ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜದಿಂದ ಆಯ್ದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಉಚಿತ ವಿತರಣೆಗೆ ಕಲಬುರಗಿಯಲ್ಲಿ ಶುಕ್ರವರ ಚಾಲನೆ ನೀಡಲಾಯಿತು. 
ರಾಜ್ಯ

ಬನಶಂಕರಿ ಸಮಾಜದಿಂದ ಜ್ಞಾನ ದೀವಿಗೆ

ಪ್ರಮುಖ ಮುಖ್ಯಾಂಶಗಳು

  • ನೂರಾರು ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ, ಕಂಪ್ಯೂಟರ್​, ಪಠ್ಯೋಪಕರಣ ವಿತರಣೆ
ಕಲಬುರಗಿ: ಸ್ಪರ್ಧಾತ್ಮಕ ಪರೀಕ್ಷೆ, ಎಸ್ಸೆಸ್ಸೆಲ್ಸಿ-ಪಿಯುಸಿ ಪಠ್ಯಕ್ರಮ ಜ್ಞಾನದ ಜತೆಗೆ ಸಮಗ್ರ ಅಧ್ಯಯನಕ್ಕೆ ಮಾಹಿತಿ ಒದಗಿಸುವ ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಂಚಿಕೆಯನ್ನು ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜದಿಂದ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವರ್ಷವಿಡೀ ಉಚಿತ ಹಂಚಿ ಜ್ಞಾನದ ಬೀಜ ಬಿತ್ತುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ನಗರದ ಪತ್ರಿಕಾ ಭವನದಲ್ಲಿ ವಿಜಯವಾಣಿ ಸಹಯೋಗದಡಿ ಬನಶಂಕರಿ ಮಹಿಳಾ ಸಮಾಜ ಶುಕ್ರವಾರ ಏರ್ಪಡಿಸಿದ್ದ ಅಪರೂಪದ ಕಾರ್ಯಕ್ರಮದಲ್ಲಿ ಜಿಲ್ಲೆಯ 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತಲಾ ಐದು ನೋಟ್​ಬುಕ್​, ಸ್ಕೂಲ್​ಬ್ಯಾಗ್​, ನೀರಿನ ಸ್ಟೀಲ್​ ಬಾಟಲಿ ಜತೆ ಹಾಜರಿದ್ದ ಜೇವರ್ಗಿ ಕಾಲನಿ ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು, ಯಡ್ರಾಮಿಯ ಸರ್ಕಾರಿ ಕನ್ಯಾ ಮತ್ತು ಬಾಲಕರ ಪ್ರೌಢ ಶಾಲೆ, ಸೇಡಂ ಸರ್ಕಾರಿ ಪ್ರೌಢಶಾಲೆ, ಚಿಂಚೋಳಿ ಸರ್ಕಾರಿ ಕನ್ಯಾ ಪ್ರೌಢ ಶಾಲೆ, ಉದನೂರದ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಮಕ್ಕಳಿಗೆ ಅಧ್ಯಯನ ಸಾಮಗ್ರಿ ವಿತರಿಸಲಾಯಿತು.
ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯೆ ಆಶಾ ಪುರುಷೋತ್ತಮ ಮಾತನಾಡಿ, ಬನಶಂಕರಿ ಮಹಿಳಾ ಸಮಾಜ ಶಾಂತಾ ರಾಮಸ್ವಾಮಿ ನೇತೃತ್ವದಲ್ಲಿ ಬಡವರು, ಹಿಂದುಳಿದ, ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ನಿರಂತರ ಬೆಂಬಲ, ಪ್ರೋತ್ಸಾಹ ನೀಡುತ್ತ ಬಂದಿದೆ. ಶಾಲಾ ಕಟ್ಟಡ, ಆನೆಗಳಿಗೆ ನೀರಿನ ವ್ಯವಸ್ಥೆ, ಪಠ್ಯ ಉಪಕರಣ ಸೇರಿ ವಿವಿಧ ಸೇವೆಯನ್ನು ಶಾಂತಾ ಮೇಡಂ ಮಾಡುತ್ತಿದ್ದಾರೆ ಎಂದರು.
ಸಮಾಜದ ಅಧ್ಯಕ್ಷೆ ಶಾಂತಾ ರಾಮಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ವಿಜಯವಾಣಿ ಪ್ರಸರಣ ವಿಭಾಗದ ಜಿಎಂ ವಿದ್ಯಾಧರ ಪೂಜಾರ, ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ, ಮುಖ್ಯ ವರದಿಗಾರ ಜಯತೀರ್ಥ ಪಾಟೀಲ್​, ಜಾಹೀರಾತು ವಿಭಾಗದ ವ್ಯವಸ್ಥಾಪಕ ಅರುಣ ಗಡ್ಡದ ಇತರರಿದ್ದರು. ರಮೇಶ ಮೇಳಕುಂದಾ ನಿರೂಪಣೆ ಮಾಡಿದರು.
ಶಾಂತಾ ರಾಮಸ್ವಾಮಿ ಆಶಯ
ಗ್ರಾಮೀಣ ಭಾರತಕ್ಕೆ ಶಕ್ತಿ ತುಂಬೋಣ
ಬನಶಂಕರಿ ಮಹಿಳಾ ಸಮಾಜ ನಾಲ್ಕೆದು ದಶಕದಿಂದ ಸಮಾಜಮುಖಿ ಕೆಲಸ ಮಾಡುತ್ತಿದ್ದು, ಸಹಸ್ರಾರು ಜನರು ಸಾಥ್​ ನೀಡುತ್ತಿದ್ದಾರೆ. ಸಮಾಜದ ಜತೆಗೆ ಲಕ್ಷ್ಮೀದೇವಿ ಮಹಿಳಾ ಟ್ರಸ್ಟ್​ ಸ್ಥಾಪಿಸಿ ಮಹಿಳೆ ಮತ್ತು ಮಕ್ಕಳಿಗಾಗಿ ನೆರವು ನೀಡಲಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಿ ಶಕ್ತಿ ತುಂಬಲಾಗುತ್ತಿದೆ ಎಂದು ಸಮಾಜದ ಅಧ್ಯೆ ಶಾಂತಾ ರಾಮಸ್ವಾಮಿ ಹೇಳಿದರು. ಗುಡಿಸಿಲಿನಲ್ಲಿ ಓದಿದ ಸರ್ವಜ್ಞ, ಕುರಿ ಕಾಯುವ ಕಾಳಿದಾಸ, ಬೋಟ್​ ಸಿದ್ಧಪಡಿಸುವವನ ಮಗ ಕಲಾಂ, ತಳಮಟ್ಟದಿಂದ ಬಂದ ಅಂಬೇಡ್ಕರ್​ ಮಹಾತ್ಮರಾಗಿದ್ದಾರೆ. ನಾವೆಲ್ಲರೂ ಅವರನ್ನು ಆದರ್ಶವಾಗಿ ಇಟ್ಟುಕೊಂಡು ಸಾಗಬೇಕು. ಯೋಧ, ಅನ್ನದಾತರು ಮತ್ತು ಹೆತ್ತವರನ್ನು ಮರೆಯಬಾರದು. ಗುರುಗಳನ್ನು ಆದರ್ಶವಾಗಿ ಇಟ್ಟುಕೊಂಡು ಸಾಧಕರಾಗಬೇಕು ಎಂದು ಕಿವಿಮಾತು ಹೇಳಿದರು.
ಕಂಪ್ಯೂಟರ್​ ವಿತರಣೆ
ಯಡ್ರಾಮಿ, ಸೇಡಂ, ಕಲಬುರಗಿ ಜೇವರ್ಗಿ ಕಾಲನಿಯ ಸರ್ಕಾರಿ ಶಾಲೆಗೆ ತಲಾ ಒಂದು ಕಂಪ್ಯೂಟರ್​ (ಒಟ್ಟು ಮೂರು ಶಾಲೆ), ಚಿಂಚೋಳಿ ಶಾಲೆಗೆ ನೀರು ಶುದ್ಧೀಕರಣ ಯಂತ್ರ, ಉದನೂರ ಅಪ್ಪಾಜಿ ಗುರುಕುಲಕ್ಕೆ ಪ್ರಿಂಟರ್​ ಅನ್ನು ಬನಶಂಕರಿ ಮಹಿಳಾ ಸಮಾಜದಿಂದ ವಿತರಿಸಲಾಯಿತು.
"

ಕಲಬುರಗಿ ಜಿಲ್ಲೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಜ್ಞಾನದ ಬುತ್ತಿಯಾಗಿದ್ದು, ಉಚಿತವಾಗಿ ಪಡೆದು ಅಧ್ಯಯನ ಮಾಡಿ ಜಿಲ್ಲೆಗೆ ಟಾಪ್​ ಬಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ 25 ಸಾವಿರ ರೂ. ಬಹುಮಾನ ಸಮಾಜ ನೀಡಲಿದೆ. ನನಗೆ ಲಂಡನ್​, ಶ್ರೀಲಂಕಾ ಸೇರಿ ಹಲವು ವಿಶ್ವವಿದ್ಯಾಲಯಗಳು ಪ್ರಶಸ್ತಿ ನೀಡಿವೆ. ಆದರೆ ಅದೆಲ್ಲಕ್ಕಿಂತ ಮಿಗಿಲು ನಮ್ಮ ಕುಟುಂಬ, ಸಮಾಜ, ವಿದ್ಯಾರ್ಥಿಗಳ ಖುಷಿ.

— > ಶಾಂತಾ ರಾಮಸ್ವಾಮಿ ಅಧ್ಯೆಕ್ಷ, ಬನಶಂಕರಿ ಮಹಿಳಾ ಸಮಾಜ ಬೆಂಗಳೂರು
"

ಸರ್ಕಾರಿ ಶಾಲೆ ಮಕ್ಕಳಲ್ಲಿ ಅಪಾರ ಶಕ್ತಿ ಇದೆ. ಈ ಭಾಗದಲ್ಲಿ ಲಿತಾಂಶ ಕಡಿಮೆ ಇದೆ ಎಂದು ಬನಶಂಕರಿ ಮಹಿಳಾ ಸಮಾಜದ ಶಾಂತಾ ರಾಮಸ್ವಾಮಿ ಅವರು ವಿಶೇಷ ಕಾಳಜಿಯೊಂದಿಗೆ ಸರ್ಕಾರಿ ಶಾಲೆ ಮಕ್ಕಳ ನೆರವಿಗೆ ನಿಂತಿದ್ದಾರೆ. ಇಲ್ಲಿನ ಮಕ್ಕಳಲ್ಲಿ ಪ್ರತಿಭೆ ಇದ್ದು, ಮುಂದಿನ ವರ್ಷದ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಟಾಪ್​ ಪಡೆದ ವಿದ್ಯಾರ್ಥಿಗಳಿಗೆ ವೈಯಕ್ತಿಕ ನಗದು ಬಹುಮಾನ ನೀಡುತ್ತೇನೆ.

— > ವಿದ್ಯಾಧರ ಪೂಜಾರ ಜಿಎಂ, ವಿಜಯವಾಣಿ ಪ್ರಸರಣ ವಿಭಾಗ ಬೆಂಗಳೂರು
"

ವಾರದಿಂದ ಬನಶಂಕರಿ ಮಹಿಳಾ ಸಮಾಜದವರ ಮೂಲಕ ವಿಜಯವಾಣಿ ವಿದ್ಯಾರ್ಥಿ ಮಿತ್ರ ನಮ್ಮ ಶಾಲೆಗೆ ಬರುತ್ತಿದ್ದು, ನನ್ನ ಸ್ನೇಹಿತನಾಗಿ ಬಿಟ್ಟಿದೆ. ನಾವು ಕಾಣುವ ಕನಸು ನನಸು ಮಾಡುವ ಶಕ್ತಿ ವಿದ್ಯಾರ್ಥಿ ಮಿತ್ರಕ್ಕಿದೆ. ಸರ್ಕಾರಿ ಶಾಲೆ ಶಿಕ್ಷಕರು ಹೈಕ್ಲಾಸ್​ ಇದ್ದು, ವಿಜಯವಾಣಿ ಮಿತ್ರದ ಸಹಕಾರದಿಂದ ಇನ್ನಷ್ಟು ಬಲ ಬಂದಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಗೆ ಇದು ಸಹಕಾರಿ ಆಗಿದೆ.

— > ನಾಗೇಶ ನಾಟೀಕಾರ ವಿದ್ಯಾರ್ಥಿ, ಸರ್ಕಾರಿ ಪ್ರೌಢ ಶಾಲೆ ಜೇವರ್ಗಿ ಕಾಲನಿ
"

ವಿಜಯವಾಣಿ ಸಮಾಜದ ಕನ್ನಡಿಯಾಗಿದೆ. ಸುಭಾಷಿತದೊಂದಿಗೆ ಆರಂಭವಾಗಿ ಇಡೀ ದಿನದ ಸುದ್ದಿ ಜತೆಗೆ ಜ್ಞಾನ ನೀಡುವ ವಿದ್ಯಾರ್ಥಿ ಮಿತ್ರ ಸಹ ನಮ್ಮ ಅಧ್ಯಯನಕ್ಕೆ ಬಲ ತುಂಬುತ್ತಿದೆ.

— > ಪ್ರೀತಿ ವಿದ್ಯಾರ್ಥಿನಿ, ಸರ್ಕಾರಿ ಪದವಿಪೂರ್ವ ಕಾಲೇಜು ಜೇವರ್ಗಿ ಕಾಲನಿ
"

ಬನಶಂಕರಿ ಮಹಿಳಾ ಸಮಾಜದವರು ನೆರವಿಗೆ ನಿಂತಿರುವುದು ಬಹುದೊಡ್ಡ ಸತ್ಕಾರ್ಯ. ಶಾಂತಾ ರಾಮಸ್ವಾಮಿ ಅವರು ದೂರದ ಬೆಂಗಳೂರಿನಿಂದ ಬಂದು ನಮಗೆ ಸಹಾಯ ಮಾಡುತ್ತಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ.

— > ಶ್ವೇತಾ ನರಸಪ್ಪ ವಿದ್ಯಾರ್ಥಿನಿ, ಚಿಂಚೋಳಿ ಸರ್ಕಾರಿ ಕನ್ಯಾ ಪ್ರೌಢ ಶಾಲೆ