ಬೆಳಗಾವಿಯ ಕೆಎಲ್‌ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳು ಗೌರವ ನಮನ ಸಲ್ಲಿಸಿದರು. ಡಾ.ಜ್ಯೋತಿ ಕವಳೇಕರ, ವಿ.ಸಿ.ಕಾಮಗೋಳ, ಡಾ.ಶಿವಾನಂದ ಬುಲಬುಲಿ, ಪ್ರೊ.ಶಶಿಕಾಂತ ತಾರದಾಳೆ ಇತರರಿದ್ದರು. 
ರಾಜ್ಯ

ವಿಕಸಿತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಪ್ರತಿಯಬ್ಬ ಭಾರತೀಯ ದೇಶದ ಬಗ್ಗೆ ಗೌರವ ಹೋಂದಬೇಕು. ದೇಶದ ಏಕತೆ ಮತ್ತು ಅಖಂಡತೆ ಕಾಪಾಡುವ ಜವಾಬ್ದಾರಿ ಯುವಶಕ್ತಿ ಮೇಲಿದೆ ಎಂದು ಕೆಎಲ್‌ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ ಅಭಿಪ್ರಾಯಪಟ್ಟರು.
ನಗರದ ಕೆಎಲ್‌ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬಾರಿಯ ಸ್ವಾತಂತ್ರ್ಯೊತ್ಸವ ಹಿಂದಿನ ಆಚರಣೆಗಿಂತ ಭಿನ್ನ ಹಾಗೂ ಐತಿಹಾಸಿಕವಾಗಿದೆ. ಈ ಬಾರಿ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಹಾಗೂ ವಿಕಸಿತ ಭಾರತ 2047 ನಿರ್ಮಾಣದಲ್ಲಿ ಯುವಶಕ್ತಿ ಎಂಬ ಎರಡು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕತವಾಗಿದೆ. ಯುವಕರು ವಿಕಸಿತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಸಿ.ಕಾಮಗೋಳ, ಎನ್‌ಸಿಸಿ ಅಧಿಕಾರಿ ಡಾ.ಶಿವಾನಂದ ಬುಲಬುಲಿ, ಪ್ರೊ.ಶಶಿಕಾಂತ ತಾರದಾಳೆ ಇತರರಿದ್ದರು.