ಹುಲಸೂರಿನಲ್ಲಿ ನ್ಯಾಯಾಲಯ ಪ್ರಾರಂಭಿಸಲು ಪಟ್ಟಣದ ಹಾಲಹಳ್ಳಿ ರಸ್ತೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡವನ್ನು ಬುಧವಾರ ಬಸವಕಲ್ಯಾಣ ಹಿರಿಯ ಶ್ರೇಣಿ, ಸಿವಿಲ್​ ಹಾಗೂ ಜೆಎಂಎಫ್​ಸಿ ನ್ಯಾಯಾಧೀಶ ಹಣಮಂತರಾವ ಕುಲಕರ್ಣಿ ವೀಣೆ ಮಾಡಿದರು. ತಹಸೀಲ್ದಾರ್​ ಶಿವಾನಂದ ಮೇತ್ರೆ, ತಾಪಂ ಇಒ ಮಹಾದೇವ ಜಮ್ಮು, ಕಂದಾಯ ನಿರೀಕ ಶರಣಬಸಪ್ಪ, ವಕೀಲರಾದ ವಿಜಯಕುಮಾರ ವಟಗ್ಗೆ, ಮಹೇಶ ಹಲಿಂಗೆ, ರೇಣುಕಾ ಮಠಪತಿ, ಅಂಬಿಕಾ ನಾಗಾರಾಳೆ ಇತರರಿದ್ದರು. 
ರಾಜ್ಯ

ನೂತನ ನ್ಯಾಯಾಲಯಕ್ಕೆ ನ್ಯಾಯಾಧೀಶರಿಂದ ಸ್ಥಳ ಪರಿಶೀಲನೆ

ಹುಲಸೂರು: ತಾಲೂಕು ಕೇಂದ್ರವಾದ ಹುಲಸೂರು ಪಟ್ಟಣದಲ್ಲಿ ನೂತನ ನ್ಯಾಯಾಲಯ ಪ್ರಾರಂಭಿಸಲು ಬುಧವಾರ ಬಸವಕಲ್ಯಾಣ ಹಿರಿಯ ಶ್ರೇಣಿ, ಸಿವಿಲ್​ ಹಾಗೂ ಜೆಎಂಎಫ್​ಸಿ ನ್ಯಾಯಾಧೀಶ ಹಣಮಂತರಾವ ಕುಲಕರ್ಣಿ ಪಟ್ಟಣದ ಹಾಲಹಳ್ಳಿ ರಸ್ತೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಶಾಲಾ ಕಟ್ಟಡ, ಎಪಿಎಂಸಿ ಆವರಣದಲ್ಲಿ ನಿರ್ಮಿಸಿದ ರಣಜಿತ ಗಾಯಕವಾಡ ಅವರ ಮಳಿಗೆ ಹಾಗೂ ಥೇರ್​ ಮೈದಾನ ಸಮೀಪದ ವೈಜಪ್ಪ ಧಬಾಲೆ ಅವರ ಮಳಿಗೆ ವೀಣೆ ಮಾಡಿದರು. ತಹಸೀಲ್ದಾರ್​ ಶಿವಾನಂದ ಮೇತ್ರೆ, ತಾಪಂ ಇಒ ಮಹಾದೇವ ಜಮ್ಮು, ಕಂದಾಯ ನಿರೀಕ ಶರಣಬಸಪ್ಪ ಪಾವಡಶೆಟ್ಟಿ, ಪಿಡಿಒ ವಿನಯಕುಮಾರ, ವಕೀಲರಾದ ವಿಜಯಕುಮಾರ ವಟಗ್ಗೆ, ಮಹೇಶ ಹಲಿಂಗೆ, ರೇಣುಕಾ ಮಠಪತಿ, ಅಂಬಿಕಾ ನಾಗಾರಾಳೆ, ಬಸವ ಕುಮಾರ ವಸದ್​, ರಾಜಶೇಖರ ನಂದಗೆ, ಗುರುನಾಥ ಶೆಟ್ಟೆಪ್ಪ, ಈಶ್ವರ ಗಾಯಕವಾಡ, ಅನ್ನಪೂರ್ಣಾ, ರೂಪಾ ಪಂಚಾಳ ಪ್ರಮುಖರಾದ ಪರಮೇಶ್ವರ ಮಠಪತಿ, ರಣಜಿತ ಗಾಯಕವಾಡ, ಸಿದ್ದು ಪಾರಶೆಟ್ಟೆ ಇದ್ದರು.
ಸ್ವಚ್ಛತೆಗೆ ಆದ್ಯತೆ ನೀಡಿ
ಹುಲಸೂರಿನ ಹಾಲಹಳ್ಳಿ ರಸ್ತೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೋಣೆಗಳನ್ನು ನ್ಯಾಯಾಧೀಶ ಹಣಮಂತರಾವ ಕುಲಕರ್ಣಿ ವೀಕ್ಷಿಸುತ್ತಾ ಅಡುಗೆ ಕೋಣೆಯಲ್ಲಿನ ಅಸ್ವಚ್ಛತೆಯನ್ನು ಕಂಡು ಸ್ಥಳದಲ್ಲಿದ್ದ ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಅಡುಗೆ ಕೋಣೆ ಹೇಗೆ ಇರಬೇಕು ಎಂಬುದನ್ನು ಅರಿತುಕೊಳ್ಳಿ, ಈ ರೀತಿ ರ್ನಿಲಕ್ಷ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್​ ನೀಡಬೇಕಾಗುತ್ತದೆ. ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಾಳೆಯಿಂದ ಈ ರೀತಿ ಕಂಡು ಬಂದರೆ ನಿಮ್ಮ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.