ಕಲಬುರಗಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ.ಮಹಾದೇವಪ್ಪ ಕಡೇಚೂರ್ ಅವರ ಅಯ್ಯನ ಕಥೆಗಳು ಸಣ್ಣ ಕಥಾ ಸಂಕಲನವನ್ನು ಡಾ.ಸತೀಶಕುಮಾರ ಹೊಸಮನಿ ಬಿಡುಗಡೆ ಮಾಡಿದರು. ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಪಿ.ಎಸ್.ಶಂಕರ್, ವೆಂಕಟೇಶ ಕಡೇಚೂರ್, ಡಾ.ಗವಿಸಿದ್ದಪ್ಪ ಪಾಟೀಲ್, ಮಹಾದೇವಯ್ಯ ಕರದಳ್ಳಿ, ಡಾ.ಸದಾನಂದ ಪೆರ್ಲ, ಡಾ.ಹನುಮಂತರಾವ್ ದೊಡ್ಡಮನಿ ಇತರರಿದ್ದರು.
- ಡಾ.ಸತೀಶಕುಮಾರ ಹೊಸಮನಿ ಹೇಳಿಕೆ
- ಕಲಬುರಗಿಯಲ್ಲಿ ಮಹಾದೇವಪ್ಪನವರ ಕಥಾಸಂಕಲನ ಬಿಡುಗಡೆ
ಕಲಬುರಗಿ: ಹೈದರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಬದುಕಿನುದ್ದಕ್ಕೂ ಆದರ್ಶದ ಬಾಳ್ವೆ ಮಾಡಿ ಅದರ ಪ್ರೇರಣೆಯಿಂದಲೇ ಅವರ ಭಾವನೆಗಳ ಸ್ಫುರಣೆಯ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಸಾಮಾಜಿಕ ಬದಲಾವಣೆಗೆ ಪ್ರೇರಣೆ ನೀಡುವ ಕಥಾ ಹಂದರವನ್ನು ಅದು ಒಳಗೊಂಡಿದೆ ಎಂದು ರಾಜ್ಯಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಹೇಳಿದರು.
ಕಲಬುರಗಿಯ ಖಾಸಗಿ ಹೊಟೆಲ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ.ಮಹಾದೇವಪ್ಪ ಕಡೇಚೂರ್ ಅವರ ಅಯ್ಯನ ಕಥೆಗಳು ಸಣ್ಣ ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂತಹ ಮೌಲ್ಯಯುತ ಕಥೆಗಳ ಸಂಕಲನ ಮಕ್ಕಳಿಗೆ ದಾರಿದೀಪವಾಗಿದೆ. ಕ್ರೀಡೆ, ಸ್ನೇಹ, ಓದುವ ಹವ್ಯಾಸ, ಸಾಹಸ, ಮಹಾಪುರುಷರ ಕಥೆಗಳು, ಪ್ರಾಣಿ ಪ್ರೀತಿ ಹೀಗಾಗಿ ಇನ್ನಷ್ಟು ಪ್ರಭಾವಶಾಲಿಯಾಗಿ ಮಕ್ಕಳು ಬೆಳೆಯಲು ಪ್ರೇರಣೆ ನೀಡುವ ಕೃತಿಯಾಗಿ ಮೂಡಿ ಬಂದಿದೆ ಎಂದರು.
ಡಾ.ಪಿ.ಎಸ್.ಶಂಕರ್, ಡಾ.ಸ್ವಾಮಿರಾವ ಕುಲಕರ್ಣಿ ಮಾತನಾಡಿದರು. ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಉಪ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಪುಸ್ತಕ ಪರಿಚಯ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ್ ಮಾತನಾಡಿ, ಮೌಲ್ಯ ಕುಸಿಯುತ್ತಿರುವಾಗ ಮಕ್ಕಳ ಮನೋಧರ್ಮಕ್ಕೆ ಅನುಗುಣವಾಗಿ ಕಥೆಗಳ ಮೂಲಕ ನೀತಿ ಬೋಧನೆ ಮಾಡಲು ಪ್ರಯತ್ನಿಸಿದ ಕಡೆಚೂರು ಅವರ ಇಡೀ ಬದುಕು ಆದರ್ಶಪ್ರಾಯವಾದದ್ದು. ಮಕ್ಕಳು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅನ್ಯಾಯ, ಶೋಷಣೆಗೆ ಎಚ್ಚರ ನೀಡುವ ಕಥೆಗಳು ನಿಜಕ್ಕೂ ದಾರಿ ದೀಪವಾಗಲಿದೆ ಎಂದರು. ಧರ್ಮದರ್ಶಿ ವೆಂಕಟೇಶ ಕಡೇಚೂರ ಉಪಸ್ಥಿತರಿದ್ದರು.
