ಜನರಿಗೆ ನ್ಯಾಯ ಒದಗಿಸುವಲ್ಲಿ ಪತ್ರಕರ್ತರು ಶ್ರಮ ಶ್ಲಾಘನೀಯ journalist
- ಕೇತಗಾನಹಳ್ಳಿ ಜಿ.ಕೆ. ಶ್ರೀರಾಮರೆಡ್ಡಿ ಹೇಳಿಕೆ
- ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ನೂತನ ಸದಸ್ಯರಿಗೆ ಸನ್ಮಾನ
ಶ್ರೀನಿವಾಸಪುರ: ಪತ್ರಕರ್ತರು ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡುತ್ತಾರೆ ಮತ್ತು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಹೋರಾಡುತ್ತಾರೆ. ವೈಯುಕ್ತಿಕ ಜೀವನ ಬದಿಗೊತ್ತಿ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಸಮಾಜ ಸೇವಕ ಕೇತಗಾನಹಳ್ಳಿ ಜಿ.ಕೆ. ಶ್ರೀರಾಮರೆಡ್ಡಿ ಹೇಳಿದರು. journalist
ಪಟ್ಟಣದ ಪ್ರವಾಸ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತರು ಸಮಾಜದ ಡೊಂಕುಗಳನ್ನು ತಿದ್ದುತ್ತಾರೆ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡುತ್ತಾರೆ ಮತ್ತು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಹೋರಾಡುತ್ತಾರೆ. ವೈಯುಕ್ತಿಕ ಜೀವನ ಬದಿಗೊತ್ತಿ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಶ್ರೀನಿವಾಸಪುರ ತಾಲೂಕಿನಿಂದ ಇಬ್ಬರು ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಇವರ ಸೇವೆಯನ್ನು ಗೌರವಿಸುವ ಸಲುವಾಗಿ ಸನ್ಮಾನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇವರ ಸೇವೆ ಇನ್ನಷ್ಟು ಜನತೆಗೆ ಸಿಗಲಿ ಎಂದರು.
ಕಾರ್ಯಕಾರಿ ಸಮಿತಿ ನೂತನ ಸದಸ್ಯ ಕೆ.ಎಂ. ಸೋಮಶೇಖರ್ ಮಾತನಾಡಿ, ಮುಂದಿನ ಅವಧಿಯಲ್ಲಿ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಾಲೂಕಿನ ಪತಕರ್ತರು ಹಾಗೂ ಸಂಘದ ಹಿತ ಕಾಪಾಡಲು ಬದ್ಧನಾಗಿರುತ್ತೇನೆ ಎಂದರು.
ನೂತನ ಸದಸ್ಯ ಬಿ.ಕೆ.ಉಪೇಂದ್ರ ಮಾತನಾಡಿ, ಪತಕರ್ತರ ವೃತ್ತಿ ಸುಲಭವಲ್ಲ. ಕ್ಷೇತ್ರದ ಮೂಲೆ ಮೂಲೆ ಅಲೆದು ಜನರ ಸಮಸ್ಯೆ ಆಲಿಸುತ್ತೇವೆ. ಸಾರ್ವಜನಿಕರ ಧ್ವನಿಯಾಗಿ, ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸುದ್ದಿ ಮಾಡುತ್ತೇವೆ. ರಾಜಕೀಯ ನಾಯಕರ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಕ್ಷದ ಕಾರ್ಯಗಳು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತೋರಿಸುವ ಕೆಲಸ ಮಾಡುತ್ತೇವೆ ಎಂದರು.