ಚಂದಾಪುರ ಪುರಸಭೆಗೆ ಜ್ಯೋತಿ ಅಧ್ಯೆಕ್ಷೆ Municipality
ಆನೇಕಲ್: ತಾಲೂಕಿನ ಚಂದಾಪುರ ಪುರಸಭೆಗೆ ನೂತನ ಅಧ್ಯೆಯಾಗಿ ಜ್ಯೋತಿ ಜಗದೀಶ್ ಆಚಾರಿ ಅವಿರೋಧ ಆಯ್ಕೆಯಾಗಿದ್ದಾರೆ.Municipality
ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಆರ್.ಟಿ.ಅಶೋಕ್ ರೆಡ್ಡಿ ಮಾತನಾಡಿ, ಶಿಸ್ತಿನ ಪಕ್ಷವಾಗಿರುವ ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ಹಂತ ಹಂತವಾಗಿ ಎಲ್ಲ ಕಾರ್ಯಕರ್ತರಿಗೆ ಅವಕಾಶ ದೊರಕಿಸಿಕೊಡಲಾಗುತ್ತಿದೆ ಎಂದರು.
ನೂತನ ಅಧ್ಯಕ್ಷೆ ಜ್ಯೋತಿ ಜಗದೀಶ್ ಮಾತನಾಡಿ, ಚಂದಾಪುರ ಪುರಸಭೆಗೆ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪುರಸಭೆ ವ್ಯಾಪ್ತಿಯಲ್ಲಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.
ವೇಣು, ಪುರಸಭೆ ಮಾಜಿ ಅಧ್ಯಕ್ಷೆ ಶಾರದಾ ವರದರಾಜು, ಸದಸ್ಯರಾದ ಸೋಮಶೇಖರ್ ರೆಡ್ಡಿ, ಮುರಳಿ, ವೆಂಕಟಸ್ವಾಮಿ, ಕೃಷ್ಣರೆಡ್ಡಿ, ಸೌಮ್ಯಾ, ಸುಧಾಕರ್ ರೆಡ್ಡಿ ಇದ್ದರು.