ಬಿ. ಫೌಜಿಯಾ ತರನ್ನುಮ್ 
ರಾಜ್ಯ

ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಪ್ರಮುಖ ಮುಖ್ಯಾಂಶಗಳು

  • ಫೆ. 16 ರಂದು
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ ಫೆಬ್ರವರಿ 16 ಹಾಗೂ 17 ರಂದು ಕಲಬುರಗಿಯ ನಗರದ ಭಾಪೂಗೌಡ ದರ್ಶನಾಪುರ ರಂಗಮಂದಿರದ ಕನ್ನಡ ಭವನದಲ್ಲಿ ಜರುಗಲಿದೆ.
ಫೆಬ್ರವರಿ 16 ರಂದು ಸೋಮವಾರ ಬೆಳಿಗ್ಗೆ 8.15 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ರಾಷ್ಟ್ರಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ ತೇಗಲತಿಪ್ಪಿ ನಾಡ ಧ್ವಜಾರೋಹಣ ಹಾಗೂ ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಲೀಲಾ ಎಸ್. ಕಲಗುರ್ಕಿ ಅವರು ಪರಿಷತ್ ಧ್ವಜಾರೋಹಣ ನೆರವೇರಿಸುವರು. ಕಾರ್ಯಕ್ರಮದಲ್ಲಿ ಮತ್ತಿತರರು ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಅಂದು ಬೆಳಿಗ್ಗೆ 9.30ಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ವಿವಿಧ ಕಲಾ ಮೇಳದೊಂದಿಗೆ ಕಲಬುರಗಿ ನಗರದ ಮಿನಿ ವಿಧಾನಸೌಧದಿಂದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಮಾರ್ಗವಾಗಿ ಕನ್ನಡ ಭವನವರೆಗೆ ಹಮ್ಮಿಕೊಳ್ಳಲಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮಹಾನಗರ ಪಾಲಿಕೆ ಮಹಾಪೌರರಾದ ವರ್ಷಾ ರಾಜೀವ ಜಾನೆ ಅವರು ಚಾಲನೆ ನೀಡುವರು. ಮಹಾನಗರ ಪಾಲಿಕೆ ವಿಪಕ್ಷ ನಾಯಕರಾದ ಶೋಭಾ ಗುರುರಾಜ ದೇಸಾಯಿ ಹಾಗೂ ಕಲಬುರಗಿ ತಹಶೀಲ್ದಾರ ಆನಂದ ಶೀಲ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಇವರು ಮೆರವಣಿಗೆ ನೇತೃತ್ವ ವಹಿಸುವರು. ಕಾರ್ಯಕ್ರಮದಲ್ಲಿ ಮತ್ತಿತರರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಂದು ಬೆಳಿಗ್ಗೆ 11.15 ಗಂಟೆಗೆ ಪೂಜ್ಯ ಶ್ರೀ ಲಿಂ. ಡಾ. ಶರಣಬಸವಪ್ಪ ಅಪ್ಪಾ ವೇದಿಕೆಯಲ್ಲಿ ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಅವರು ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸುವರು.
