ಕೊರಟಗೆರೆಯ Discourse ಜಗಜ್ಯೋತಿ ಬಸವೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಯನ್ನು ಅಭಿನಂದಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಸುರೇಶ್, ಉಪಾಧ್ಯಕ್ಷ ಕೆ.ಸಿ.ಶಿವಕುಮಾರ್, ಕಾರ್ಯದರ್ಶಿ ಕೆ.ಬಿ.ಜಗದೀಶ್ ಇದ್ದರು.
ಕೊರಟಗೆರೆ: ದೇವರ ಅಸ್ತಿತ್ವ ಮತ್ತು ಶಕ್ತಿ ಅರಿಯಬೇಕಾದರೆ ಆಧ್ಯಾತ್ಮಿಕ ಸಾಧನೆಯ ಮೂಲಕ ದೇವರನ್ನು ಅನುಭವಿಸುವ Discourse ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಿದ್ಧರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗಜ್ಯೋತಿ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಡೇ ಶ್ರಾವಣ ಸೋಮವಾರದ ವಿಶೇಷ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರು ಏಕೆ ಕಣ್ಣಿಗೆ ಕಾಣುವುದಿಲ್ಲ, ದೇವರನ್ನು ವಸ್ತುರೂಪದಲ್ಲಿ ಏಕೆ ಕಾಣಬೇಕು ಎಂಬ ಪ್ರಶ್ನೆಗಳು ಸಹಜ. ದೇವರನ್ನು ಕಣ್ಣಿನಿಂದ ನೋಡಲು ಸಾಧ್ಯವಾಗದಿದ್ದರೂ, ಆಧ್ಯಾತ್ಮಿಕ ಸಾಧನೆಯ ಮೂಲಕ ಅವರ ಅಸ್ತಿತ್ವವನ್ನು ಅನುಭವಿಸಲು ಸಾಧ್ಯ. ಧರ್ಮ ಮತ್ತು ಆಚರಣೆಗಳ ವಿಚಾರದಲ್ಲಿ ಪ್ರಶ್ನಿಸುವ ಮನೋಭಾವ ಇರಬೇಕು. ಆದರೆ ನಂಬಿಕೆಯ ಹೆಸರಿನಲ್ಲಿ ಮೂಢನಂಬಿಕೆಗೆ ಅವಕಾಶ ನೀಡಬಾರದು ಎಂದರು.
ಇಂದಿನ ಒತ್ತಡದ ಬದುಕಿನಲ್ಲಿ ಆಧ್ಯಾತ್ಮಿಕತೆ ಅತ್ಯವಶ್ಯಕವಾಗಿದೆ. ಜೀವನದ ಕೊನೆಯ ಹಂತದಲ್ಲಿ ಆಧ್ಯಾತ್ಮಿಕ ಸಾಧನೆ ಆರಂಭಿಸುವ ಬದಲು, ದೇಹದಲ್ಲಿ ಶಕ್ತಿ ಮತ್ತು ಮನಸ್ಸಿನಲ್ಲಿ ಚೈತನ್ಯ ಇರುವಾಗಲೇ ಆತ್ಮಶುದ್ಧಿ ಮತ್ತು ಆಧ್ಯಾತ್ಮಿಕ ಚಿಂತನೆಗೆ ಮುಂದಾಗಬೇಕು. ಬದುಕಿನಲ್ಲಿ ನಿಜವಾದ ನೆಮ್ಮದಿ ಮತ್ತು ಆನಂದ ಪಡೆಯಲು ಆಧ್ಯಾತ್ಮಿಕತೆ ಸಹಕಾರಿಯಾಗುತ್ತದೆ ಎಂದರು.
ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು. ಖಜಾಂಚಿ ಕೆ.ಆರ್.ಕಿರಣ್, ಬಸವ ಸದನ ಕಟ್ಟಡ ಸಮಿತಿ ಅಧ್ಯಕ್ಷ ಡೇರಿ ಸದಾಶಿವಯ್ಯ, ಮುಖಂಡರಾದ ಉಮೇಶ್, ಪಣೀಶ್, ರೇಣುಕಾ ಪ್ರಸಾದ್, ವೀರೇಶ್, ದಿನೇಶ್, ಶಿಕ್ಷಕ ರಾಜಶೇಖರ್, ಗಂಗಾಧರ್, ಕಾಳಪ್ಪ, ಶಿವಲಿಂಗಯ್ಯ, ಬಸವರಾಜು ಇದ್ದರು.