ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಶಂಕರ ಬೋಳನ್ನವರ ರೈತರಿಗೆ ಸಸಿ ವಿತರಿಸಿದರು. ಅಪ್ಪಾಸಾಹೇಬ ಲಕ್ಕುಂಡಿ, ಆನಂದಗೌಡ ಪಾಟೀಲ, ಮಲ್ಲಿಕಾರ್ಜುನ ಮರಕುಂಬಿ, ನೀಲಾಂಬಿಕಾ ಪಾಟೀಲ ಇತರರಿದ್ದರು. 
ರಾಜ್ಯ

ಕಳಸಾ ಬಂಡೂರಿ ಜಾರಿಗೊಳಿಸಿ

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ರೈತರ ಜೀವನದೊಂದಿಗೆ ಚೆಲ್ಲಾಟವಾಡದೆ ಕಳಸಾ&ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿಗೊಳಿಸಲು ಸರ್ಕಾರಗಳು ಶ್ರೀ ಮುಂದಾಗಬೇಕು ಎಂದು ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂದ ಅಧ್ಯಕ್ಷ ಶಂಕರ ಬೋಳನ್ನವರ ಆಗ್ರಹಿಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕರುನಾಡ ರಣಾ ವೇದಿಕೆ, ಸಾಂಗ್ಲಿಯ ಗೋಧ್​ ೌಂಡೇಷನ್​, ಕುಲ್ಲೋಳ್ಳಿ ನೇತ್ರಾಲಯ ಹಾಗೂ ರೈತ ಸಂಟನೆಗಳ ಸಂಯುಕ್ತಾಶ್ರಯದಲ್ಲಿ 46ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಣ್ಣು ತಪಾಸಣೆ ಉಚಿತ ಶಿಬಿರ, ರೈತರಿಗೆ ಶಾಲು ಹಾಗೂ ಸಸಿ ವಿತರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ರೈತರ ಬಹುದಿನಗಳ ಬೇಡಿಕೆಯಾಗಿರುವ ಕಳಸಾ&ಬಂಡೂರಿ ನಾಲಾ ಜೋಡಣೆ ಯೋಜನೆ ಅನುಷ್ಠಾನಗೊಂಡರೆ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರ ತ್ವರಿತ ನಿರ್ಧಾರ ಕೈಗೊಂಡು ಯೋಜನೆ ಅನುಷ್ಠಾನಗೊಳಿಸಬೇಕು. ರೈತರ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ರೈತರು ದೇಶದ ಬೆನ್ನೆಲುಬು. ಅನ್ನ ನೀಡುವ ರೈತರ ಹಿತ ರಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರೈತಪರ ಬೇಡಿಕೆ ಈಡೇರಿಕೆಗೆ ಹೋರಾಡಿ ಹುತಾತ್ಮರಾದ ರೈತರ ತ್ಯಾಗ ಎಂದಿಗೂ ಮರೆಯಬಾರದು ಎಂದರು.
ಆರೋಗ್ಯ ಶಿಬಿರ: 202 ಜನ ಕಣ್ಣು ಹಾಗೂ 204 ಬಿಪಿ, ಶುಗರ್​ ತಪಾಸಣೆ ಮಾಡಿಸಿಕೊಂಡರು. 26 ಜನರು ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದರು.
ಕರುನಾಡ ರಣಾ ವೇದಿಕೆಯ ಉತ್ತರ ಕರ್ನಾಟಕ ರೈತ ಟಕದ ಅಧ್ಯಕ್ಷ ಅಪ್ಪಾಸಾಹೇಬ ಲಕ್ಕುಂಡಿ ಹಾಗೂ ಜಿಲ್ಲಾ ಸಂಚಾಲಕ ಆನಂದಗೌಡ ಪಾಟೀಲ, ಪತ್ರಕರ್ತ ಮಹಾಂತೇಶ ತುರಮರಿ, ಕರುನಾಡು ರಣಾ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ, ನೀಲಾಂಬಿಕಾ ಪಾಟೀಲ, ಮಂಜುನಾಥ ಜಲ್ಲಿ, ವಕೀಲರಾದ ಬಿ.ಬಿ.ಹುಲಮನಿ, ಈರಣ್ಣಗೌಡ ಪಾಟೀಲ, ಮುಖಂಡರಾದ ನಿಂಗಪ್ಪ ಪೋತಲಿ, ಹನುಮಂತ ದೊಡ್ಡನವರ, ಈರಯ್ಯ ಪೂಜೇರಿ, ವಿಠ್ಠಲ ಬಂಡಿವಡ್ಡರ, ಪರೀದಾ ನದ್​ಾ, ಬಸವರಾಜ ನುಗ್ಗಾನಟ್ಟಿ, ಗಾಯತ್ರಿ ಸುಲಧಾಳ, ಸದಾಶಿವ ನಾವಿ, ಬಸವರಾಜ ಹೋಟಕರ, ಅಶೋಕ ಮತ್ತಿಕೊಪ್ಪ, ಪುಂಡಲೀಕ ಹೋಟಿ, ಜುಂಜಪ್ಪ ಪೂಜೇರಿ, ಮಹಾಂತೇಶ ಗುಂಡ್ಲೂರ, ಶ್ರೀಕಾಂತ ಶಿರಹಟ್ಟಿ, ರಾಜು ಸಂಗೊಳ್ಳಿ ಹಾಗೂ ರೈತರು ಪಾಲ್ಗೊಂಡಿದ್ದರು..