- ಬೀದರ್ ಲಿಂಗರಾಜ ಅಪ್ಪಾ ಇಂಜಿನಿಯರಿಂಗ್ ಕಾಲೇಜು
ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಬೀದರ್ನ ಲಿಂಗರಾಜ ಅಪ್ಪಾ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಆವರಣದಲ್ಲಿ ಮೇ 30ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.
ಉದ್ಯೋಗಾಕಾಂಗಳು ಉದ್ಯೋಗ ನೀಡುವ ಕಂಪನಿಗಳೊಂದಿಗೆ ಮುಖಾಮುಖಿಯಾಗಿ ಭೇಟಿಯಾಗುವುದು, ವಿಭಿನ್ನ ವೃತ್ತಿ ಅವಕಾಶ ಅನ್ವೇಷಿಸುವುದು ಮತ್ತು ಸರಿಯಾದ ರೀತಿಯ ಉದ್ಯೋಗಾವಕಾಶ ಆಯ್ಕೆ ಮಾಡಲು ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ವೃತ್ತಿಪರರೊಂದಿಗೆ ಸಂವಹನ ನಡೆಸುವುದು ಈ ಉದ್ಯೋಗ ಮೇಳದ ಪ್ರಮುಖ ಉದ್ದೇಶ.
ಈ ಕುರಿತು ಹೇಳಿಕೆ ನೀಡಿರುವ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ, ಈ ಮೇಳವು ಕಲ್ಯಾಣ ಕರ್ನಾಟಕ ಪ್ರದೇಶದ, ವಿಶೇಷವಾಗಿ ಬೀದರ್ ಜಿಲ್ಲೆಯ ಅರ್ಹ ಆಕಾಂಗಳಿಗೆ ಹೊಸ ಉದ್ಯೋಗಾವಕಾಶ ತೆರೆಯುತ್ತದೆ ಎಂದು ತಿಳಿಸಿದ್ದಾರೆ.
ಬಿ.ಇ. ಹಾಗೂ ಎಂಟೆಕ್ ಕೋರ್ಸ್ ಪೂರ್ಣಗೊಳಿಸಿದ ಮತ್ತು ಅನುಸರಿಸುತ್ತಿರುವ ಅಭ್ಯರ್ಥಿಗಳು, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್, ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೆಷನ್, ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್, ಬಿ.ಕಾಂ, ಬಿಎಸ್ಸಿ, ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್, ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೆಷನ್, ಐಟಿಐ ಹಾಗೂ ವಿವಿಧ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅರ್ಹರು ಎಂದು ತಿಳಿಸಿದ್ದಾರೆ.
ಸುಮಾರು 40ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಇನ್ಫೋಸಿಸ್, ಟೆಕ್ ಮಹೀಂದ್ರಾ, ಸದಲ್ಯಾಂರ್ಡ್, ಕ್ಯಾಡ್ಮ್ಯಾಕ್ಸ್ ಸಲ್ಯೂಷನ್ಸ್, ಟಫೆ, ಹುಂಡೈ, 24)(7 ಎಐ, ಮತ್ತು ಇತರ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಪ್ರಮುಖ ಕಂಪನಿಗಳು ಭಾಗವಹಿಸಲಿವೆ. ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅಥವಾ 30ರಂದು ಕಾಲೇಜಿನ ಆವರಣದ ಸ್ಥಳದಲ್ಲಿಯೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ವಿವರಗಳಿಗೆ ಡಾ.ವಿನಿತಾ ಪಾಟೀಲ್, ಮೊ.ಸಂಖ್ಯೆ 8792506036 ಸಂಪರ್ಕಿಸಬಹುದು.
ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರೂ ಆದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ. ದಾಾಯಿಣಿ ಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು ಲಿಂಗರಾಜ ಅಪ್ಪಾ ಇಂಜಿನಿಯರಿಂಗ್ ಕಾಲೇಜಿನ ತಂಡಕ್ಕೆ ಈ ಉದ್ಯೋಗ ಮೇಳ ಆಯೋಜಿಸಿರುವುದಕ್ಕೆ ಆಶೀರ್ವದಿಸಿ, ಅಭಿನಂದನೆ ಸಲ್ಲಿಸಿದ್ದಾರೆ.