ಯಾದಗಿರಿ ಆಶೀರ್ವಾದ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಪತ್ರಕರ್ತರ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯರಾದ ಡಾ.ಸಿ.ಎಂ.ಪಾಟೀಲ್, ಡಾ.ಎಚ್.ಭೀಮರಡ್ಡಿ ಅವರನ್ನು ಸಂದ ಜಿಲ್ಲಾಧ್ಯ ಮಲ್ಲಪ್ಪ ಸಂಕೀನ್ ಸನ್ಮಾನಿಸಿದರು.
- ಡಾ.ಸಿ.ಎಂ.ಪಾಟೀಲ್ ಸಲಹೆ
- ಆಶೀರ್ವಾದ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ
ಯಾದಗಿರಿ: ನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಆರೋಗ್ಯದ ಕಡೆಗೂ ಗಮನಹರಿಸುವ ಅಗತ್ಯವಿದೆ ಎಂದು ಆಶೀರ್ವಾದ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎಂ. ಪಾಟೀಲ್ ಸಲಹೆ ನೀಡಿದರು.
ವೈದ್ಯರ ದಿನ ನಿಮಿತ್ತ ಆಶೀರ್ವಾದ ಆಸ್ಪತ್ರೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಡಿ ಭಾನುವಾರ ಏರ್ಪಡಿಸಿದ್ದ ಪತ್ರಕರ್ತರ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ವೈದ್ಯರೊಂದಿಗೆ ಸಮಾಲೋಚನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಕನ್ನಡಿ ಇದ್ದಂತೆ. ವ್ಯವಸ್ಥೆಯ ಲೋಪದೋಷ ಸರಿಪಡಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ನಿತ್ಯ ವ್ಯಾಯಾಮ, ಯೋಗ ಮತ್ತು ಧ್ಯಾನಕ್ಕೆ ಮೊದಲ ಆದ್ಯತೆ ನೀಡಿ ಆರೋಗ್ಯವಂತರಾಗಿ ಜೀವನ ನಡೆಸಬೇಕು ಎಂದರು.
ಶಹಾಪುರದ ದೃಷ್ಟಿ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಎಚ್. ಭೀಮರಡ್ಡಿ ಮಾತನಾಡಿ, ಮನುಷ್ಯನ ಎಲ್ಲ ಅಂಗಾಂಗಳಲ್ಲಿ ನೇತ್ರಗಳು ಅತಿ ಮುಖ್ಯವಾಗಿವೆ. ಅಂತಲೇ ನೇತ್ರಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರ ಸಂದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿದರು. ಸಂಘದಿಂದ ಆಶೀರ್ವಾದ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎಂ. ಪಾಟೀಲ್ ಮತ್ತು ದೃಷ್ಟಿ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಎಚ್. ಭೀಮರಡ್ಡಿ ಅವರನ್ನು ಸನ್ಮಾನಿಸಲಾಯಿತು. 60ಕ್ಕೂ ಅಧಿಕ ಪತ್ರಕರ್ತರು ವೈದ್ಯಕಿಯ ಪರೀೆ ಮಾಡಿಸಿಕೊಂಡರು.
"
ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುವ ಪತ್ರಕರ್ತರು ಸದಾ ಒತ್ತಡದಲ್ಲಿ ಇರುವುದನ್ನು ಕಾಣುತ್ತೇವೆ. ನಮ್ಮಲ್ಲಿ ಬರುವ ನಾಲ್ವರು ರೋಗಿಗಳಲ್ಲಿ ಒಬ್ಬರಿಗೆ ಸಕ್ಕರೆ ಕಾಯಿಲೆ ಇರುವುದು ಗಂಭೀರ ವಿಷಯ. ಇದನ್ನು ಮನಗಂಡು ಆಶೀರ್ವಾದ ಆಸ್ಪತ್ರೆ ಪತ್ರಕರ್ತರು, ಛಾಯಾಗ್ರಾಹಕರಿಗೆ ಉಚಿತ ಆರೋಗ್ಯ ಮತ್ತು ನೇತ್ರ ಶಿಬಿರ ಹಮ್ಮಿಕೊಂಡಿದೆ.
— > ಡಾ.ಸಿ.ಎಸ್.ಪಾಟೀಲ್ ಮುಖ್ಯಸ್ಥ, ಆಶೀರ್ವಾದ ಆಸ್ಪತ್ರೆ ಯಾದಗಿರಿ
"
ಮನುಷ್ಯನಿಗೆ ಬಂದಿರುವ ಮತ್ತು ಬರಬಹುದಾದ ರೋಗಗಳನ್ನು ಕಣ್ಣಿನ ತಪಾಸಣೆಯಿಂದಲೇ ಗುರುತಿಸಬಹುದಾಗಿದೆ. ಕಣ್ಣು ಬಹುಮುಖ್ಯವಾದ ಅಂಗ. ಅತಿ ಕಾಳಜಿಯಿಂದ ಕಾಪಾಡಿಕೊಳ್ಳಬೇಕು.
— > ಡಾ.ಎಚ್.ಭೀಮರಡ್ಡಿ ನೇತ್ರ ತಜ್ಞ, ಶಹಾಪುರ