- ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸ್ವಾಗತ
- ರಾಜ್ಯ ಸರ್ಕಾರದ ವಿಜಿಎಫ್ ನಿಧಿ ಮಂಜೂರು
ಕಲಬುರಗಿ:ರಾಜ್ಯ ಸರ್ಕಾರವು ಕಲಬುರಗಿ&ಬೆಂಗಳೂರು ವಿಮಾನ ಮಾರ್ಗಕ್ಕೆ 28.47 ಕೋಟಿ ರೂ. ವಿಜಿಎಫ್ ನಿಧಿ ಮಂಜೂರು ಮಾಡಿ, ಸ್ಟಾರ್ ಏರ್ (ಗೋಢಾವತ್ ಎಂಟರ್ಪೆಸೆಸ್ ಲಿಮಿಟೆಡ್) ಮೂಲಕ ವಿಮಾನ ಸೇವೆ ಮರು ಆರಂಭಿಸಲು ಕೈಗೊಂಡಿರುವ ಕ್ರಮವನ್ನು ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸ್ವಾಗತಿಸಿದೆ.
2025ರ ಅಕ್ಟೋಬರ್ 15ರಿಂದ ಕಲಬುರಗಿ ವಿಮಾನ ಸೇವೆ ಸ್ಥಗಿತಗೊಂಡಿದ್ದು, ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಪ್ರಯಾಣಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಈ ಕ್ರಮ ಸರಿಯಾದ ಸಮಯದಲ್ಲಿ ತೆಗೆದುಕೊಂಡ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ, ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ರಾಜ್ಯ ಸರ್ಕಾರ ವಿಜಿಎಫ್ ೂಷಣೆ ಮಾಡಿದ ನಂತರವೂ ಸ್ಟಾರ್ ಏರ್ ಇನ್ನೂ ವಿಮಾನ ಸೇವೆ ಆರಂಭಿಸಿಲ್ಲ ಎಂಬುದನ್ನು ಗಮನಕ್ಕೆ ತಂದಿದೆ. ಜತೆಗೆ ಸ್ಟಾರ್ ಏರ್ಗೂ ಪತ್ರ ಬರೆದು ತಣವೇ ಸೇವೆ ಆರಂಭಿಸಲು ಕೋರಲಾಗಿದೆ ಎಂದಿದ್ದಾರೆ.
ವಿಮಾನದ ಪ್ರಯಾಣ ದರ ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ರಾಜ್ಯ ಸರ್ಕಾರದ ನೆರವು ಇರುವ ಹಿನ್ನೆಲೆಯಲ್ಲಿ ಟಿಕೆಟ್ ದರ 5 ಸಾವಿರ ರೂ. ಮೀರಬಾರದು. 2026ರ ಮಾರ್ಚ್ 25ರಂದು ೂಷಿಸಲಾದ ಉಡಾನ್ 2.0 ಯೋಜನೆ ಅಡಿಯಲ್ಲಿ ಕಲಬುರಗಿಗೆ ಶಾಶ್ವತ ವಿಮಾನ ಸಂಪರ್ಕ ಕಲ್ಪಿಸಲು ನಮ್ಮ ಸಂಸ್ಥೆಯು ಕೇಂದ್ರ ಸರ್ಕಾರ ಮತ್ತು ವಿಮಾನ ಕಂಪನಿಗಳಿಗೆ ಮನವಿ ಸಲ್ಲಿಸಿದೆ. ಆದರೆ, ಉಡಾನ್ 2.0 ಟೆಂಡರ್ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ, ಇದರಿಂದ ಶಾಶ್ವತ ಪರಿಹಾರದಲ್ಲಿ ವಿಳಂಬವಾಗುತ್ತಿದೆ.
ರಾಜ್ಯ ಸರ್ಕಾರದ ಈ ಕ್ರಮ ತಣ ವಿಮಾನ ಸೇವೆ ಮರು ಆರಂಭಕ್ಕೆ ಮಹತ್ವದ ನೆರವಾಗಿದೆ. ವಿಶ್ವಾಸಾರ್ಹ ವಿಮಾನ ಸಂಪರ್ಕಕ್ಕಾಗಿ ಕಲಬುರಗಿಯನ್ನು ಕೇಂದ್ರ ಸರ್ಕಾರ ಉಡಾನ್ 2.0 ಯೋಜನೆಯಡಿ ಒಳಪಡಿಸುವುದು ಅತ್ಯಂತ ಅಗತ್ಯ. ಈ ಮೂಲಕ ನಿಯಮಿತ ಮತ್ತು ವಿಶ್ವಾಸಾರ್ಹ ಸೇವೆ, ಕಡಿಮೆ ದರದಲ್ಲಿ ಪ್ರಯಾಣ, ವಿವಿಧ ನಗರಗಳಿಗೆ ಸಂಪರ್ಕ ಸಾಧ್ಯವಾಗಲಿದೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಮಂಗಳೂರು, ತಿರುಪತಿ, ಅಹಮದಾಬಾದ್ ನಗರಗಳಿಗೆ ಸೇವೆ ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
"
ಪ್ರಯಾಣಿಕರಿಗೆ ಅನುಕೂಲವಾಗುವ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಿಮಾನ ಓಡಿಸಲು ಅಸಮರ್ಪಕ ಸಮಯ ತಪ್ಪಿಸಲು, ದರ ನಿಯಂತ್ರಣ ಮತ್ತು ಪ್ರಯಾಣಿಕರ ಹಿತ ಕಾಪಾಡುವಂತೆ ಸ್ಟಾರ್ಏರ್ಗೆ ಮನವಿ ಮಾಡಲಾಗಿದೆ.
— ಶರಣು ಪಪ್ಪಾ, ಅಧ್ಯಕ್ಷ, ಕೆಕೆಸಿಸಿಐ ಕಲಬುರಗಿ.