ಸಾವಳಗಿ ಗ್ರಾಮದ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡರು. ರವಿಕುಮಾರ ಮಗದುಮ್ಮ, ವೀರಭದ್ರ ದಂಡಿನ, ಶಿವಾನಂದ ಕೋಟಬಾಗಿ, ಆನಂದ ಸಣ್ಣಕ್ಕಿ, ಶಂಕರ ಹಿರೇಮಠ, ರಮೇಶ ಮಗದುಮ್ಮ, ಭರಮ ಗುಂಡಕಲ್ಲ ಇತರರಿದ್ದರು. 
ರಾಜ್ಯ

ಕಂಬಿ ಮಲ್ಲಯ್ಯ ಪಾದಯಾತ್ರೆಗೆ ಚಾಲನೆ

ಸಾವಳಗಿ: ಗ್ರಾಮದಲ್ಲಿ ಕಂಬಿ ಮಲ್ಲಯ್ಯ ಶ್ರೀಶೈಲ ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಲಾಯಿತು. ಗ್ರಾಮದ ಮಲ್ಲಯ್ಯನ ದೇವಸ್ಥಾನದಲ್ಲಿ ಬೆಳಗ್ಗೆ ದೇವರ ಮೂರ್ತಿಗೆ ಪೂಜೆ, ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರು ಕಂಬಿ ಮಲ್ಲಯ್ಯ ಪವಿತ್ರ ಪಲ್ಲಕ್ಕಿ ಹೊತ್ತ ಮೆರವಣಿಗೆ ಭಜನೆ, ಸಂಗೀತದೊಂದಿಗೆ ವಿವಿಧ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಮಾರ್ಗದಲ್ಲಿ ಸಂಚರಿಸಿ ಮುಂದೆ ಸಾಗಿತು. ಕೆಲ ಭಕ್ತರು ಕಂಬದ ಮೇಲೆ ನಡೆಯುವ ಮೂಲಕ ಭಕ್ತಿಸೇವೆ ಸಮರ್ಪಿಸಿದರು. ಪಾದಯಾತ್ರಿಕರಿಗೆ ಗ್ರಾಮಸ್ಥರು ದಾರಿಯುದ್ದಕ್ಕೂ ಹೂವಿನ ಮಳೆಗೈದು ಆರತಿ ಬೆಳಗಿ ಸ್ವಾಗತಿಸಿದರು. ಭಕ್ತರಿಗೆ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ರವಿಕುಮಾರ್​ ಮಗದುಮ್ಮ, ವೀರಭದ್ರ ದಂಡಿನ, ಶಿವಾನಂದ ಕೋಟಬಾಗಿ, ಆನಂದ ಸಣ್ಣಕ್ಕಿ, ಶಂಕರ ಹಿರೇಮಠ, ರಮೇಶ ಮಗದುಮ್ಮ, ಭರಮ ಗುಂಡಕಲ್ಲ, ಕುಮಾರ ಬಸ್ತವಾಡ ಇತರರಿದ್ದರು.