿಸಿ ಕೊರತೆ ಇಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ರೈತರಿಂದ ಹಣ ಪಡೆಯುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸ್ ವ್ಯವಸ್ಥೆ ವಿರುದ್ದ ಆಕ್ರೋಶ
ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಯಿಮ್ಸ್ ಆಸ್ಪತ್ರೆವರೆಗೂ ಔಷಧಗಳ ಕೊರತೆ ಇದೆ. ಅಪಘಾತ, ಹಾವು ಕಡಿತ, ನಾಯಿ ಕಡಿತ ಮೊದಲಾದ ತುರ್ತು ಸಂದರ್ಭಗಳಲ್ಲಿ ಬಡವರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿದೆ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ, ಮುರುಮ್ ಕ್ವಾರಿ, ಮಟ್ಕಾ ಹಾಗೂ ಇಸ್ಪೀಟ್ ದಂಧೆ ತಡೆಯುವಲ್ಲಿ ಪೊಲೀಸ್ ವ್ಯವಸ್ಥೆ ವಿಶಾಲವಾಗಿದೆ. ನೊಂದವರಿಗೆ ನ್ಯಾಯ ದೊರಕಬೇಕಾದ ಪೊಲೀಸ್ ಠಾಣೆ ಜನ ಸಾಮಾನ್ಯರಿಗೆ ಭರವಸೆ ಬದಲು ಭಯ ಮೂಡಿಸುತ್ತಿವೆ ಎಂದು ಪತ್ರದಲ್ಲಿ ಗುರುಮಠಕಲ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರು-ಶಿಕ್ಷಣ ಸಮಸ್ಯೆ
ಮಳೆ ಇಲ್ಲದೇ ಅಂತರ್ಜಲ ಕುಸಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಜಲ ಜೀವನ ಮಿಷನ್ ಯೋಜನೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿದೆ, ಜನರಿಗೆ ತಲುಪುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಬಡ ಕುಟುಂಬಗಳು ಶುಲ್ಕ ಭರಿಸಲು ಪರದಾಡುವಂತಾಗಿದೆ ಎಂದು ಶರಣಗೌಡ ತಿಳಿಸಿದ್ದಾರೆ.