ಎಚ್‌ಎಎಲ್‌ನ ನಿವೃತ್ತ ಸಿಎಂಡಿ ಡಾ.ಡಿ.ಕೆ.ಸುನಿಲ್ ಅವರಿಂದ ನೂತನ ಸಿಎಂಡಿ ಕೆ.ರವಿ ಅಧಿಕಾರ ಸ್ವೀಕರಿಸಿದರು.  
ರಾಜ್ಯ

ಎಚ್‌ಎಎಲ್ ನೂತನ ಸಿಎಂಡಿಯಾಗಿ ಕೆ.ರವಿ ನೇಮಕ

ಪ್ರಮುಖ ಮುಖ್ಯಾಂಶಗಳು

  • ಎಚ್‌ಎಎಲ್ ನೂತನ ಸಿಎಂಡಿಯಾಗಿ ಕೆ.ರವಿ ನೇಮಕ
  • ಡಾ. ಡಿ.ಕೆ. ಸುನಿಲ್ ನಿವೃತ್ತರಾದ ಹಿನ್ನೆಲೆಯಲ್ಲಿ ರವಿ ನೇಮಕ
  • 22ನೇ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ

ಬೆಂಗಳೂರು:ಹಿಂದೂಸ್ತಾನ್ಏರೋನಾಟಿಕ್ಸೃ್ ಲಿಮಿಟೆಡ್(ಎಚ್‌ಎಎಲ್)22ನೇಅಧ್ಯಕ್ಷ ಹಾಗೂ ವ್ಯವಸ್ಥಾಪಕನಿರ್ದೇಶಕರಾಗಿ (ಸಿಎಂಡಿ)ಕೆ.ರವಿಅಧಿಕಾರ ಸ್ವೀಕರಿಸಿದ್ದಾರೆ.ಡಾ.ಡಿ.ಕೆ.ಸುನಿಲ್ ನಿವೃತ್ತರಾದಹಿನ್ನೆಲೆಯಲ್ಲಿ ರವಿ ನೇಮಕಗೊಂಡಿದ್ದಾರೆ.

ರವಿಅವರಿಗೆ ಏರೋಸ್ಪೇಸ್ ಮತ್ತು ರಕ್ಷಣಾಕ್ಷೇತ್ರದ ತಯಾರಿಕೆ ಮತ್ತುಎಲೆಕ್ಟ್ರಾನಿಕ್ಸೃ್ ಕ್ಷೇತ್ರಗಳಲ್ಲಿ30 ವರ್ಷದಅನುಭವವಿದ್ದು,ಇದಕ್ಕೂ ಮೊದಲುಎಚ್‌ಎಎಲ್ನಲ್ಲಿ ನಿರ್ದೇಶಕರಾಗಿಕಾರ್ಯನಿರ್ವಹಿಸುತ್ತಿದ್ದರು.ಎಲ್ಎಎಸ್ ತೇಜಸ್ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಹಾಗೂ ಮಹಾಪ್ರಬಂಧಕರಾಗಿ,ಕಾರ್ಪೊರೇಟ್ಯೋಜನಾ ವಿಭಾಗದ ಕಾರ್ಯನಿರ್ವಾಹಕನಿರ್ದೇಶಕ ಹೀಗೆ ಹಲವು ಪ್ರಮುಖಹುದ್ದೆಗಳನ್ನು ನಿರ್ವಹಿಸಿದ್ದಾರೆ.

ನವೀನತೆ, ಕೃತಕ ಬುದ್ಧಿಮತ್ತೆ (ಎಐ), ಕಾರ್ಯಾಚರಣಾ ಶ್ರೇಷ್ಠತೆ ಮತ್ತು ಮಾನವ ಸಂಪನ್ಮೂಲದ ಶಕ್ತಿಯನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಏರೋಸ್ಪೇಸ್ ಹಾಗೂ ರಕ್ಷಣಾ ಸಂಸ್ಥೆಯಾಗಿ ಎಚ್‌ಎಎಲ್‌ನ್ನು ರೂಪಿಸುವುದು ನನ್ನ ಗುರಿ.

— ಕೆ.ರವಿ, ನೂತನ ಸಿಎಂಡಿ, ಎಚ್‌ಎಎಲ್