ಮುನವಳ್ಳಿ ಪಟ್ಟಣದ ಕಾಳಿಕಾದೇವಿ ದೇವಸ್ಥಾನ ಉದ್ಘಾಟಿಸಿದ ನಿಮಿತ್ತ ಶಾಸಕ ವಿಶ್ವಾಸ ವೈದ್ಯ ಅವರನ್ನು ಸನ್ಮಾನಿಸಲಾಯಿತು. ಮುರುಂದ್ರ ಶ್ರೀ, ಮುಕ್ತಾನಂದ ಶ್ರೀ, ಸಿ.ಬಿ.ಬಾಳಿ ಇತರರಿದ್ದರು. 
ರಾಜ್ಯ

ಕಾಳಿಕಾದೇವಿ ಮಂದಿರ ಅಭಿವೃದ್ಧಿಗೆ ಬದ್ಧ

ಎಂ.ಎಸ್​.ಹಿರೇಮಠ ಬೆಳಗಾವಿ
ಮುನವಳ್ಳಿ: ಐದು ವರ್ಷಗಳಿಂದ ಸಾಮೂಹಿಕ ಉಪನಯನ ಕಾರ್ಯಕ್ರಮ ಉಚಿತವಾಗಿ ಮಾಡುತ್ತಿರುವ ವಿಶ್ವಕರ್ಮ ಸಮುದಾಯ ಹಾಗೂ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್​ ಕಮಿಟಿ ಕಾರ್ಯ ಶ್ಲಾನೀಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್​ ಕಮಿಟಿ, ಗಾಯಿತ್ರಿ ಮಹಿಳಾ ಮಂಡಳ, ವಿಶ್ವಕರ್ಮ ಯುವಕ ಮಂಡಳ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ಕಾಳಿಕಾದೇವಿ ಜಾತ್ರೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಅರ್ಹ ಸಮುದಾಯಗಳ ಸಾಮೂಹಿಕ ಉಚಿತ ಉಪನಯನ ಹಾಗೂ 20 ಲ ರೂ. ಅನುದಾನದಲ್ಲಿ ದೇವಸ್ಥಾನದ ಯಾತ್ರಿ ನಿವಾಸ ಉದ್ಘಾಟಿಸಿ ಮಾತನಾಡಿದರು. ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಅಭಿವೃದ್ಧಿಗೆ 20 ರಿಂದ 30 ಲ ರೂ. ಅನುದಾನ ನೀಡುವ ಭರವಸೆ ವ್ಯಕ್ತಪಡಿಸಿದರು. ಪುರಸಭೆ ಅಧ್ಯ ಸಿ.ಬಿ.ಬಾಳಿ ಹಾಗೂ ಸವದತ್ತಿ ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ ಮಾತನಾಡಿ, ಶಾಸಕ ವಿಶ್ವಾಸ ವೈದ್ಯ ಪ್ರಯತ್ನದಿಂದ ಕಾಳಿಕಾದೇವಿ ದೇವಸ್ಥಾನ ಸಮಗ್ರ ಅಭಿವೃದ್ಧಿ ಹೊಂದುತ್ತಿದೆ ಎಂದರು. ಸೋಮಶೇಖರ ಮಠದ ಮುರುಂದ್ರ ಶ್ರೀಗಳು ಹಾಗೂ ಶಿಂದೋಗಿಯ ಮುಕ್ತಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ವಿಶ್ವಕರ್ಮ ಸಮುದಾಯ ಕಲಾತ್ಮಕತೆಯಲ್ಲಿ ನೈಪುಣ್ಯ ಸಾಧಿಸಿ ಸ್ವಾಭಿಮಾನದಿಂದ ಬದುಕುತ್ತಿದೆ ಎಂದರು. 46 ವಟುಗಳಿಗೆ ಉಪನಯನ ಜರುಗಿಸಲಾಯಿತು. ಜಾತ್ರೆ ಪ್ರಯುಕ್ತ ಕಾಳಿಕಾದೇವಿಗೆ ವಿಶೇಷ ಅಲಂಕಾರ ಪೂಜೆ, ಪಲ್ಲಕ್ಕಿ ಉತ್ಸವ, ಕಾರ್ತಿಕೋತ್ಸವ ಹಾಗೂ ಮಹಾಪ್ರಸಾದ ಜರುಗಿತು. ದೇವಸ್ಥಾನ ಟ್ರಸ್ಟ್​ ಕಮಿಟಿ ಅಧ್ಯ ಮೌನೇಶ ಮಾಯಾಚಾರಿ, ಪುರಸಭೆ ಸದಸ್ಯ ಡಿ.ಡಿ.ಕಿನ್ನೂರಿ, ರಾಮಲಿಂಗ ಕೋರೆ, ಸದಸ್ಯರಾದ ವಿನಾಯಕ ಪತ್ತಾರ, ಮೌನೇಶ ಬಡಿಗೇರ, ಕಾಳಪ್ಪ ಬಡಿಗೇರ, ಮಂಜುನಾಥ ಬಡಿಗೇರ, ಗುರುನಾಥ ಪತ್ತಾರ, ನಾರಾಯಣ ಕಮ್ಮಾರ, ಅರ್ಜುನ ಬಡಿಗೇರ, ಜಗದೀಶ ಬಡಿಗೇರ, ನಾಗರಾಜ ಬಡಿಗೇರ, ನಾಗು ಹಿರೂರ, ವಿನಾಯಕ ಅರ್ಕಸಾಲಿ, ಮಂಜುನಾಥ ಶಹಾಪುರ, ಮಹಾಂತೇಶ ಬಡಿಗೇರ, ವೀರು ಬಡಿಗೇರ, ಮಂಜು ಬಡಿಗೇರ. ಮೌನೇಶ ಬಡಿಗೇರ, ಶಿವು ಬಡಿಗೇರ, ಪುಲಕೇಶಿ ಗರಗ ಇತರರಿದ್ದರು.