ಶ್ರೀಶೈಲಂ ಸಾರಂಗಮಠದ ಜಗದ್ಗುರು ಪೂಜ್ಯ ಶ್ರೀ ಡಾ. ಸಾರಂಗಧರ ದೇಶಿಕೇಂದ್ರದ ಮಹಾಸ್ವಾಮಿಗಳು ದಿವ್ಯ ನೇತೃತ್ವ ವಹಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೇತೃತ್ವ ವಹಿಸುವರು. ಸೇಡಂ ಸಂಶೋಧಕ ಸಾಹಿತಿಗಳಾದ ಮುಡುಬಿ ಗುಂಡೇರಾವ್ ಅವರು ಸಮ್ಮೇಳನಧ್ಯಕ್ಷರಾಗಿ ಪಾಲ್ಗೊಳ್ಳುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪಾ ಅವರು ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿ ಪಾಲ್ಗೊಳ್ಳುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ಪಾಟೀಲ ತೇಗಲತಿಪ್ಪಿ ಅವರು ಆಶಯ ನುಡಿ ಹೇಳುವರು. ಹುಬ್ಬಳ್ಳಿ ಪೊಲೀಸ್ ನಿರೀಕ್ಷಕರು ಹಾಗೂ ಖ್ಯಾತ ಜಾನಪದ ವಿದ್ವಾಂಸರಾದ ಡಾ, ಜ್ಯೋತಿರ್ಲಿಂಗ ಹೊನಕಟ್ಟಿ ಅವರು “ಗುಲಾಬಿ ಗಂಧ” ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಶಾಸಕರುಗಳಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ಖನೀಜ ಫಾತೀಮಾ, ಬಿ.ಆರ್.ಪಾಟೀಲ, ಬಸವರಾಜ ಮತ್ತಿಮೂಡು, ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಡಾ. ಬಿ.ಜಿ. ಪಾಟೀಲ, ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಅರುಣಕುಮಾರ್ ಎಂ. ಪಾಟೀಲ, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಕರ್ನಾಟಕ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ ಆಲಂ ಖಾನ್, ಪದವಿ ಪೂರ್ವ ಶಿಕ್ಷಣಿಲಾಖೆಯ ಉಪನಿರ್ದೇಶಕ ಸುರೇಶ ಅಕ್ಕಣ್ಣ, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಪೂರ್ವ ಅಧ್ಯಕ್ಷ ರಾಜು ಲೇಂಗಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಂದು ಮಧ್ಯಾಹ್ನ 1.15ಕ್ಕೆ “ಕಲ್ಲರಳಿ ಹೂವಾಗಿ” ಎಂಬ ವಿಷಯ ಕುರಿತು ಒಂದನೇ ಗೋಷ್ಠಿಯು ಡಾ. ಸ್ವಾಮಿರಾವ್ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ‘ಕಲಬುರಗಿ ಜಿಲ್ಲಾ ಸಾಂಸ್ಕøತಿಕ ಪರಂಪರೆ’ ಕುರಿತು ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಹಾಗೂ ಕಲಬುರಗಿ ಜಿಲ್ಲಾ ಸಾಹಿತ್ಯಿಕ ನೋಟ ಕುರಿತು ಡಾ. ಶ್ರೀಶೈಲ ನಾಗರಾಳ ಅವರು ಮಾತನಾಡುವರು.
ಅಂದು ಮಧ್ಯಾಹ್ನ 3.15 ಕ್ಕೆ “ಮಾತೆಂಬುದು ಜ್ಯೋತಿರ್ಲಿಂಗ್” ವಿಷಯ ಕುರಿತು ಎರಡನೇ ಗೋಷ್ಠಿಯು ಡಾ. ಶಾರದಾದೇವಿ ಜಾಧವ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಕೀರ್ತನ ಮತ್ತು ತತ್ವಪದಾವಲೋಕನ ಕುರಿತು ಸೇಡಂನ ಡಾ. ಜಗನ್ನಾಥ ತೆರನಳ್ಳಿ ಹಾಗೂ ವಚನ ದರ್ಶನ ಮತ್ತು ಭಾರತ ಸಂವಿಧಾನ ಒಂದು ಅವಲೋಕನ ಕುರಿತು ಪ್ರೊ. ಸಂಜಯ ಮಾಕಲ್ ಅವರು ಮಾತನಾಡುವರು.
ಅಂದು ಸಂಜೆ 4.45 ಗಂಟೆಗೆ “ಕಾವ್ಯಧೇನು” ಕವಿಗೋಷ್ಠಿಯು ಡಾ. ಸದಾನಂದ ಪೆರ್ಲ ಇವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ನರಸಿಂಗರಾವ ಹೇಮನೂರ ಆಶಯ ನುಡಿ ಹೇಳುವರು. ಮಹ್ಮದ್ ಅಯಾಜೊದ್ದೀನ್ ಪಟೇಲ್ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು. ಈ ಗೋಷ್ಠಿಯಲ್ಲಿ ಕವಿಗಳು ಭಾಗವಹಿಸುವರು.
