Photo 
ರಾಜ್ಯ

ಕಲಬುರಗಿ ಐಟಿಎಫ್ ಟೆನಿಸ್ ಟೂರ್ನಿ’: ಪಂದ್ಯಾವಳಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕಲಬುರ್ಗಿ ‘ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ ‘ಪ್ರಧಾನ ಸುತ್ತಿನ ಪಂದ್ಯಾವಳಿಗಳಿಗೆ ’ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ಮತ್ತು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಸೇರಿದಂತೆ ಪ್ರಮುಖರು ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.
ಇಂದು ಬೆಳಗ್ಗೆ ನಡೆದ ಪ್ರದಾನ ಸುತ್ತಿನ ಪಂದ್ಯದಲ್ಲಿ ಭಾರತೀಯ ಆಟಗಾರರಾದ ಮೂರನೇ ಶ್ರೇಯಾಂಕಿತೆ ವೈಷ್ಣವಿ ಅಡ್ಕರ್ ಹಾಗೂ ಚೆವಿಕಾ ರೆಡ್ಡಿ ಅವರು ನೇರ ಹಣಾ-ಹಣಿ ನಡೆಸಿದ್ದು, ರೋಚಕತೆಯ ಘಟ್ಟ ತಲುಪಿದ ಪಂದ್ಯದಲ್ಲಿ ತಮ್ಮ ಉತ್ತಮ ಪ್ರದರ್ಶನ ಹಾಗೂ ಮಾರಕ ದಾಳಿಯಿಂದ ವೈಷ್ಣವಿ ಅವರು 6-0,6-3 ಅಂತರದಿಂದ ಚೆವಿಕಾರನ್ನು ಪರಾಭವಗೊಳಿಸಿ 16ನೇ ಸುತ್ತಿಗೆ ವೈಷ್ಣವಿ ಅವರು ಆಯ್ಕೆಯಾದರು.
ಇಂದು ಸಂಜೆ ವರೆಗೂ ಒಟ್ಟು 11 ಪ್ರದಾನ ಸುತ್ತಿನ ಪಂದ್ಯಗಳು ನಡೆಯಲಿದ್ದು ವಿಜೇತ 11 ಜನರು ನೇರವಾಗಿ ನಾಳೆ ನಡೆಯುವ 16ನೇ ಸುತ್ತಿನ ಪಂದ್ಯಾವಳಿಗೆ ಆಯ್ಕೆ ಆಗಿ ಅಲ್ಲಿ ತಮ್ಮ ಗೆಲುವಿನ ಆಟವನ್ನು ಮುಂದುವರೆಸಲಿದ್ದಾರೆ.
ಇಂದು ನಡೆದ ಮುಖ್ಯ ಪಂದ್ಯಾವಳಿಗಳ ಚಾಲನೆ ಕಾರ್ಯಕ್ರಮದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವವೃದ್ಧಿ ಇಲಾಖೆ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ್, ಹಾಗೂ ವಿಧಾನ ಪರಿಷತ್ ಸದಸ್ಯರಾಧ ಶಶೀಲ್ ಜಿ. ನಮೋಶಿ ಅವರು ಕೋರ್ಟನಲ್ಲಿ ಟೆನಿಸ್ ಆಡುವ ಮೂಲಕ ಅಧಿಕೃತವಾಗಿ ಮುಖ್ಯ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ನಗರಾಭಿವೃದ್ಧಿ ನಗರದ ಪ್ರಾಧಿಕಾರದ ಅಧ್ಯಕ್ಷರಾದ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಓ ಭವಂರಸಿಂಗ್ ಮೀನಾ, ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ವರ್ಷಾ ಜಾನೆ, ಪಾಲಿಕೆ ಆಯುಕ್ತರಾದ ಅವಿನಾಶ ಸಿಂಧೆ, ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಸಹಾಯಕ ಆಯುಕ್ತೆ ಸಾಹಿತ್ಯ, ಆಲದ್‌ಕಟ್ಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸಮದ್ ಪಟೇಲ್ ಅವರು ಸೇರಿದಂತೆ ಐಟಿಎಫ್ ಪಂದ್ಯ ಆಯೋಜಕರು ಸೇರಿದಂತೆ ಆಟಗಾರರು ಪ್ರೇಕ್ಷಕರು ಇದ್ದರು.