ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿರುವ ಕಂದಹಳ್ಳಿ ಮಹದೇಶ್ವರ ಸ್ವಾಮಿಗೆ ಭಕ್ತರೊಬ್ಬರು ನೀಡಿರುವ ಬೆಳ್ಳಿ ಕವಚ.
- ಕಂದಹಳ್ಳಿ ಗ್ರಾಮ
- ಐತಿಹಾಸಿಕ ಕಂದಹಳ್ಳಿ ಮಹದೇಶ್ವರ
ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಕಂದಹಳ್ಳಿ ಮಹದೇಶ್ವರನಿಗೆ ಭಕ್ತರೊಬ್ಬರು ನೀಡಿರುವ ಬೆಳ್ಳಿ ಕವಚವನ್ನು ಜು. 14 ರಂದು ಧಾರಣೆ ಮಾಡಲಾಗುತ್ತದೆ.
ಅಮವಾಸ್ಯೆ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ಕಾರಾಪುರ ವಿರಕ್ತ ಮಠದ ಶ್ರೀ ಬಸವರಾಜಸ್ವಾಮಿ ಒಡೆಯರ್ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಲಿಂಗ ಧಾರಣೆ ಮಾಡಲಾಗುವುದು. ಭಕ್ತರೊಬ್ಬರು ನೀಡಿರುವ ಈ ಬೆಳ್ಳಿ ಕವಚ 6.5 ಕಿಲೋ ತೂಕವಿದ್ದು, ದೇಗುಲದಲ್ಲಿ ಈಗಾಗಲೇ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗಿದೆ. ಪ್ರತಿ ಅಮವಾಸ್ಯೆ ದಿನದಂದು ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಸೇವೆ ನೆರವೇರಲಿದ್ದು, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ದೇಗುಲದ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.