ಕಾಳಗಿಯ ನಂದೂರಿನ ಶಿವಲಿಂಗೇಶ್ವರ ದೇವಸ್ಥಾನ ಹತ್ತಿರದ ನಾಲಾಕ್ಕೆ ಅಡ್ಡಲಾಗಿ ನಿರ್ಮಿಸುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಾಗಾರಿಗೆ ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಚಾಲನೆ ನೀಡಿದರು. ಶ್ರೀ ಚಂದ್ರಗುಂಡ ಶಿವಾಚಾರ್ಯರು, ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಶ್ರೀ ನೀಲಕಂಠ ಮರಿದೇವರು, ರಾಜೇಶ ಗುತ್ತೇದಾರ್ ಇತರರಿದ್ದರು.
- ಜಿಪಂ ಮಾಜಿ ಸದಸ್ಯ ರಾಜೇಶ ಶ್ಲಾಘನೆ
- ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಹಾರಕೂಡ ಶ್ರೀ ಚಾಲನೆ
ಕಾಳಗಿ: ಭರತನೂರ ರಸ್ತೆ ಮಾರ್ಗದಲ್ಲಿನ ನಂದೂರ ಶಿವಲಿಂಗೇಶ್ವರ ದೇವಸ್ಥಾನ ಹತ್ತಿರ ನಾಲಕ್ಕೆ ಅಡ್ಡಲಾಗಿ 5 ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣವಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಹಾರಕೂಡದ ಶ್ರೀ ಡಾ. ಚನ್ನವಿರ ಶಿವಾಚಾರ್ಯರು ಶುಕ್ರವಾರ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜೇಶ ಗುತ್ತೇದಾರ್ ಮಾತನಾಡಿ, ಎಂಎಲ್ಸಿ ಜಗದೇವ ಗುತ್ತೇದಾರ್ ಅವರ ಅನುದಾನದಡಿ ಎಸ್ಬಿಐ ಬ್ಯಾಂಕ್ ಹತ್ತಿರದ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿಮಾರ್ಣ, ಕಿಂಡಿ ತಾಂಡಾದಲ್ಲಿ ಕುಡಿಯುವ ನೀರು ಮತ್ತು ಪೈಪ್ಲೈನ್ ದುರಸ್ತಿಗಾಗಿ 5 ಲಕ್ಷ ರೂ ಹಾಗೂ ಸಿಸಿ ರಸ್ತೆ ನಿಮಾರ್ಣಕ್ಕಾಗಿ 4 ಲಕ್ಷ ರೂ. ವ್ಯಯಿಸಲಾಗಿದೆ. ಹಾರಕೂಡ ಶ್ರೀಗಳ ಆಶಯದಂತೆ ಸಣ್ಣ ನೀರಾವರಿ ಮತ್ತು ಅಂರ್ತಜಲ ಇಲಾಖೆ ಯೋಜನೆಯಲ್ಲಿ ನಾಲಾಕ್ಕೆ ಅಡ್ಡಲಾಗಿ ಬ್ಯಾರೆಜ್ ನಿರ್ಮಿಸಲಾಗುತ್ತಿದೆ ಎಂದರು.
ಹೊನ್ನಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯ, ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಹಿರೇಮಠದ ಶ್ರೀ ನೀಲಕಂಠ ಮರಿದೇವರು, ಜಿಪಂ ಮಾಜಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಡಾ.ಶಿವಾನಂದ ಮಜ್ಜಿಗೆ, ರಾಘವೇಂದ್ರ ಗುತ್ತೇದಾರ್, ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲಿ, ವೀರಣ್ಣ ಗಂಗಾಣಿ, ಶಿವಶರಣಪ್ಪ ಗುತ್ತೇದಾರ್, ಶರಣಪ್ಪ ಬೆಲೂರ, ಗುರುರಾಜ ಮದ್ದೂರು, ಶರಣು ಮಜ್ಜಿಗೆ, ವೇದಪ್ರಕಾಶ ಮೊಟಗಿ, ಮಹೇಶ ಗುತ್ತೇದಾರ್, ಗೌರಿಶಂಕರ ಗುತ್ತೇದಾರ್, ದತ್ತು ಗುತ್ತೇದಾರ್ ಇತರರಿದ್ದರು.