ಸುರಪುರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಕಲಾ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಶಂಕರನಾಯಕ, ದೇವಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಬಲಭೀಮ ನಾಯಕ, ಶರಣು ನಾಯಕ ಬೈರಿಮರಡ್ಡಿ ಇತರರಿದ್ದರು. 
ರಾಜ್ಯ

ಕಲೆ-ಸಂಸ್ಕೃತಿ ಸಂರಕ್ಷಣೆಗೆ ಕೈಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ಕರೆ
  • ಸುರಪುರದಲ್ಲಿ ಕಲಾ ಸಿರಿ ಪ್ರಶಸ್ತಿ ಪ್ರದಾನ
ಸುರಪುರ: ಬದಲಾಗುತ್ತಿರುವ ಆಧುನಿಕ ಕಾಲಟ್ಟದಲ್ಲಿ ಅಳಿವಿನ ಅಂಚಿನಲ್ಲಿರುವ ನಾಟಕ, ಭರತನಾಟ್ಯ ಹಾಗೂ ಸಂಗೀತದಂತಹ ಸಾಂಸತಿಕ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಹೇಳಿದರು.
ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ನಾಟ್ಯ ಹವ್ಯಾಸಿ ಕಲಾವಿದರ ಸಂ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡ ಸಂಗೀತ ಸಾಂಸತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅನೇಕ ಗ್ರಾಮೀಣ ಕಲೆಗಳು ಹಾಗೂ ಸಾಂಸತಿಕ ಆಚರಣೆ ಮರೆಯಾಗುತ್ತಿವೆ. ಹೀಗಾಗಿ ಅವುಗಳ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.
ಈ ಹಿಂದೆ ಗ್ರಾಮದ ಜಾತ್ರೆ, ಹಬ್ಬಗಳಲ್ಲಿ ನಾಟಕಗಳು ಮತ್ತು ಸಾಂಸತಿಕ ಕಾರ್ಯಕ್ರಮ ಕಡ್ಡಾಯವಾಗಿ ಇರುತ್ತಿದ್ದವು. ಜನರು ತಮ್ಮ ದಿನನಿತ್ಯದ ಒತ್ತಡ, ಕಷ್ಟ&ಸುಖಗಳನ್ನು ಮರೆತು ಇಂತಹ ನಾಟಕಗಳನ್ನು ವೀಸಿ ನೆಮ್ಮದಿ ಪಡೆಯುತ್ತಿದ್ದರು. ಆದರೆ ಇಂದು ಇಂತಹ ಕಲೆಗಳು ಅಳಿದು ಹೋಗುತ್ತಿವೆ. ಇಂತಹ ಸಂದರ್ಭದಲ್ಲೂ ಛಲ ಬಿಡದೆ ಕಲೆ ಹಾಗೂ ಸಂಸತಿಯನ್ನು ಉಳಿಸಿಕೊಂಡು ಹೋಗುತ್ತಿರುವ ಬೈರಿಮಡ್ಡಿ ಸಹೋದರರ ತಂಡದ ಕಾರ್ಯ ನಿಜಕ್ಕೂ ಶ್ಲಾನೀಯ. ಸಗರನಾಡಿನ ಸಾಂಸತಿಕ ರಾಯಭಾರಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ದಿ.ರಾಜಾ ಮದನಗೋಪಾಲ ನಾಯಕ ಅವರ ಕಾಲದಲ್ಲಿ ಇಂತಹ ಸಾಂಸತಿಕ ಕಾರ್ಯಕ್ರಮ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದವು ಎಂದು ಸ್ಮರಿಸಿದರು.
ಬಸವಪ್ರಭು ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಸಂದ ಸಂಟಕರಾದ ರವಿ ನಾಯಕ ಬೈರಿಮರಡ್ಡಿ ಮತ್ತು ತಂಡದವರು ಈ ಭಾಗದ ಹವ್ಯಾಸಿ ಕಲಾವಿದರನ್ನು ಗುರುತಿಸಿ, ಅವರಿಗೆ ವೇದಿಕೆ ಹಾಗೂ ಆರ್ಥಿಕ ಸಹಕಾರ ನೀಡುವ ಮೂಲಕ ಕಲಾ ಸಂಸತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಕೊರತೆ ಇದ್ದರೂ, ರಂಗ ಕಲಾವಿದ ಬಲಭೀಮ ನಾಯಕ ಬೈರಿಮಡ್ಡಿ ಮತ್ತು ಅವರ ಸಹೋದರರ ಬೆಂಬಲದಿಂದ ಹವ್ಯಾಸಿ ರಂಗಭೂಮಿ ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು.
ಈ ವೇಳೆ 10 ಕಲಾವಿದರಿಗೆ ಕಲಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡೋಹರ್​ ಕಕ್ಕಯ್ಯ ಪ್ರಶಸ್ತಿ ಪುರಸತ ಗಂಗಾಧರ ಹುಲಕಲ್​ ಮತ್ತು ಆರಾಧ್ಯ ವಾಣಿ ದಿನಪತ್ರಿಕೆ ಸಂಪಾದಕ ರಲಿಂಗಯ್ಯ ಹಿರೇಮಠಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಯುವ ಮುಖಂಡ ಶಂಕರನಾಯಕ ಅಧ್ಯಕ್ಷತೆ ವಹಿಸಿದ್ದರು. ದೇವಪ್ಪ ಪೂಜಾರಿ, ಮಾಳಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಬಲಭೀಮ ನಾಯಕ ಬೈರಿಮರಡ್ಡಿ, ಶರಣು ನಾಯಕ ಬೈರಿಮರಡ್ಡಿ, ಸಂದ ಅಧ್ಯಕ್ಷ ರವಿ ನಾಯಕ ಬೈರಿಮರಡ್ಡಿ, ಮಲ್ಲೇಶಿ ಕವಿ ಸೇರಿ ಇನ್ನಿತರರು ವೇದಿಕೆಯಲ್ಲಿದ್ದರು. ಪ್ರಮುಖರಾದ ವೆಂಕಟೇಶ ನಾಯಕ ಬೈರಿಮಡ್ಡಿ ಸ್ವಾಗತಿಸಿದರು. ರೇಣುಕಾ ಶೆಳ್ಳಗಿ ಪ್ರಾರ್ಥಿಸಿದರು. ಮಲ್ಲು ಬಾದ್ಯಾಪುರ ನಿರೂಪಿಸಿ ವಂದಿಸಿದರು.