ಕಾಳಗಿ: ಪಟ್ಟಣದ ಶೀಸದ್ಗುರುನಾಥರ ಆರಾಧನ ಮಹೋತ್ಸವ ದಿನಾಂಕ:07-05-2026ರ ಗುರುವಾರ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಸುರೇಶ ಅಷ್ಟಗಿ ತಿಳಿಸಿದ್ದಾರೆ.
ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ ಸಂಜೆ 06-00ಗಂಟೆಗೆ ಅರ್ಚಕ ಶರಣಪ್ಪ ಆಚೇರಿ ಮನೆಯಿಂದ ದೇವಸ್ಥಾನದವರೆಗೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ.
ನಂತರ ಸದ್ಗುರುನಾಥರ ಗದ್ದುಗೆಗೆ ಮಹಾಪೂಜೆಗೈದ ಬಳಿಕ ಸರ್ವ ಭಕ್ತಾದಿಗಳಿಗೆ ಮಹಾಪ್ರಸಾದ ಮಾಲ್ದಿ ಊಟ ಬಡಿಸಲಾಗುವುದು.
ವಿವಿಧ ಗ್ರಾಮಗಳಿಂದ ಆಗಮಿಸುವ ಭಜನಾ ಮಂಡಳಿಗಳಿಂದ ಬೆಳಗಿನ ಜಾವದವರೆಗೆ ಭಜನೆ ಜರುಗಲಿದೆ ಎಂದು ತಿಳಿಸಿದ್ದಾರೆ.