ಕರ್ನಾಟಕ ಲೇಖಕಿಯರ ಸಂಘ  
ರಾಜ್ಯ

ಕಲೇಸಂ ಅಧ್ಯಕ್ಷ ಸ್ಥಾನಕ್ಕೆ ಡಿ. 14ರಂದು ಚುನಾವಣೆ

ಪ್ರಮುಖ ಮುಖ್ಯಾಂಶಗಳು

  • ಶಂಕರಪುರದಲ್ಲಿರುವ ಅಶೋಕ ಶಿಶುವಿಹಾರದಲ್ಲಿ ಮತದಾನ
  • ರಾಜ್ಯಾದ್ಯಂತ 1,600 ಮತದಾರರು
  • ಬೆಂಗಳೂರಿನಲ್ಲಿ 700 ಮತದಾರರಿಂದ ಮತದಾನ
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ (ಡಿ. 14) ಚುನಾವಣೆ ನಡೆಯುತ್ತಿದ್ದು, ಲೇಖಕಿಯರಾದ ಆರ್. ಸುನಂದಮ್ಮ ಮತ್ತು ನಿರ್ಮಲಾ ಸಿ. ಎಲಿಗಾರ್ ಸ್ಪರ್ಧೆಯಲ್ಲಿದ್ದಾರೆ.
ಚುನಾವಣೆ ಕಣದಲ್ಲಿರುವ ಈ ಇಬ್ಬರು ಸ್ಪರ್ಧಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ರಾಜ್ಯಾದ್ಯಂತ ಸುಮಾರು 1,600 ಮತದಾರಿದ್ದಾರೆ. ಇವರಲ್ಲಿ ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲೆಗಳಿಂದ ಅಂಚೆ ಮೂಲಕ ಮತದಾನ ನಡೆದಿದ್ದು, ಮತಪತ್ರಗಳು ಈಗಾಗಲೇ ನಗರ ತಲುಪಿವೆ. ಭಾನುವಾರ ಕೇವಲ ಬೆಂಗಳೂರು ಜಿಲ್ಲೆಯಲ್ಲಿ ಮತದಾನ ನಡೆಯಲಿದ್ದು, 700 ಮತದಾರರು ಮತ ಚಲಾಯಿಸಲಿದ್ದಾರೆ.
ಬೆಂಗಳೂರಿನ ಶಂಕರಪುರದಲ್ಲಿರುವ ಅಶೋಕ ಶಿಶುವಿಹಾರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಆರ್. ಪ್ರತಿಭಾ ತಿಳಿಸಿದ್ದಾರೆ.