ಆರೋಗ್ಯವಂತ ಸಮಾಜ ನಿಮಾರ್ಣಕ್ಕೆ ಕೈಜೋಡಿಸಿ society 
ರಾಜ್ಯ

ಆರೋಗ್ಯವಂತ ಸಮಾಜ ನಿಮಾರ್ಣಕ್ಕೆ ಕೈಜೋಡಿಸಿ society

ರಾಯಲ್ಪಾಡು: ಇಂದಿನ ಡಿಜಿಟಲ್​ ಯುಗದಲ್ಲಿ ಯುವಶಕ್ತಿಯು ಮೊಬೈಲ್​ ಮತ್ತು ದುಶ್ಚಟಗಳ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಕ್ರೀಡೆ ಎಂಬುದು ಕೇವಲ ಸೋಲು&ಗೆಲುವಿಗೆ ಸೀಮಿತವಲ್ಲ ಎಂದು ಗೌನಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಸೇವ್ಯಾನಾಯಕ್​ ತಿಳಿಸಿದರು.society
ಹೋಬಳಿಯ ಗೌನಿಪಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚಿಗೆ ಕೊಡಿಚೆರುವು ಸಂಕಲ್ಪ ಯುವಕರ ಸಂಘ ಮತ್ತು ಕೋಲಾರದ ಮೈ ಭಾರತ್​ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯು ಶಿಸ್ತು, ಏಕಾಗ್ರತೆ ಮತ್ತು ದೈಹಿಕ ಸದೃಢತೆ ಕಲಿಸುತ್ತದೆ. ಪ್ರತಿ ವಿದ್ಯಾರ್ಥಿಯೂ ಕನಿಷ್ಠ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತಿ ಹೊಂದಬೇಕು ಮತ್ತು ಆರೋಗ್ಯವಂತ ಸಮಾಜ ನಿಮಾರ್ಣಕ್ಕೆ ಕೈಜೋಡಿಸಬೇಕು ಎಂದರು.
ಸಂಕಲ್ಪ ಯುವಕರ ಸಂಘದ ಅಧ್ಯಕ್ಷ ಗಣೇಶ್​ ಮಾತನಾಡಿ, ಮರೆಯಾಗುತ್ತಿರುವ ಮಣ್ಣಿನ ಕ್ರೀಡೆಗಳ ಕಬಡ್ಡಿ, ಖೋ-ಖೋ ಮತ್ತು ಇತರ ದೇಶಿ ಆಟಗಳು ಕೇವಲ ಮನೋರಂಜನೆಯಲ್ಲ, ಅವು ನಮ್ಮ ಸಂಸತಿಯ ಪ್ರತಿಬಂಬ. ಮುಂದಿನ ಪೀಳಿಗೆಗೆ ಈ ಆಟಗಳ ಮಹತ್ವ ತಿಳಿಸುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಕ್ರೀಡಾಕೂಟಗಳು ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುತ್ತವೆ ಎಂದರು.
ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಯುವ ಸಂಘಟನೆಯ ಪದಾಧಿಕಾರಿಗಳು ಇದ್ದರು.