ಚಂದ್ರಕಾಂತ ಗುತ್ತೇದಾರ, ಡಾ.ಹನುಮಂತರಾವ್ ದೊಡ್ಡಮನಿ, ಬೋಡೆ ರಿಯಾಜ್ ಅಹಮ್ಮದ್, ಮಹಾದೇವಯ್ಯ ಕರದಳ್ಳಿ, ಸಂಧ್ಯಾ ಹೊನಗುಂಟಿಕರ್, ನಾರಾಯಣ ಕುಲಕರ್ಣಿ, ಚಿತ್ರಶೇಖರ ಕಂಠಿ, ಸುಬ್ರಾವ್ ಕುಲಕರ್ಣಿ, ಪ್ರಭಾಕರ ಜೋಶಿ, ಜಮುನಾ ಗುತ್ತೇದಾರ್, ಭೀಮಣ್ಣ ಬೋನಾಳ, ಡಾ.ಸುರೇಶ ಹೇರೂರು, ಲಕ್ಷ್ಮಣರಾವ್ ಪೊಲೀಸ್ ಪಾಟೀಲ್, ವೀರಭದ್ರ ಸಿಂಪಿ, ಬಿ.ಆರ್.ಅಣ್ಣಾ ಸಾಗರ್, ಕುಪೇಂದ್ರ ಶಾಸಿ ಕೃಷ್ಣಮೂರ್ತಿ, ಅನಿಲಕುಮಾರ್, ಶಾಂತಾ ಭೀಮಸೇನರಾವ್ ಇತರರಿದ್ದರು. ಡಾ. ಸದಾನಂದ ಪೆರ್ಲ ಸ್ವಾಗತಿಸಿದರು. ಕಿರಣ್ ಪಾಟೀಲ್ ಪ್ರಾರ್ಥನಾ ಗೀತೆ ಹಾಡಿದರು. ಡಾ.ಗವಿಸಿದ್ದಪ್ಪ ಪಾಟೀಲ್ ನಿರೂಪಿಸಿದರು.
ಸಮಾಜದ ನೈತಿಕ ಶುದ್ಧೀಕರಣಕ್ಕೆ ಕಥಾಹಂದರವನ್ನ ಹೆಣೆದು ಲೇಖಕ ತನ್ನ ಜವಾಬ್ದಾರಿ ನಿರ್ವಹಿಸಿದ ಕಥಾ ಸಂಕಲನ ಇದಾಗಿದೆ. ಕಥೆಗಳ ಪಾತ್ರ, ಶೈಲಿ, ಭಾಷೆ ಅತ್ಯಂತ ಸರಳವಾಗಿ ಮಣ್ಣಿನ ಸೊಗಡು ಬಿಂಬಿಸುತ್ತಿದೆ.
ಉಪ ನಿರ್ದೇಶಕ, ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆ.
ಮಂತ್ರ & ತಂತ್ರ & ಯಂತ್ರ ಯುಗವನ್ನು ದಾಟಿದ ಇಂದಿನ ಸಮಾಜ ಕುತಂತ್ರ ಯುಗದಲ್ಲಿ ಬದುಕುತ್ತಿದ್ದು ಮೌಲ್ಯಗಳು ಕಣ್ಮರೆಯಾಗುತ್ತಿರುವ ಕಾಲ ಟ್ಟದಲ್ಲಿ ಹಿರಿಯರು ಜವಾಬ್ದಾರಿಯುತ ಬದುಕು ಮಾಡಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಷ್ಠಾನವು ಅವರ ಹೆಸರಿನಲ್ಲಿ ಪ್ರತಿ ವರ್ಷ ಒಬ್ಬ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಬೇಕು.