ಗುಂಡ್ಲುಪೇಟೆ: ವಿದ್ಯಾರ್ಥಿಗಳುಪ್ರಸ್ತುತ ಕಾಲಘಟ್ಟದಲ್ಲಿ ಉದ್ಯೋಗಗಿಟ್ಟಿಸಿಕೊಳ್ಳಲು ಜಿಟಿಟಿಸಿತರಬೇತಿ ಸಂಸ್ಥೆಯು ಉತ್ತಮ ಅವಕಾಶಕಲ್ಪಿಸುತ್ತಿದೆ ಎಂದು ತಹಸೀಲ್ದಾರ್ಎಂ.ಎಸ್.ತನ್ಮಯ್ಹೇಳಿದರು.
ಪಟ್ಟಣದಸರಕಾರಿ ಉಪಕರಣಗಾರ ಮತ್ತು ತರಬೇತಿಕೇಂದ್ರದಲ್ಲಿ ಪ್ರಥಮ ವರ್ಷದಡಿಪ್ಲೊಮಾ ಕೋರ್ಸ್‌ಗಳ ಪ್ರಾರಂಭೋತ್ಸವಮತ್ತು ಪೋಷಕರ ಸಭೆ ಉದ್ಘಾಟಿಸಿಅವರು ಮಾತನಾಡಿದರು.
ಕೈಗಾರಿಕೆಗಳಲ್ಲಿಅಗತ್ಯವಿರುವ ನುರಿತ ಕಾರ್ಮಿಕರಪೂರೈಕೆಯಲ್ಲಿ ಉಪಕರಣಗಾರ ಮತ್ತುತರಬೇತಿ ಕೇಂದ್ರವು ಪ್ರಮುಖ ಪಾತ್ರವಹಿಸುತ್ತಿದೆ. ಇಂಜಿನಿಯರಿಂಗ್ಶಿಕ್ಷಣ ಸಂಸ್ಥೆಗಳಿಗಿಂತ ಉನ್ನತಮಟ್ಟದ ಯಂತ್ರೋಪಕರಣ ಮತ್ತುಸೌಲಭ್ಯಗಳು ವಿದ್ಯಾರ್ಥಿಗಳಿಗೆಲಭ್ಯವಿರುವ ಹಿನ್ನೆಲೆಯಲ್ಲಿಇಂಜಿನಿಯರಿಂಗ್ ಶಿಕ್ಷಣ ಪಡೆಯದೆನೇರವಾಗಿ ಕೈಗಾರಿಕೆಯಲ್ಲಿ ಉದ್ಯೋಗಪಡೆಯಲು ಸಹಕಾರಿಯಾಗಿದೆ.ಅಲ್ಲದೆ ವಿದ್ಯಾರ್ಥಿಗಳುಸ್ವಯಂ ಉದ್ಯೋಗ ಪಡೆಯಲು ಕೇಂದ್ರವುಪೂರಕವಾಗಿದೆ. ಈವಿಷಯವನ್ನು ತಿಳಿದು ವಿದ್ಯಾರ್ಥಿಗಳುಮತ್ತು ಪೋಷಕರು ಸೌಲಭ್ಯ ಪಡೆದುಕೊಳ್ಳಬೇಕುಎಂದು ಸಲಹೆ ನೀಡಿದರು.
ಜಿಟಿಟಿಸಿತರಬೇತಿ ಕೇಂದ್ರದ ಪ್ರಾಂಶುಪಾಲಎಸ್.ವಿನಯ ಮಾತನಾಡಿ,ಗ್ರಾಮೀಣ ಭಾಗದವಿದ್ಯಾರ್ಥಿಗಳಿಗೆ ತಾಂತ್ರಿಕಶಿಕ್ಷಣ ನೀಡುವ ಉದ್ದೇಶದಿಂದ2007ರಲ್ಲಿ ಶಾಸಕರಾಗಿದ್ದಎಚ್.ಎಸ್.ಮಹದೇವಪ್ರಸಾದ್ಅವರು ಗುಂಡ್ಲುಪೇಟೆಯಲ್ಲಿಸ್ಥಾಪಿಸಿದ ಸರಕಾರಿ ಉಪಕರಣಗಾರಮತ್ತು ತರಬೇತಿ ಕೇಂದ್ರವು ಕರ್ನಾಟಕಸರ್ಕಾರ ಕೌಶಲಾಭಿವೃದ್ಧಿ ಉದ್ಯಮಶೀಲತೆಮತ್ತು ಜೀವನೋಪಯ ಇಲಾಖೆಯ ಅಧೀನದಲ್ಲಿಕಾರ್ಯನಿರ್ವಹಿಸುತ್ತಿದ್ದು,ಡಿಪ್ಲೊಮಾ ಇನ್ ಟೂಲ್ಅಂಡ್ ಡೈ ಮೇಕಿಂಗ್, ಡಿಪ್ಲೊಮಾಇನ್ ಎಲೆಕ್ಟ್ರಿಕಲ್ ಅಂಡ್ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್,ಡಿಪ್ಲೊಮಾ ಇನ್ ಮೆಕ್ರೋನಿಕ್ಸ್ತರಬೇತಿ ನೀಡುತ್ತಿದೆ. 3 ವರ್ಷದತರಬೇತಿ ಮತ್ತು 1 ವರ್ಷದಕಡ್ಡಾಯ ಕೈಗಾರಿಕಾ ತರಬೇತಿಯನ್ನುಒಳಗೊಂಡಿರುವ ಈ ತರಬೇತಿ ಕೋರ್ಸ್‌ಗಳುನೂರರಷ್ಟು ಉದ್ಯೋಗ ಅವಕಾಶಕಲ್ಪಿಸುತ್ತಿವೆ ಎಂದು ಮಾಹಿತಿನೀಡಿದರು.
ಈವರೆಗೆಸುಮಾರು 750ಕ್ಕೂ ಹೆಚ್ಚುವಿದ್ಯಾರ್ಥಿಗಳು ತರಬೇತಿಪೂರ್ಣಗೊಳಿಸಿದ್ದು, ರಾಜ್ಯದೇಶ ವಿದೇಶಗಳಲ್ಲಿಯೂಕಾರ್ಯನಿರ್ವಹಿಸುತ್ತಿದ್ದಾರೆ.ಅಲ್ಲದೆ ಇನ್ನು ಕೆಲವರುಉನ್ನತ ಶಿಕ್ಷಣವನ್ನು ನಡೆಸುತ್ತಿದ್ದಾರೆ.2026-27ನೇ ಸಾಲಿನ ಪ್ರವೇಶಾತಿಯುಪ್ರಾರಂಭಗೊಂಡಿದ್ದು,ಎಸ್ಸೆಸ್ಸೆಲ್ಸಿ ಮತ್ತುಪಿಯು ಉತ್ತೀರ್ಣರಾಗಿರುವವಿದ್ಯಾರ್ಥಿಗಳು ಪ್ರವೇಶಾತಿಪಡೆದುಕೊಳ್ಳಬಹುದು ಎಂದು ಮಾಹಿತಿನೀಡಿದರು. ಈ ಸಂದರ್ಭದಲ್ಲಿಉಪನ್ಯಾಸಕರು, ತರಬೇತಿಅಧಿಕಾರಿಗಳು ಮತ್ತು ಪೋಷಕರುಹಾಜರಿದ್ದರು.