ಫೆಬ್ರವರಿ 17 ರಂದು ಮಂಗಳವಾರ ಬೆಳಿಗ್ಗೆ 10.45 ಗಂಟೆಗೆ “ಸಮ್ಮೇಳನಾಧ್ಯಕ್ಷರ ಬದುಕು-ಬರಹ” ವಿಷಯ ಕುರಿತು ಚಿತ್ತಾಪುರ ನರಸಪ್ಪ ಚಿನ್ನಕಟ್ಟಿ ಅವರು ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಮತ್ತಿತರರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಂದು ಬೆಳಿಗ್ಗೆ 11.25ಕ್ಕೆ “ಅನ್ನ ಅರಿವು ಅಕ್ಷರ ನೆರವು” ವಿಷಯ ಕುರಿತು ಡಾ. ರಾಜು ತೆಗ್ಗಳ್ಳಿ ಇವರ ಅಧ್ಯಕ್ಷತೆಯಲ್ಲಿ ಮೂರನೇ ಗೋಷ್ಠಿ ನಡೆಯಲಿದೆ. ಕೃಷಿತೋ ನಾಸ್ತಿ ದುರ್ಭಿಕ್ಷಂ ವಿಷಯ ಕುರಿತು ಆದಿನಾಥ ಹೀರಾ ಹಾಗೂ ಆಹಾರ-ಪರಿಸರದಲ್ಲಿ ಆರೋಗ್ಯ ಚಿಂತನೆ ವಿಷಯ ಕುರಿತು ಡಾ. ಶರಣಕುಮಾರ ಕಂಠಿ ಮಾತನಾಡುವರು.
ಅಂದು ಮಧ್ಯಾಹ್ನ 1.15ಕ್ಕೆ “ಮುಳುಗದಿರಲಿ ಬದುಕು” ವಿಷಯ ಕುರಿತು ನಾಲ್ಕನೇ ಗೋಷ್ಠಿಯು ವಿ.ಎಮ್. ಪತ್ತಾರ ಇವರ ಅಧ್ಕಕ್ಷತೆಯಲ್ಲಿ ಜರುಗಲಿದೆ. ಸಾಮಾಜಿಕ ಸಾಮಾರಸ್ಯ-ಹಾಡುಪಾಡು ಹರುಷ ವಿಷಯ ಕುರಿತು ಡಾ. ಬಾಬುರಾವ್ ಶೇರಿಕಾರ ಅವರು ಹಾಗೂ ಶಾಲಾ ಶಿಕ್ಷಣದಲ್ಲಿ ನೈತಿಕ ಶಿಕ್ಷಣ ಒಂದು ಅವಲೋಕನ ವಿಷಯ ಕರಿತು ಕಲ್ಯಾಣಕುಮಾರ ಶೀಲವಂತ ಮಾತನಾಡುವರು.
ಅಂದು ಮಧ್ಯಾಹ್ನ 3.15ಕ್ಕೆ “ಒಳಗಣ್ಣು ತೆರೆದಾಗ” ವಿಶೇಷ ಗೋಷ್ಠಿಯು ಡಾ. ಶಿವರಾಜ ಶಾಸ್ತ್ರೀ ಹೇರೂರ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಈ ವಿಶೇಷ ಗೋಷ್ಠಿಯಲ್ಲಿ ಕವಿಗಳು ಭಾಗವಹಿಸಲಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ಫೆಬ್ರವರಿ 15, 16 ಹಾಗೂ 17 ರಂದು ಐತಿಹಾಸಿಕ ಸ್ಥಳಗಳುಳ್ಳ ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶವನ್ನು ಸಹ ಹಮ್ಮಿಕೊಳ್ಳಲಾಗಿದೆ. ಕು. ಸುಕನ್ಯಾ ಮೊಗಲಪ್ಪ ಚಿದ್ರಿ ಹುಳಗೇರಾ ಇವರಿಂದ ಯೋಗ ಪ್ರದರ್ಶನ ಜರುಗಲಿದೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮಗಳು ಸಹ ಜರುಗಲಿದೆ.