ಬಸವಕಲ್ಯಾಣ: ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನಗರದಲ್ಲಿ ಜೂನ್ 28 ರಂದು ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳಲು ನಿರ್ಧರಿಸಲಾಯಿತು.
ಸಮಾವೇಶದ ಹಿನ್ನೆಲೆಯಲ್ಲಿ ನಗರದ ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಾವೇಶದ ಯಶಸ್ವಿಗಾಗಿ ವಿವಿಧ ಸಮಿತಿ ರಚಿಸಿ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ನೇತೃತ್ವ ವಹಿಸಿದ್ದ ಮುಚಳಂಬನ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ, ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಜಾತಿ, ರಾಜಕೀಯ ರಹಿತ, ಭೇದಭಾವ ಇಲ್ಲದೇ ಮಠಾಧೀಶರ, ಪೂಜ್ಯರ ನೇತೃತ್ವದಲ್ಲಿ ಧರ್ಮದ ಜಾಗೃತಿಗಾಗಿ ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಮಹಾ ಸಮಾವೇಶಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ರಾಜೇಶ್ವರದ ಶ್ರೀ ನಲಿಂಗ ರುದ್ರಮುನಿ ಶಿವಾಚಾರ್ಯ, ಕಲ್ಲೂರಿನ ಶ್ರೀ ಮೃತಂಜಯ ಶಿವಾಚಾರ್ಯ, ಕಿಟ್ಟಾದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ, ಸದಾಪೂರಿನ ಶ್ರೀ ಸಿದ್ಧಲಿಂಗ ಶಿವಾಚಾರ್ಯ, ಸಿಂಧನಕೇರಾದ ಶ್ರೀ ಹೊನ್ನಲಿಂಗ ಮಹಾಸ್ವಾಮೀಜಿ, ಖಟಕಚಿಂಚೋಳಿಯ ಶ್ರೀ ಬಸವಲಿಂಗ ಮಹಾಸ್ವಾಮೀಜಿ, ಭಾಲ್ಕಿಯ ಶ್ರೀ ಕುಮಾರ ಮಹಾಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಪ್ರಮುಖರಾದ ಬಾಬು ಹೊನ್ನಾನಾಯಕ, ಶ್ರೀಶೈಲ ವಾತಡೆ, ದೀಪಕ ಗಾಯಕವಾಡ, ಸುರೇಶ ಸ್ವಾಮಿ, ಕೃಷ್ಣಾರಡ್ಡಿ, ರೇಣುಕಾ ಮಠಪತಿ, ಗಿರೀಶ ತಾಂಬೋಳೆ, ಚಂದ್ರಕಾಂತ ಗೊಗರೆ, ಬಸವಣಪ್ಪ ಲವಾರೆ, ನಾರಾಯಣರಾವ ಬುನ್ನಾ, ಶರಣು ಗುದಗೆ, ವೀರೇಶ ಗುಡ್ಡಾ, ಲ್ಮಪುತ್ರ ನಿಂಬಾಳ್ಕರ, ಬಂಡೆಪ್ಪ ಶಿವಪುರ, ಶಾಮ ಹತ್ತೆ, ಸಾಗರ ದಂಡೋತಿ, ಸಂಜು ಪಾಟೀಲ, ಸಂದೀಪ ಪಾಟೀಲ, ಸಂಗಾರೆಡ್ಡಿ ಗದಲೇಗಾಂವ, ಅಮರ ಬಡದಾಳೆ, ಸೂರ್ಯಕಾಂತ ರಾಜೋಳೆ, ದತ್ತು ಬೆಂಢೆ, ಪ್ರಭು ಕಾಡಾದಿ, ಸತೀಶ ಮೆಟಗೆ, ಅರ್ಜುನಸಿಂಗ್, ನವನಾಥ ಮೇತ್ರೆ, ಪೋಪಟ ಜಮಾದಾರ, ಸುಮೀತ ನಿಪ್ಪಾಣಿ, ಸುನೀಲ ಡಿ.ಕೆ., ಜಗದೀಶ ಅವಸೆ, ಮಹಾಂತೇಶ ಗೌರಕರ್, ಸಚಿನ ರೆಡ್ಡಿ, ಮಹೇಶ ಚಂದನಕೆರೆ, ಮೇರಾಜ ಚವ್ಹಾಣ್, ಸುನೀಲ ಮೇಕಾಲೆ ಇತರರಿದ್ದರು.
ಸಮಿತಿ ರಚನೆ: ಸಮಾವೇಶದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಜಿಪಂ ಮಾಜಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ (ಕಾರ್ಯಾಧ್ಯಕ್ಷ), ಸಿದ್ರಾಮ ಗುದಗೆ, ಅನಿಲ ಭುಸಾರೆ, ಶಿವರಾಜ ತಾಟೆ (ಉಪಾಧ್ಯಕ್ಷರು), ರವಿ ನಾವದ್ಗೇಕರ್, ಲೋಕೇಶ ಮೋಳಕೇರೆ, ಪ್ರವಿಣ ಚಳಕಾಪುರೆ (ಪ್ರಧಾನ ಕಾರ್ಯದರ್ಶಿಗಳು) ಅವರನ್ನು ಆಯ್ಕೆ ಮಾಡಲಾಯಿತು.