ಯಾದಗಿರಿಯ ನಿವೇದಿತಾ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕನಕ ದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ರಾಮಚಂದ್ರಪ್ಪ ಪೂಜಾರಿ ಮಾತನಾಡಿದರು.ಪ್ರೋ.ಶಶಿಧರ ಯಾದಗಿರಿ, ಗೋವಿಂದ ಚವ್ಹಾಣ್, ಉಮಾದಾಸನ್, ಅರ್ಚನಾ ದೇಸಾಯಿ, ಶರಣಬಸಪ್ಪ ಪೊಲೀಸ್ ಪಾಟೀಲ್ ಇತರರಿದ್ದರು. 
ರಾಜ್ಯ

ಕನಕದಾಸರ ಆದರ್ಶ ಯುವಕರಿಗೆ ದಾರಿದೀಪ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ರಾಮಚಂದ್ರಪ್ಪ ಪೂಜಾರಿ ಅಭಿಮತ
  • ಕನಕ ದರ್ಶನ ಉಪನ್ಯಾಸ ಕಾರ್ಯಕ್ರಮ
ಯಾದಗಿರಿ:

ಯುವಕರು ಮಹಾನ್ ವ್ಯಕ್ತಿಗಳ ಆದರ್ಶ ಮತ್ತು ಅವರ ಜೀವನ ಮೌಲ್ಯ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯ ಸಾಹಿತಿ ರಾಮಚಂದ್ರಪ್ಪ ಪೂಜಾರಿ ಹೇಳಿದರು.

ಕಾಗಿನೆಲೆ ಅಭಿವೃದ್ಧಿ ಪ್ರಾಽಕಾರ, ಕಾಗಿನೆಲೆ ಹಾಗೂ ಜ್ಯೋತಿರ್ಗಮಯ ಸೇವಾ ಸಂಸ್ಥೆಯಿAದ ಇಲ್ಲಿನ ನಿವೇದಿತಾ ಪದವಿಪೂರ್ವ ಕಾಲೇಜಿನಲ್ಲಿ ಯುವಜನತೆಗೆ ಕನಕದಾಸರ ಆದರ್ಶ ಮತ್ತು ಜೀವನ ಸಂದೇಶ ವಿಷಯದ ಕುರಿತು ಆಯೋಜಿಸಿದ್ದ ಕನಕ ದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನ್ಯಾಸ ನೀಡಿದ ಇತಿಹಾಸದ ಪ್ರಾಧ್ಯಾಪಕ ಗೋವಿಂದ ಚವ್ಹಾಣ್, ಕನಕದಾಸರು ಸಾರಿದ ಸಮಾನತೆ, ಮಾನವೀಯತೆ, ಭಕ್ತಿ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವ ಇಂದಿನ ಪೀಳಿಗೆಗೆ ಅತ್ಯಂತ ಪ್ರಸ್ತುತವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಅವರ ಜೀವನ ಸಂದೇಶ ಅರ್ಥೈಸಿಕೊಂಡು ಜೀವನದಲ್ಲಿ ಪಾಲನೆ ಮಾಡಬೇಕು ಎಂದರು.
ಉಪನ್ಯಾಸಕಿ ಉಮಾ ದಾಸನ, ಕನಕದಾಸರು ಕನ್ನಡ ನಾಡು ಕಂಡ ಅಪರೂಪದ ಸಂತ-ಕವಿ, ಸಮಾಜ ಸುಧಾರಕ ಹಾಗೂ ಮಹಾನ್ ಚಿಂತಕರಾಗಿದ್ದರು. ಅವರು ತಮ್ಮ ಸಾಹಿತ್ಯ, ಕೀರ್ತನೆಗಳು ಮತ್ತು ತತ್ವಗಳ ಮೂಲಕ ಸಮಾಜದಲ್ಲಿ ಸಮಾನತೆ, ಸಹೋದರತೆ ಹಾಗೂ ಮಾನವೀಯತೆಯ ಸಂದೇಶ ಸಾರಿದ್ದಾರೆ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಮಹೇಶ್ ಪತ್ತಾರ ಮಾತನಾಡಿ, ಇಂದಿನ ಯುವಜನತೆ ಮೊಬೈಲ್ ಮತ್ತು ಸಾಮಾಜಿಕ ಜÁಲತಾಣಗಳ ಪ್ರಭಾವದಲ್ಲಿ ತಮ್ಮ ಗುರಿಯಿಂದ ದೂರ ಸರಿಯುತ್ತಿರುವ ಸಂದರ್ಭದಲ್ಲಿ, ಕನಕದಾಸರ ಆದರ್ಶ ವಿದ್ಯಾರ್ಥಿಗಳಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸೂರ್ತಿಯಾಗುತ್ತವೆ ಎಂದರು. ಪ್ರೋ.ಶಶಿಧರ ಯಾದಗಿರಿ, ಗೋವಿಂದ ಚವ್ಹಾಣ್, ಉಮಾದಾಸನ್, ಅರ್ಚನಾ ದೇಸಾಯಿ, ಶರಣಬಸಪ್ಪ ಪೊಲೀಸ್ ಪಾಟೀಲ್ ಇತರರಿದ್ದರು. ಶಿಕ್ಷಕಿ ಶಾಹಿನ್ ಬೇಗಂ ನಿರೂಪಿಸಿದರು. ಸಚೀನ್ ಬಳಬಟ್ಟಿ ಪ್ರಾರ್ಥಿಸಿದರು. ರವಿಚಂದ್ರನ್ ವಂದಿಸಿದರು.